ಜನಜಾಗೃತಿ ಮೂಡಿಸುವ ಸಮ್ಮಿಲನ ಕಿರುಚಿತ್ರ ಬಿಡುಗಡೆ ಸಮಾರಂಭ

ಬಳ್ಳಾರಿ ಡಿ 31 : ನಗರದ ರಾಘವ ಕಲಾಮಂದಿರದಲ್ಲಿ ನಿನ್ನೆ ಸಂಜೆ ಸಮ್ಮಿಲನ ಕಿರು ಚಿತ್ರ ಬಿಡುಗಡೆ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಪಿಡಿ ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಶರತ್ ಕುಮಾರ್ ಮತ್ತು ಕಲಾವಿದ ಕಾಳಿದಾಸ್, ಸೂರ್ಯಕಲಾ ಕ್ಷೇತ್ರದ ಅಭಿಶೇಖ್, ಕುಮಾರಿ ಸೌಮ್ಯ ಅವರನ್ನುಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಾಕ್ಟರ್ ರಮೇಶ್ ಗೋಪಾಲ್, ಎಲ್ಲರೂ ಹೆಲ್ಮೆಟ್ ಧರಿಸಿ ಜಾಗ್ರತರಾಗಿ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಂಚಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಮಡಿವಾಳ ಅವರು ಜಾಗೃತಿ ಮೂಡಿಸುವಂತ ಕಾರ್ಯಕ್ರಮಗಳನ್ನು ಮಾಡುತ್ತಿರುವ ಸೂರ್ಯಕಲಾ ಒಳಗಾದವರಿಗೆ ಅವನನ್ನು ತಿಳಿಸುತ್ತಾ ಎಲ್ಲರೂ ಜಾಗೃತರಾಗಿ ತಮ್ಮ ತಮ್ಮ ಕುಟುಂಬಗಳು ಕುಟುಂಬದ ಸದಸ್ಯರುಗಳ ಬಗ್ಗೆ ಎಚ್ಚರಿಕೆಯಿಂದ ಸಂಚಾರಿ ನಿಯಮಗಳು ಪಾಲನೆಗಳನ್ನು ಪಾಲಿಸುತ್ತಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳುತ್ತಾ ಜಾಗೃತರಾಗಿ ಎಂದು ಕರೆಕೊಟ್ಟರು
ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ರವಿ ಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ರಾಘವ ಕಲಾಮಂದಿರದ ಅಧ್ಯಕ್ಷ ಕೋಟೇಶ್ವರ್ ರಾವ್, ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್, ರೂಪನಗುಡಿ ಮಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಸುಂಡಿ ನಾಗರಾಜ್ U್ಷಡ, ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಉದ್ಯಮಿಗಳಾದ ಕಾಕಲ9 ರವೀಂದ್ರ ಕೂಡ್ಲಿಗಿ ಪಟ್ಟಣ ಪಂಚಾಯತಿಯ ಸದಸ್ಯರುಗಳಾದ ಸೈಯದ್ ಶುಕುರ್ ಮತ್ತು ಚಂದ್ರು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಶಮೀಮ್ ಜೇಟ್ಲಿ ಅವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಇಂತಹ ಜಾಗೃತಿ ಮೂಡಿಸುವಂತಹ ಕಿರುಚಿತ್ರಗಳಿಗೆ ಸಹಕಾರಿಯಾದ ಮತ್ತು ಸದಾ ಸಾರ್ವಜನಿಕರ ಸೇವೆಯಲ್ಲಿ ನಿಮಗ್ನರಾಗಿರುವ ಸೂರ್ಯಕಲಾ ಮತ್ತು ಸೇವಾ ಬಳಗದ ಮುಖ್ಯಸ್ಥ ಅಲವೇಲು ಸುರೇಶ್ ವಂದನೆ ಸಲ್ಲಿಸಿದರು