ಜನಜಾಗೃತಿ ಕಾರ್ಯಕ್ರಮ

ಲಕ್ಷ್ಮೇಶ್ವರ,ಏ30: ಪಟ್ಟಣದ ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪುರಸಭೆಯ ವತಿಯಿಂದ ಮೇ 10 ರಂದು ಜರಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜನಜಾಗೃತಿ ಮೂಡಿಸುವ ಜನರಂಗ ಕಲಾ ತಂಡದ ವತಿಯಿಂದ ಲಾವಣಿ ಗೀತೆಗಳ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಶನಿವಾರ ಜರುಗಿತು.
ಪುರಸಭೆಯ ವ್ಯವಸ್ಥಾಪಕಿ ಮಂಜುಳ ಹೂಗಾರ ಅವರು ತಮಟೆ ಭಾರಿಸುವ ಮೂಲಕ ಮತದಾನ ಜಾಗೃತಿಗೆ ಚಾಲನೆ ನೀಡಿದರು ಕೊಚ್ಚಿಗೇರಿಯ ಜನರಂಗ ಕಲಾ ತಂಡದ ಕಲಾವಿದರು ಮತದಾನ ಜಾಗೃತಿ ಕುರಿತು ಮತದಾನ ಅತ್ಯಂತ ಪವಿತ್ರವಾಗಿದ್ದು ಆಶೆ ಆಮಿಶೆಗೆ ಬಲಿಯಾಗದೆ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಿಷ್ಟಗೊಳಿಸುವಂತೆ ಲಾವಣಿ ಹಾಡುಗಳ ಮೂಲಕ ಜನರ ಗಮನ ಸೆಳೆದರು ದೇಶ ಮತ್ತು ರಾಜ್ಯದ ಅಭಿವೃದ್ಧಿ ಒಂದ ಮತದಾನದಲ್ಲಿ ಅವಲಂಬಿತವಾಗಿದ್ದು ಯಾರೊಬ್ಬರೂ ಮತದಿಂದ ದೂರ ಉಳಿಯದೆ ಮತದಾನ ಮಾಡಿ ಎಂದು ಮನವಿ ಮಾಡುವ ಹಾಡುಗಳನ್ನು ಹಾಡಿದರು.
ಮುಖ್ಯಾಧಿಕಾರಿ ಹಾಗೂ ಪ್ಲಾಯಿಂಗ ಸ್ಕಾಡ್ನ ಶಂಕರ ಹುಲ್ಲಮ್ಮನವರ ಆದೇಶದ ಮೇರೆಗೆ ಪುರಸಭೆಯವರು ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಲಾವಣಿ ಹಾಡುಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಹನಮಂತಪ್ಪ ನಂದೆಣ್ಣವರ ಬಸವರಾಜ ನಂದೆಣ್ಣವರ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಜರಿದ್ದರು.