ಜನಜಾಗೃತಿಗಾಗಿ ಬೀದಿ ನಾಟಕ

ಗದಗ,ಜೂ23 : ತಾಲೂಕಿನ ಪಂಚಾಕ್ಷರಿ ವಲಯದ ಹಾತಲಗೇರಿ ಕಾರ್ಯಕ್ಷೇತ್ರದಲ್ಲಿ ಮಾತೃಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ನಾಯಕ್ ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ, ಬೀದಿ ನಾಟಕ ಮಾಡುವುದರ ಉದ್ದೇಶ ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಬೀದಿ ನಾಟಕ ಕಾರ್ಯಕ್ರಮದಲ್ಲಿ ಛಿಥಿಛಿಜ ಕಲಾತಂಡದವರು ಶೌಚಾಲಯ ಬಳಕೆ ನೀರು ಉಳಿಸುವುದರ ಬಗ್ಗೆ, ಮಕ್ಕಳ ಶಿಕ್ಷಣ, ಸ್ವಚ್ಛತೆ, ಯೂಟ್ಯೂಬ್ ಚಾನೆಲ್ ಬಗ್ಗೆ ಸ್ವಸಹಾಯ ತಂಡದ ನಿರ್ವಹಣೆ ಮತ್ತು ಮತ್ತು ಸ್ವ ಉದ್ಯೋಗದ ಬಗ್ಗೆ ನಾಟಕ ಪ್ರದರ್ಶನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಿ ಮೇಲ್ಮನಿ, ಪಿಡಿಓ ಸುರೇಶ ನಾಯಕ, ವಲಯದ ಮೇಲ್ವಿಚಾರಕಿ ಶಿಲ್ಪಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಗಂಗಮ್ಮ ಮತ್ತು ಸೇವಾ ಪ್ರತಿನಿಧಿ ಚಂದ್ರಮ್ಮ ಸ್ವ ಸಹಾಯ ತಂಡ ಸದಸ್ಯರು ಹಾಗೂ ಜ್ಞಾನವಿಕಾಸ ಕೇಂದ್ರ ಸದಸ್ಯರು ಉಪಸಿತರಿದ್ದರು.