ಜನಜನಿತ ಕಲಾ ಪ್ರದರ್ಶನ ಸಂಘದಿಂದ ಅಭಿನಯ ರಂಗ ಶಿಬಿರ

ಬೀದರ:ಅ.25:ಜನಜನಿತ ಕಲಾ ಪ್ರದರ್ಶನ ಸಂಘದ ವತಿಯಿಂದ ಬೀದರ ನಗರದ ಮೈಲೂರಿನ ಬಯಲು ರಂಗಮಂದಿರದಲ್ಲಿ ಹತ್ತು ದಿನಗಳ ಅಭಿನಯ ರಂಗ ಶಿಬಿರ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನ ರೈಲ್ವೆ ಇಲಾಖೆಯ ಅಧಿಕಾರಿ ಘಾಳೆಪ್ಪ ಇವರು ಜಾನಪದ ಶೈಲಿಯಲ್ಲಿ ಹಲಿಗೆ ಬಾರಿಸುವುದರ ಮೂಲಕ ರಂಗ ಶಿಬಿರಕ್ಕೆ ಚಾಲನೆಯನ್ನು ನೀಡಿದರು. ಸಂಘದ ಕಾರ್ಯದರ್ಶಿಗಳಾದ ಎಸ್ ಬಿ ಕುಚಬಾಳ ಅವರು ರಂಗ ಶಿಬಿರದ ಬಗ್ಗೆ ಮಾತನಾಡುತ್ತಾ ವಯಸ್ಸಿನ ಮಿತಿ ಇಲ್ಲದೆ ಮಕ್ಕಳಿಂದ ಹಿಡಿದುಕೊಂಡು ದೊಡ್ಡವರು ಮಹಿಳೆಯರು ಹಾಗೆ ಹಿರಿಯ ನಾಗರಿಕರು ಪ್ರತಿಯೊಬ್ಬರನ್ನು ಸೇರಿಸಿಕೊಂಡು ಮಾಡುತ್ತಿರುವ ರಂಗ ಶಿಬಿರವಾಗಿದೆ. ಬೀದರ ಜಿಲ್ಲೆಯಲ್ಲಿ ರಂಗಭೂಮಿಯ ಕಲೆ ಅದರಲ್ಲೂ ಕೂಡ ನಾಟಕಗಳನ್ನು ತಾಲೀಮು ಮಾಡಿ ಬಯಲು ರಂಗ ಮಂದಿರಗಳಲ್ಲಿ ಅಥವಾ ರಂಗ ಮಂದಿರಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುವ ಪ್ರವೃತ್ತಿಯೇ ಕಾಣಿಸುತ್ತಿಲ್ಲ. ಆದರೆ ಜನಜನಿತ ಕಲಾ ಪ್ರದರ್ಶನ ಸಂಘವು ಅಭಿರುಚಿ ಇರುವ ಮಕ್ಕಳು ಹಿರಿಯ ನಾಗರಿಕರು ಮಹಿಳೆಯರು ಎಲ್ಲರನ್ನ ಒಟ್ಟುಗೂಡಿಸಿ ರಂಗಭೂಮಿಯ ಪರಿಚಯ ಅದರ ಜೊತೆ ಜೊತೆಯಲಿ ನಾಟಕಗಳ ಓದು ಪ್ರತಿದಿನವೂ ನಡೆಯುತ್ತದೆ ಎಂದು ತಿಳಿಸಿದರು. ರಂಗ ಶಿಬಿರದಲ್ಲಿ ಬರಿ ನಾಟಕ ತಾಲೀಮಲ್ಲದೆ ಮೇಕಪ್ ಹಾಗೂ ನಾಟಕಗಳ ಪ್ರಾಪರ್ಟಿ ಹಾಗೂ ವೇಷಭೂಷಣದ ಬಗ್ಗೆಯೂ ಹೇಳಿಕೊಡುವ ಶಿಬಿರವಾಗಿದೆ ಎಂದು ತಿಳಿಸಿದರು. ಶಿಬಿರ ಉದ್ಘಾಟಿಸಿ ಮಾತನಾಡಿದ ಘಾಳೆಪ್ಪರವರು ರಂಗಭೂಮಿಯ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಮುಖ್ಯವಾಗಿ ಯುವಕರಲ್ಲಿ ಇದರ ಜಾಗೃತಿ ಮೂಡಿಸುವುದು ತುಂಬಾ ಮುಖ್ಯವಾಗಿದೆ ಎಂದು ನುಡಿದರು. ನಾವು ಚಿಕ್ಕವರಿದ್ದಾಗ ಐತಿಹಾಸಿಕ ನಾಟಕಗಳನ್ನು ನೋಡುತ್ತಿದ್ದೇವು ಈಗ ಆ ನಾಟಕ ನೋಡುವ ಪ್ರವೃತ್ತಿಯೇ ನಮಗೆ ಎಲ್ಲಿಯೂ ಕಾಣಿಸುತ್ತಿಲ್ಲ ಹಾಗಯೇ ಯಾರು ಕೂಡ ಮಾಡುವ ಸಂಖ್ಯೆಯೂ ಕಡಿಮೆ ಆಗಿದೆ.ಈ ಶಿಬಿರ ನಡೆಸುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ತಿಳಿಸಿದರು . ಜನಜನಿತ ಕಲಾ ಪ್ರದರ್ಶನ ಸಂಘದ ಅಧ್ಯಕ್ಷ ಯಶವಂತ ಕುಚಬಾಳ ಮಾತನಾಡುತ್ತಾ ಶಿಬಿರವು ಬೀದರನ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಉಪಯೋಗವಾಗುವ ಶಿಬಿರವಾಗಬೇಕೆನ್ನುವುದೇ ನನ್ನ ಆಶಯ ಎಂದು ನುಡಿದರು.ಮೇಕಪಗೆ ಕಲ್ಯಾಣಿ ನಾಟಕಕ್ಕೆ ರಾಘವೇಂದ್ರ ಹಳಿಪೇಟ್ ರಂಗ ಗೀತೆಗಳಿಗೆ ಅರುಣ್ ಮಾನ್ವಿ ಶಿಬಿರಕ್ಕೆ ಬಂದಿರುವ ಬಗ್ಗೆಯೂ ತಿಳಿಸಿದರು.ಕಾರ್ಯಕ್ರಮದ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ನಿವೃತ್ತ ನೌಕರರು ನರಸಿಂಗ್ ರಾವ್ ವಲ್ಲೆಪುರೆ ಹಾಗೂ ಬಿಸಿಎಂ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ನಿವೃತ್ತ ಸಬ್ಬೀರಮಿಯಾ ಚಂದ್ರಪ್ಪ ನಿಟ್ಟೂರ್ಕರ್ ಇವರೆಲ್ಲರೂ ಶಿಬಿರಕ್ಕೆ ಶುಭ ಕೋರಿದರು. ಹಾಗೆ 10 ದಿನಗಳ ಕಾಲ ನಡೆಯುವ ಈ ಶಿಬಿರವನ್ನು ತಪ್ಪಿಸದೆ ರಂಗಭೂಮಿಯ ಬಗ್ಗೆ ನಾಟಕಗಳ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ತಿಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತವನ್ನ ಜೈಭೀಮ್ ರಂಗಗೀತೆಯನ್ನು ಪ್ರಕಾಶ್ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀದೇವಿ ವಂದನಾರ್ಪಣೆಯನ್ನ ಸ್ನೇಹ ನೆರವೇರಿಸಿಕೊಟ್ಟರು.