ಜನಕಲ್ಯಾಣವೇ ರಾಜ್ಯ ಸರ್ಕಾರದ ಗುರಿ: ಶಾಸಕ ಗುತ್ತೇದಾರ

ಆಳಂದ:ಮಾ.30:ರಾಜ್ಯದ ಜನರ ಸರ್ವಾಂಗೀಣ ಅಭಿವೃದ್ಧಿಯೇ ರಾಜ್ಯ ಸರ್ಕಾರದ ಗುರಿಯಾಗಿದೆ ಈ ನಿಟ್ಟಿನಲ್ಲಿಯೇ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.

ಇತ್ತೀಚಿಗೆ ತಾಲೂಕಿನ ಸಾಲೇಗಾಂವ ಗ್ರಾಮದ ನೂತನ ಬಡಾವಣೆ ಸಂಗಮ ನಗರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 10 ಲಕ್ಷ.ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಪೂಜೆ ನೇರವೇರಿಸಿದರು.

ಕೋರೋನಾ ಕಾರಣದಿಂದ ಅನುದಾನ ಕೊರತೆಯಾಗಿದೆ ಆದರೆ ಈಗ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಸಾಲೇಂಗಾಂವ ಗ್ರಾಮಕ್ಕೆ ಈ ಅವಧಿಯಲ್ಲಿ ಸುಮಾರು 3 ಕೋ. ರೂ.ಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಶರಣಪ್ಪ ಹೊಸಮನೆ, ಬಸವರಾಜ ಕೇರೂರ, ಭಾಗಣ್ಣ ಜಮಾದಾರ, ಕೃಷ್ಣ ಕಾಂಬಳೆ, ಗೌತಮ ಕಾಂಬಳೆ ಸೇರಿದಂತೆ ಇತರರು ಹಾಜರಿದ್ದರು.