ಜನಕಲ್ಯಾಣವೇ ಕಾಂಗ್ರೆಸ್ ಸರ್ಕಾರದ ಗುರಿ : ಶಾಸಕ ಕಾಶಪ್ಪನವರ


ಹುನಗುಂದ,ಸೆ.26: : ಸರ್ಕಾರದ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಸಲ್ಲದು. ಬಡವರು ಹಾಗೂ ಸಾಮಾನ್ಯರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡದಂತೆ ಮಾಡಿದವರ ಜನವಿರೋಧಿ ನೀತಿಯನ್ನು ಯಾರೂ ಸಹಿಸಲಾರರು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿ, ಇಂದಿರಾ ಗಾಂಧಿ ವಿಶ್ವ ಮೆಚ್ಚಿದ ನಾಯಕಿ. ಅವರ ಕಾಲದ ಜನಪರ ಯೋಜನೆಗಳನ್ನು ಯಾವತ್ತೂ ಮರೆಯಲಾಗದು. ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ. ಜನರ ಋಣ ದೊಡ್ಡದು. ಜನಕಲ್ಯಾಣ ನಮ್ಮ ಸರ್ಕಾರದ ಧ್ಯೇಯ. ಅದಕ್ಕೆ ನಾವು ಬದ್ಧ. ಶೀಘ್ರದಲ್ಲಿ ಇಳಕಲ್ಲದಲ್ಲಿ ಎರಡು ಮತ್ತು ಹುನಗುಂದದಲ್ಲಿ ಇನ್ನೊಂದು ಕ್ಯಾಂಟೀನ್ ತೆರೆಯಲಾಗುವುದು.
ಮುಖಂಡರಾದ ಮಹಾಂತೇಶ ಅವಾರಿ, ಪರ್ವೇಜ ಖಾಜಿ ಹಾಗೂ ವಿಜಯಮಹಾಂತೇಶ ಗದ್ದನಕೇರಿ ಕಾಂಗ್ರೆಸ್ ಸರ್ಕಾರ ಮತ್ತು ಶಾಸಕ ಕಾಸಪ್ಪನವರ ಅವರ ಸಾಧನೆಗಳನ್ನು ಹೇಳಿದರು. ಪುರಸಭೆ ಸದಸ್ಯರಾದ ಮೈನು ಧನ್ನೂರ, ಚಂದ್ರು ತಳವಾರ, ರಾಜಮ್ಮ ಬದಾಮಿ, ಶಾಂತಮ್ಮ ಮೇಲಿನಮನಿ, ಶಾಂತಪ್ಪ ಹೊಸಮನಿ, ಬಸವರಾಜ ಗೊಣ್ಣಾಗರ, ನಾಗರತ್ನ ತಾಳಿಕೋಟಿ, ಶರಣು ಬೆಲ್ಲದ, ಚೆಂದಪ್ಪ ಕಡಿವಾಲ, ಮುಖಂಡರಾದ ಬಿ.ವಿ.ಪಾಟೀಲ, ಬಸವರಾಜ ಗದ್ದಿ, ಯಮನಪ್ಪ ಬೆಣ್ಣಿ, ಜೈನಸಾಬ ಹಗೇದಾಳ, ಶಿವಾನಂದ ಕಂಠಿ, ನೀಲಪ್ಪ ತಪೇಲಿ, ರವಿ ಹುಚನೂರ, ಸಂಗಣ್ಣ ಗಂಜಿಹಾಳ, ಹನಮಂತ ನಡುವಿನಮನಿ, ಮಹಾಲಿಂಗಯ್ಯ ಹಿರೇಮಠ, ಸಂಗಣ್ಣ ಎಮ್ಮಿ, ಪರಸಪ್ಪ ಸಂದಿಮನಿ, ಅರ್ಷದ ನಾಯಿಕ, ಶಾಂತಯ್ಯ ಮಠ, ದಾನಮ್ಮ ಹಾದಿಮನಿ, ಪಿಎಸ್‍ಐ ಚೆನ್ನಯ್ಯ ದೇವೂರ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಸತೀಶಕುಮಾರ ಚವಡಿ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ.ಕೊನೆಸಾಗರ ನಿರೂಪಿಸಿ ವಂದಿಸಿದರು. ಚಂದ್ರು ಹಲಕಾವಟಗಿ ಪ್ರಾರ್ಥಿಸಿದರು.