ಜಡೇಜಾ ಅಬ್ಬರ ; ಆರ್ ಸಿಬಿಗೆ 69 ರನ್ ಗಳ ಹೀನಾಯ ಸೋಲು

ಮುಂಬೈ, ಏ. 25- ರವೀಂದ್ರ ಜಡೇಜಾ ಬಿರುಸಿನ ಬ್ಯಾಟಿಂಗ್ ಮತ್ತು ಬೌಲಿಂಗ್ ನೆರವಿನಿಂದ ಆರ್ ಸಿಬಿ ವಿರುದ್ದ ಧೋನಿ ಪಡೆ 69 ರನ್ ಗಳ
ಭರ್ಜರಿ ಗೆಲವು ಸಾಧಿಸಿತು.


ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದ್ದ ಕೊಹ್ಲಿ ಪಡೆ ಟೂರ್ನಿಯಲ್ಲಿ ಮೊದಲು ಸೋಲು ಅನುಭವಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ‌‌ ಪಂದ್ಯದಲ್ಲಿ ಆರ್ ಸಿಬಿ, ಸಿಎಸ್ ಕೆ ಬೌಲಿಂಗ್ ದಾಳಿಗೆ ದೂಳಿಪಟವಾಯಿತು. ಪಡಿಕ್ಕಲ್ 34 ಹಾಗೂ ಮ್ಯಾಕ್ಸ್ ವೆಲ್ 22 ರನ್ ಗಳಿಸಿದ್ದನ್ನು ಹೊರತು ಪಡಿಸಿ ಕೊಹ್ಲಿ, ಎಬಿಡಿ ಸೇರಿದಂತೆ ಉಳಿದ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.


ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಗೆ 122 ರನ್ ಗಳಿಸಿ‌ ಹೀನಾಯ ಸೋಲು ಅನುಭವಿಸಿತು.
ಜಡೇಜಾ 3 ಹಾಗೂ ಇಮ್ರಾನ್ ತಹೀರ್ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 191 ರನ್ ಪೇರಿಸಿತು.
ಆಲ್ ರೌಂಡರ್ ರವೀಂದ್ರ ಜಡೇಜಾ ಕೇವಲ 28 ಎಸೆತಗಳಲ್ಲಿ ಐದು‌ ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸಿಡಿಸಿ ಅಜೇಯ 62 ರನ್ ಬಾರಿಸಿದರು.ಕೊನೆಯ ಓವರ್ ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 37 ರನ್ ಚಚ್ಚಿದರು.


ಡೂಪ್ಲೆಸಿಸ್ 41ಎಸೆತಗಳಲ್ಲಿ 50 ರನ್ ಗಳಿಸಿದರು. ರೈನಾ 24 ರನ್ ಗಳಿಸಿದರು. ಅಲ್ಲದೆ ಐಪಿಎಲ್ ನಲ್ಲಿ 200 ಸಿಕ್ಸರ್ ಬಾರಿಸಿದ ಕೀರ್ತಿಗೂ ಭಾಜನರಾದರು.
ಋತುರಾಜ್ 33 ರನ್ ಗಳಿಸಿದರು.