ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಹುಟ್ಟುಹಬ್ಬ: ಉಚಿತ ಮಾಸ್ಕ್ ವಿತರಣೆ

ಕಲಬುರಗಿ,ಮಾ.25- ಮೌನಯೋಗಿ, ಶ್ವೇತ ಶಾಂತಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ 79 ನೇ ಜನ್ಮ ದಿನವನ್ನು ನಗರದ ಜೇವರ್ಗಿ ಕಾಲನಿಯಲ್ಲಿ ಮಾಸ್ಕ್ ಗಳನ್ನು ಹಂಚುವ ಮೂಲಕ ಆಚರಿಸಲಾಯಿತು.
ಪರಮ ಪೂಜ್ಯರ ಜನ್ಮದಿನದ ಅಂಗವಾಗಿ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕೊರೊನ ತಡೆಗಟ್ಟಲು, ಸಾರ್ವಜನಿಕರಲ್ಲಿ ಮತ್ತು ಬೀದಿ ಬದಿಯ ವ್ಯಾಪಾರಸ್ಥರಲ್ಲಿ ಮುಂಜಾಗ್ರತೆಯ ಕುರಿತಾದ ಮಾರ್ಗಸೂಚಿಯ ಬಗ್ಗೆ ಜಾಗೃತಿ ಮೂಡಿಸಿ ಅವರಿಗೆ ಉಚಿತ ಮಾಸ್ಕ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ರಾಮಚಂದ್ರನ್ ಜಾಧವ ಅವರು ಮಾತನಾಡಿ, ಪರಮ ಪೂಜ್ಯರ ಜನ್ಮದಿನದ ಅಂಗವಾಗಿ ಮಾಸ್ಕ್ ಹಂಚುವ ಕಾರ್ಯಕ್ರಮ ಅತ್ಯಂತ ಮಹತ್ವದ ಕಾರ್ಯ.ಈ ರೀತಿಯ ರಚನಾತ್ಮಕ ಕಾರ್ಯಗಳು ಸಮಾಜದಲ್ಲಿ ನಡೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಬಿಜೆಪಿ ಯುವ ನಾಯಕ ಸಾಯಿರಾಮ ಹುಗ್ಗಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನೀಲಮ್ಮ ಟಕ್ಕಳಕಿ,ವೈದ್ಯಕೀಯ ವಿದ್ಯಾರ್ಥಿಗಳಾದ ಭಾಗ್ಯ ಟಕ್ಕಳಕಿ, ಸಪ್ನಾಪಾಟೀಲ, ಡಾ.ಶಾಂತಸಾಗರ, ಮೌನಯೋಗಿ ಫೌಂಡೇಶನ್ನಿನ ಅಧ್ಯಕ್ಷ ಶ್ರಾವಣಯೋಗಿ ಹಿರೇಮಠ್, ಸೇರಿದಂತೆ ಬಡಾವಣೆಯ ಹಿರಿಯರು, ಗಣ್ಯಮಾನ್ಯರು ಪಾಲ್ಗೊಂಡಿದ್ದರು.