ಜಗ ವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕ ಭೀಮರಾವ ನಿಧನ

ಕಲಬುರಗಿ,ಜ.22: ಕಲಬುರಗಿಯ ಜಗ ವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕ ಮತ್ತು ಹೈಕೋರ್ಟ್ ವಕೀಲ ಕೆ. ಭೀಮರಾವ (79) ಅವರು ರವಿವಾರ ನಿಧನರಾಗಿದ್ದಾರೆ.

ಕಲಬುರಗಿ ನಗರದ ಆನಂದ ನಗರದಲ್ಲಿ ವಾಸವಿದ್ದ ಇವರು ವಯೋಸಹಜ ಕಾಯಿಲೆಯಿಂದ ರವಿವಾರ ಸಂಜೆ‌ ನಿಧನರಾಗಿದ್ದಾರೆ.

ಮೃತರು ಮಡದಿ, ಐದು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಜ.23 ರಂದು (ಸೋಮವಾರ) ಮಧ್ಯಾಹ್ನ 3.30 ಗಂಟೆಗೆ ಕಲಬುರಗಿ ಹೊರವಲಯದ ನಂದಿಕೂರ ಗ್ರಾಮದ ಆಕಾಶವಾಣಿ-ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಪಿ.ಯು.ಕಾಲೇಜು ಹಿಂಭಾಗದಲ್ಲಿರುವ ಸ್ವಂತ ಹೊಲದಲ್ಲಿ ನೆರವೇರಲಿದೆ.