ಜಗ ಜೀವನ್ ರಾಮ್ ಜಯಂತಿ

ಕೋಲಾರ, ಏ,೬- ನಗರದ ಕಾಂಗ್ರೇಸ್ ಭವನದಲ್ಲಿ ಜಿಲ್ಲಾ ಕಾಂಗ್ರೇಸ್ ವತಿಯಿಂದ ಆಯೋಜಿಸಿದ್ದ ದಿವಂಗತ ಉಪ ಪ್ರಧಾನಿ ಬಾಬು ಜಗ ಜೀವನ್ ರಾಮ್ ಅವರ ೧೧೬ನೇ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಮಾತನಾಡಿ ಜಗಜೀವನ ರಾಮ್ ಅವರು ಯುವ ಪೀಳಿಗೆಗೆ ರಾಜಕಾರಣಿಗಳಿಗೆ ಉತ್ತಮ ನಾಯಕ ನೀತಿಗಳ ಮಾರ್ಗದರ್ಶನ ನೀಡಿದಂತ ಮಹಾನ್ ನಾಯಕರು, ಅವರ ಮಾರ್ಗದರ್ಶನವು ಮುಂದಿನ ಪೀಳಿಗೆಗೂ ಅಗತ್ಯವಿದೆ. ಅವರ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಅರಿವು ಮೂಡಿಸಬೇಕು ಎಂದರು.
ಉಪ ಪ್ರಧಾನಿಗಳಾಗಿ, ರಕ್ಷಣ ಸಚಿವರಾಗಿ, ಕೃಷಿ ಸಚಿವರಾಗಿ ಹಾಗೂ ಕಾರ್ಮಿಕ ಸಚಿವರಾಗಿ ತಮ್ಮದೇ ಆದಾ ಕೊಡುಗೆಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿರುವ ಅಭಿವೃದ್ದಿಯ ಹರಿಕಾರ ಎಂದು ಶ್ಲಾಘಿಸಿದರು,
ಎಸ್.ಸಿ.ಘಟಕದ ಜಿಲ್ಲಾ ಅಧ್ಯಕ್ಷ ಕೆ.ಜಯದೇವ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜೀವನರಾಮ್ ಅವರುಗಳು ಭಾರತ ದೇಶದ ಎರಡು ಕಣ್ಣುಗಳು ಇದ್ದಂತೆ ಜಗಜೀವನ್ ರಾಮ್ ಅವರು ಎಂಟು ಬಾರಿ ಲೋಕಸಭೆಗೆ ನಿರಂತರವಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದ್ದರು. ಇವರ ಹಾದಿಯಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸಹ ೭ ಭಾರಿ ಸತತವಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಮಾದರಿಯಾಗಿದ್ದಾರೆ.ಅವರ ನೇತ್ರತ್ವದಲ್ಲಿ ನಾವೆಲ್ಲಾ ಮುಂದುವರೆಯೋಣಾ ಎಂದು ತಿಳಿಸಿದರು,
ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬು,ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಉದಯಶಂಕರ್, ಓ.ಬಿ.ಸಿ. ಉಪಾಧ್ಯಕ್ಷ ಶಿವಕುಮಾರ್ ಮುಂತಾದವರು ಮಾತನಾಡಿದರು,
ಕಾರ್ಯಕ್ರಮದಲ್ಲಿ ಮುಖಂಡರಾದ ವೆಂಕಟಪತಪ್ಪ, ಖಾದ್ರಿಪುರ ಬಾಬು, ಹಾರೋಹಳ್ಳಿ ರವಿ, ಹಾರೋಹಳ್ಳಿ ಶ್ರೀನಿವಾಸ್, ಗಂಗಮ್ಮಪಾಳ್ಯದ ರಾಮಯ್ಯ, ಮಿಲಿಟರಿ ವೆಂಕಟೇಶ್, ಲಾಲ್ ಬಹುದ್ದೊರ್ ಶಾಸ್ತ್ರಿ, ಕಾರ್ಮಿಕ ಘಟಕದ ಯಲ್ಲಪ್ಪ, ಜಗನ್ನಾಥ್, ಮುಂತಾದವರು ಇದ್ದರು,