ಜಗ್ಗತ್ತಿನಲ್ಲಿ ಶಾಂತಿ ನೆಲೆಸಿ ನೆಮ್ಮದಿಯ ಜೀವನ ಸಾಗಲಿ- ಬೀಷಪ್

ಮೆಥೋಡಿಸ್ಟ್ ಚರ್ಚ್ ಉದ್ಘಾಟಿಸಿದ ಎನ್.ಎಲ್ ಕರ್ಕರೆ
ಸಿರವಾರ.ನ೧೧- ಆದುನಿಕ ಜೀವನ ಜಂಜಾಟದಲ್ಲಿ ಮಾನವನಿಗೆ ನೆಮ್ಮದಿಯ ಜೀವನ ನಡೆಸಲು ಹೇಣಗಾಡುತ್ತಿದ್ದಾನೆ. ಏಸು ಕ್ರೀಸ್ತನ ಆಲಯ ನಿರ್ಮಾಣಕ್ಕೆ ಸಹಾಯ ಪ್ರತಿಯೊಬ್ಬರಿಗೂ ಕಲ್ಯಾಣವಾಗಲಿ ಎಂದು ಬೆಂಗಳೂರು ಮತ್ತು ಗುಜರಾತ್ ಕ್ರೈಸ್ತಸಮುದಾಯದ ಆಲೋಚನಾ ಸಭೆಯ ಧರ್ಮಾಧ್ಯಕ್ಷರಾದ ಬೀಷಪ್ ಎನ್.ಎಲ್ ಕರ್ಕರೆ ಹೇಳಿದರು.
ಪಟ್ಟಣದಲ್ಲಿ ನೂತವಾಗಿ ನಿರ್ಮಾಣ ಮಾಡಿರುವ ಮೆಥೋಡಿಸ್ಟ್ ಚರ್ಚ್ ಉದ್ಘಾಟಿಸಿ ತಮ್ಮ ಆಶಿರ್ವಚನದಲ್ಲಿ ನಮಗೆ ಅಪಕಾರ ಮಾಡಿದವರಿಗೆ ಉಪಕಾರ ಮಾಡುವುದೆ ನಿಜವಾದ ಜೀವನದ ಅರ್ಥ. ದ್ವೇಷ ಅಸೂಯೆ ಬಿಟ್ಟು ಏಸುಕ್ರಿಸ್ತ ನಂತೆ ಶಾಂತಿ, ಸೌಹರ್ದತೆಯಿಂದ ಜೀವನ ನಡೆಸಿ. ಪರಶುದ್ದವಾದ ದೇವಾಲಯ ನಿರ್ಮಾಣಕ್ಕೆ ತನು, ಮನ, ಧನದಿಂದ ಸಹಾಯ, ಸಹಕಾರ ಮಾಡಿದ ಎಲ್ಲಾರಿಗೂ ಆ ದೇವರು ಒಳೇಯದನ್ನು ಮಾಡಲಿ.
ಎಲ್ಲಾರ ಸಂಕಷ್ಟಗಳು ದೂರವಾಗಲಿ. ಸಕಾಲಕ್ಕೆ ಮಳೆಯಾಗಿ ಉತ್ತಮ ಇಳುವರಿ ಬಂದು ರೈತರು ಹಸ್ಮುಖಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಮೆಥೊಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆ.ದೇವದಾಸ್ ಆನಂದಪ್ಪ, ಪಾಸ್ಟರ್ ಸೂರ್ಯದಾಸ್, ಸತ್ಯಮಿತ್ರ, ಸಹಾಯಕ ಸಭಾಪಾಲಕ ಸಂಸೋನ್ ಡ್ಯಾನಿಯಲ್, ಮಾಜಿ ಶಾಸಕ ಹಂಪಯ್ಯ ಸಾಹುಕಾರ, ಶಾಸಕ ಕೆ.ಶಿವನಗೌಡ ಅವರ ತಾಯಿ ಮಹಾದೇವಮ್ಮ, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಹಿರಿಯ ವಾಣಿಜ್ಯದ್ಯೋಮಿ ಚುಕ್ಕಿ ಸೂಗಪ್ಪ ಸಾಹುಕಾರ,ಜಿ.ಲೋಕರೇಡ್ಡಿ,ಕೆ.ಅಸ್ಲಾಂಪಾಷ, ಕೆ.ಶರಣಯ್ಯ ನಾಯಕ ಗುಡದಿನ್ನಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ವೈ.ಅಮರೇಶಪ್ಪ, ಜಂಬಣ್ಣ ನಿಲೋಗಲ್, ನರಸಿಂಹರಾವ ಕುಲಕರ್ಣಿ,ನಾಗರಾಜಗೌಡ ಬಿ.ಅರ್, ಅಂಬಣ್ಣ ಅರೋಲಿಕರ್, ರವೀಂದ್ರ ಜಲ್ದಾರ್,ಚನ್ನೂರು ಚನ್ನಪ್ಪ,ಸಂದೀಪ್ ಪಾಟೀಲ್, ಬಸವರಾಜಗಡ್ಲ, ದಾನೇಲಪ್ಪ ಕೆಂಪು, ಮತ್ತಾಯ, ಸವಾರೆಪ್ಪ, ರಾಜಪ್ಪಹೊನ್ನಟಗಿ, ದೇವಿಪುತ್ರಪ್ಪ, ಬಡ್ಡಹನುಮಂತ, ಎಂ.ಪ್ರಕಾಶಪ್ಪ, ಈಶಪ್ಪ ಹೂಗಾರ, ಕಾಶಿನಾಥ್ ಸರೋದೆ, ನಾಗರಾಜ್ ಭೋಗವತಿ, ರವಿ ವಕೀಲ್, ದಾನಪ್ಪ, ಗ್ಯಾನಪ್ಪ, ಮಲ್ಲಪ್ಪ ಕಜ್ಜಿ, ದೇವಪ್ಪ ಕೆಂಪು, ಇಮಾನಪ್ಪ, ಸಾಮೇಲಪ್ಪ ನ್ಯಾಯಬೆಲೆ, ಮಹಾಮುನೆಪ್ಪ, ಜಯಪ್ಪ ಗುತ್ತಿದಾರ್, ಹುಲಿಗೆಪ್ಪ ಕರಿಬಿಲ್ಕರ್, ಅಬ್ರಹಾಂ ಹೊನ್ನಟಿಗಿ, ಜಯಪ್ಪ ಕೆಂಪು, ಮೈಕಲ್, ಯೇಸುಮಿತ್ರ ಮಚ್ಚಿ, ಮೆಥೋಡಿಸ್ಟ್ ಚರ್ಚ ಸಭೆಯ ಉಗ್ರಾಣಿಕರು, ಯವನಸ್ಥರು, ಮಹಿಳೆಯರು, ಮಕ್ಕಳು, ಉಪಸ್ಥಿತರಿದ್ದರು.