ಜಗಳೂರು; 297 ಸ್ಥಾನಗಳಿಗೆ ಮತದಾನ

ಜಗಳೂರು.ಡಿ.೨೨; ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ 397 ಸ್ಥಾನಗಳಲ್ಲಿ 100 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 297 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪರಿಶಿಷ್ಟ ಜಾತಿ ವಿಭಾಗದಿಂದ 239, ಪರಿಶಿಷ್ಟ ಪಂಗಡದಿಂದ 188, ಹಿಂದುಳಿದ ವರ್ಗ ಎ ಯಿಂದ 16, ಸಾಮಾನ್ಯ ವರ್ಗದಿಂದ 331 ಒಟ್ಟು 774 ಮಂದಿ ಚುನಾವಣೆ ಎದುರಿಸುತ್ತಿದ್ದಾರೆ ಇಂದು ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ. ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ನಡೆಯುತ್ತಿರುವ  ಮತಗಟ್ಟೆಗಳಿಗೆ  ಕೇಂದ್ರಗಳಿಗೆ  ಜಗಳೂರು ತಾಲೂಕು ಗ್ರಾಮ ಪಂಚಾಯಿತಿ ಚುನಾವಣೆಯ ನೋಡಲ್ ಅಧಿಕಾರಿ ನಜ್ಮಾ ಅವರು ತಾಲೂಕಿನ ಬಿಸ್ತುವಳ್ಳಿ. ಬುಳ್ಳೇನಹಳ್ಳಿ. ರಸ್ತೆ ಮಚಿಕೆರೆ. ಮಾಳಮ್ಮನಹಳ್ಳಿ. ಸೇರಿದಂತೆ ಕೆಲ ಗ್ರಾಮ ಪಂಚಾಯತಿಗಳ ಮತಗಟ್ಟೆಗಳಿಗೆ ಇಂದು ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮತದಾರರಿಗೆ ಸಾಮಾಜಿಕ ಅಂತರ ಮುಖಕ್ಕೆ ಮಾಸ್ಕ್ ಸ್ಯಾನಿಟೈಸರ್ ಹಾಕುವಂತೆ ತಿಳಿಸಿ ಎಂದು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ರಮೇಶ್.ತಾಲ್ಲೂಕು ಪಂಚಾಯಿತಿ ಇಓ ಮಲ್ಲನಾಯ್ಕ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.