ಜಗಳೂರು; 20ಕ್ಕೂ ಅಧಿಕ ಗ್ರಾ.ಪಂ ಆಡಳಿತ ಬಿಜೆಪಿ ತೆಕ್ಕೆಗೆ :ಮಹೇಶ್ ಪಲ್ಲಾಗಟ್ಟೆ

ಜಗಳೂರು.ಜ.೪; ಶಾಸಕ‌ ಎಸ್ ವಿ ರಾಮಚಂದ್ರ ಅವರು ಅಭಿವೃದ್ದಿಪರವಾಗಿದ್ದಾರೆ ಇದನ್ನು ಸಹಿಸದೆ ವಿರೋಧ  ಪಕ್ಷದವರು ಪತ್ರಿಕಾ ಹೇಳಿಕೆ‌ನೀಡಿರುವುದು ಖಂಡನೀಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮೋದಿಜಿ ಅವರ ಗ್ರಾಮಪಂಚಾಯಿತಿ ಬಗೆಗಿನ ಕಾಳಜಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಜಾತ್ಯಾತೀತ‌ ಪ್ರಾತಿನಿದ್ಯತೆಯ ಆಡಳಿತ,ಸಂಸದ ಜಿಎಂ ಸಿದ್ದೇಶ್ವರ್ ಮತ್ತು ಬರದ ನಾಡಿನ ಭಗೀರಥರಾಗಿರುವ  ಶಾಸಕ ಎಸ್ ವಿ ರಾಮಚಂದ್ರ ಅವರ ತಾಲೂಕಿನ ಬಗ್ಗೆ ಇರುವ  ಅಭಿವೃದ್ದಿ ಕನಸುಗಳ ಫಲವಾಗಿ ವಿಧಾನ ಸಭಾ ಕ್ಷೇತ್ರದ 29 ಗ್ರಾಮಪಂಚಾಯಿತಿಗಳಲ್ಲಿ 320 ಕ್ಕೂ ಅಧಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಕೆಲವೇ ದಿನಗಳಲ್ಲಿ  ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ 20 ಕ್ಕೂ ಅಧಿಕ ಗ್ರಾಮಪಂಚಾಯಿತಿ ಆಡಳಿತ ವಶಕ್ಕೆ ಬರಲಿವೆ ಇದಕ್ಕೆ‌ನಮ್ಮ ಬಳಿ ಬೆಂಬಲಿಗರ  ಪಟ್ಟಿ ಸಮೇತ ದಾಖಲೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ,ಸಂಸದರ ಹಾಗೂ ಶಾಸಕರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಗ್ರಾಮಪಂಚಾಯಿತಿ ಸದಸ್ಯರುಗಳ ಸಮಾವೇಶ ಆಯೋಜಿಸಲಾಗುವುದು ಎಂದರು.ಶಾಸಕರ ಬಗ್ಗೆ ಟೀಕೆಗಳು ಸಲ್ಲದು:ಪುರಸಭೆ ಸಾಧ್ಯವಿಲ್ಲ ಎಂಬ ಮಾಜಿ ಶಾಸಕ‌ ಎಚ್.ಪಿ ರಾಜೇಶ್ ಅವರ ಹೇಳಿಕೆ ಸಲ್ಲದು ಪಟ್ಟಣದಲ್ಲಿ 17534 ಜನಸಂಖ್ಯೆ ಹೊಂದಿದ್ದು ಪುರಸಭೆಗೆ 20 ಸಾವಿರ ಜನಸಂಖ್ಯೆ ಅಗತ್ಯವಿದೆ .ಹಿಗಾಗಿ  ನೆರೆಹೊರೆಯ ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಪ್ರಸ್ತಾವನೆ‌ ಕುರಿತ ಶಾಸಕರ ಭರವಸೆ ಸತ್ಯವಾಗಿದೆ‌ ವಿಳಂಬವಾಗಬಹುದು ಆದರೆ ಈ ಬಾರಿಯೇ ಪುರಸಭೆಯಾಗುವುದು ಎಂದರು.ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಶಾಸಕರ ಇಚ್ಛಾಶಕ್ತಿಯಿಂದ 57ಕೆರೆ ನೀರು ತುಂಬಿಸುವ ಯೋಜನೆ ಯಡಿ 640  ಕೋಟಿ ಹಣ ಮಂಜೂರಾಗಿ  ಕಾಮಗಾರಿ ಭರದಿಂದ ಸಾಗಿದೆ ಈ ಬಗ್ಗೆ ನಮ್ಮ ಶಾಸಕರು ಎಲ್ಲಿಯೂ ನಾನು ಮಾಡಿದೆ ಎಂದು ಹೇಳಿಕೊಂಡಿಲ್ಲ ಕೆಲಸ ನಿರ್ವಹಿಸಲು ಶಾಸಕರ ಅಗತ್ಯವಿದೆ ಅಷ್ಟೇ
ಅಲ್ಲದೆ 47 ಸಾವಿರ ಎಕರೆ ನೀರಾವರಿ ಕನಸಿನ  ಭದ್ರಾಮೇಲ್ದಂಡೆ ಯೋಜನೆ  ರಾಷ್ಟ್ರೀಯ  ಯೋಜನೆಯಾಗಿ ಕೇಂದ್ರ ಜಲ ಆಯೋಗ ಘೋಷಿಸಿ 16125 ಕೋಟಿ ಮಂಜೂರು ಮಾಡಿದೆ ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಕ್ರಿಯೆ ಆರಂಭವಾಗುತ್ತದೆ ಭದ್ರಾ ಹಿನ್ನೀರು ಯೋಜನೆಯಡಿ  ಕನಿಷ್ಠ 2 ಜಿಲ್ಲಾ ಪಂಚಾಯಿತಿ ವ್ಯಾಪ್ತಿ ನೀರು ಬರಲಿವೆ ಅಂದು ಟೀಕಾಕಾರರಿಗೆ  ಅರಿಯಲಿದೆ  ನಮ್ಮ ಸರ್ಕಾರದ ಅಭಿವೃದ್ದಿ ಬಗ್ಗೆ ಎಂದು ಎದುರೇಟು ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ  ಅಧ್ಯಕ್ಷೆ ಶಾಂತಕುಮಾರಿ  ಸದಸ್ಯ ಎಸ್‌ಕೆ ಮಂಜುನಾಥ್ ಪಟ್ಟಣದ ಪಂಚಾಯಿತಿ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ ಉಪಾಧ್ಯಕ್ಷೆ ಲಲಿತಶಿವಣ್ಣ ಮುಖಂಡ ದೇವಿಕೆರೆ ಸ್ವಾಮಿ ಸೇರಿದಂತೆ ಭಾಗವಹಿಸಿದ್ದರು.