ಜಗಳೂರು; ಸರಗಳ್ಳನ ಬಂಧನ

ಜಗಳೂರು.ನ.೬; ಪಟ್ಟಣದ ವಿವಿಧ ಕಡೆ ಸರಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕು ನಿಂಬಳಗೆರೆ ಗ್ರಾಮದ ಅಲ್ಲಾಭಕ್ಷಿ ಬಂಧಿತ ಆರೋಪಿಯಾಗಿದ್ದಾರೆ. ಪಟ್ಟಣದ ಮರೇನಹಳ್ಳಿ ರಸ್ತೆಯಲ್ಲಿ  ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ 50 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದ ,ದೇವೇಗೌಡ ಬಡಾವಣೆಯಲ್ಲಿ ವಾಕ್‌ ಮಾಡುತ್ತಿದ್ದ  ಮತ್ತೊಬ್ಬ ಮಹಿಳೆಯ ಸರ ಕಳ್ಳತನ ಮಾಡಿದ್ದ ಈ ಸಂಬಂಧ ಎರಡು ದೂರುಗಳು ಜಗಳೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಡಿ.ವೈ.ಎಸ್.ಪಿ ಕನ್ನಿಕಾ ಸಿಕ್ರಿವಾಲ್‌, ಹೆಚ್ಚುವರಿ ಡಿ.ವೈ.ಎಸ್.ಪಿ ಬಸವರಾಜ್‌, ಸಿ.ಪಿ.ಐ ಸತ್ಯನಾರಾಯಣಸ್ವಾಮಿ ಇವರ ಮಾರ್ಗದರ್ಶನದಲ್ಲಿ ಪಿ.ಎಸ್‌.ಐ ಮಹೇಶ್ ಹೊಸಪೇಟ. ಸಿ.ಎನ್ ಬಸವರಾಜ್ ಎಸ್. ಡಿ ಸಾಗರ್ ಎ.ಎಸ್‌.ಐ ಚಂದ್ರಶೇಖರ್‌,ಜಿ.ಟಿ ವೆಂಕಟೇಶ್‌,ನಾಗರಾಜ್‌, ಮೂರ್ತಿ ಹಾಗೂ ಸಿಬ್ಬಂದಿಗಳಾದ ನಾಗಭೂಷಣ್‌,ಪಂಪನಾಯ್ಕ, ಮಾರಪ್ಪ, ನಾಗರಾಜ್‌. ಆನಂದಪ್ಪ. ಬಸಂತಪ್ಪ. ರಮೇಶ್. ದೊಡ್ಡಬಸಪ್ಪ. ರಾಘವೇಂದ್ರ ಪ್ರಸನ್ನ ಕುಮಾರ. ವಿಜಯ್. ಇತರೆ ಸಿಬ್ಬಂದಿಗಳ ವಿಶೇಷ ತಂಡ ಕಳ್ಳನ ಪತ್ತೆಗೆ ಬಲೆ ಬೀಸಿ ಕಾರ್ಯಾಚರಣೆ ನಡೆಸಿ ಸಿಸಿ ಕ್ಯಾಮೇರದ ಸಹಾದೊಂದಿಗೆ ಕಳ್ಳನನ್ನು ಬಂಧಿಸಿದ್ದಾರೆ.  ಕಳ್ಳನಿಂದ 1.50 ಲಕ್ಷ ಬೆಲೆ ಬಂಗಾರದ ಸರ, ಒಂದು ಬೈಕ್‌ ವಶಕ್ಕೆ ಪಡೆದುಕೊಂಡಿದ್ದಾರೆ.ಈ ಪ್ರಕರಣವನ್ನು ಭೇದಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸಿ.ಬಿ.ರಿಷ್ಯಂತ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್. ಬಿ ಬಸರಗಿ  ಅವರು ಪ್ರಶoಸೆ ವ್ಯಕ್ತಪಡಿಸಿದ್ದಾರೆ