ಜಗಳೂರು ವೃತ್ತನಿರೀಕ್ಷಕರಾಗಿ ಮಂಜುನಾಥ ಪಂಡಿತ್

ಜಗಳೂರು.ಏ.೮:  ತಾಲೂಕಿನ ಪೊಲೀಸ್ ಠಾಣೆಗೆ ನೂತನ ಆರಕ್ಷಕ ವೃತ್ತ ನಿರೀಕ್ಷಕರಾಗಿ  ಮಂಜುನಾಥ ಪಂಡಿತ್ ಪಿ.ಎನ್  ನೂತನವಾಗಿ  ಅಧಿಕಾರ ವಹಿಸಿಕೊಂಡಿದ್ದಾರೆ ಈ ಹಿಂದೆ ಆರಕ್ಷಕ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ  ದುರುಗಪ್ಪ  ಅವರು   ವರ್ಗಾವಣೆಗೊಂಡಿದ್ದಾರೆ 
ಮಂಜುನಾಥ ಪಂಡಿತ್ ಪಿ.ಎನ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮಠದ ಸಿರಿಗೆರೆ  ಗ್ರಾಮದವರಾಗಿದ್ದು ಇವರು ಸಿರಿಗೆರೆ ಶಿಕ್ಷಣ ಸಂಸ್ಥೆಯಲ್ಲಿ ಮೂಲತಃ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ನಂತರ 2005 ನೇ ಸಾಲಿನ ಬ್ಯಾಚ್ ನಲ್ಲಿ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಿ.ಇವರು 2016 ರಲ್ಲಿ ಮುಂಬಡ್ತಿ ಹೊಂದಿ ನಂತರ ಇನ್ಸ್ ಪೆಕ್ಟರ್ ಆಗಿ ಎಸಿಬಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ ನಂತರ ಹಾವೇರಿ ಜಿಲ್ಲೆಯಲ್ಲಿ 2018ನೇ ಎರಡುವರೆ ವರ್ಷ  ಹಿರೇಕೆರೂರು ಸಿ.ಪಿ.ಐ ಆಗಿ  ಕರ್ತವ್ಯ ನಿರ್ವಹಿಸಿ,
ನಂತರ ವರ್ಗಾವಣೆಗೊಂಡು ನೂತನವಾಗಿ ಜಗಳೂರು ಪೊಲೀಸ್ ಠಾಣೆಯ ಆರಕ್ಷಕ ವೃತ್ತ  ನಿರೀಕ್ಷಕರಾಗಿ (ಸಿ.ಪಿ.ಐ) ಮಂಜುನಾಥ್ ಪಂಡಿತ್ ಪಿ.ಎನ್ ಅಧಿಕಾರ ವಹಿಸಿಕೊಂಡಿದ್ದಾರೆ.