ಜಗಳೂರು ವೃತ್ತಗಳಲ್ಲಿ ಟ್ರಾಫಿಕ್ ಜಾಮ್

ಜಗಳೂರು.ಮೇ.೫;  ಸರ್ಕಾರದ ಗೊಂದಲ ನಿರ್ಧಾರಗಳಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಂತಾಗಿದೆ. ಜಗಳೂರು ಪಟ್ಟಣದಲ್ಲಿ ಪ್ರತಿನಿತ್ಯ  6 ರಿಂದ 10 ಗಂಟೆಯವರೆಗೆ ಮಾತ್ರ ದಿನಿಸಿ ಮತ್ತು ತರಕಾರಿ ಹಣ್ಣು ಖರೀದಿಗೆ ಅವಕಾಶ ನೀಡಿದ ಸರಕಾರ ಏಕಾಏಕಿ 12 ರವರೆಗೆ ಅವಕಾಶ ನೀಡಿದ ಪರಿಣಾಮವಾಗಿ ಜನಸಂಖ್ಯೆ ಹೆಚ್ಚಳವಾಗಿ ಪಟ್ಟಣದ ಅನೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಎದುರಿಸುವಂತಾಗಿದೆದಿನನಿತ್ಯವೂ ಪ್ರತಿ ಸರ್ಕಲ್ ಗಳಲ್ಲಿ ಪೊಲೀಸರು ಎಚ್ಚರಿಕೆಯಿಂದ ಜಾಗೃತಿ ಮೂಡಿಸುತ್ತಿರುವುದು ದಿನದಿಂದ ದಿನಕ್ಕೆ ಮುಂದುವರೆಯುತ್ತಲೇ ಇದೆ.ಜನದಟ್ಟಣೆ ಹೆಚ್ಚಳವಾಗುವುದರಿಂದ ಸಂಚಾರವವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಾಗಿದೆ ಪೊಲೀಸ್ ಸಿಬ್ಬಂದಿಗಳಿಗೆ ನಾನಾ ಕಾರಣಗಳನ್ನು 
ನೀಡಿ ಸಾರ್ವಜನಿಕರು ಯಾವುದೇ ಭಯವಿಲ್ಲದೆಸಂಚರಿಸುವ ಆತಂಕ ಸೃಷ್ಟಿಸಲು ಕಾರಣವಾಗಿದೆ ಲಾಕ್ಡೌನ್ ಜಾರಿಯ ನಂತರವೂ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿಲ್ಲ ಪಟ್ಟಣದಲ್ಲಿ ಬೆಳಗಾಗುತ್ತಲೇ ನೂರಾರು ವಾಹನಗಳು ರಸ್ತೆಗೆ ಇಳಿಯುತ್ತಿರುವ ಪರಿಣಾಮ ಜನಸಂಚಾರ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆಬೆಳಿಗ್ಗೆ 11:00 ನಂತರವೂ ಪಟ್ಟಣದ ಪ್ರಮುಖ ರಸ್ತೆಗಳದ ಭವನೇಶ್ವರಿ ವೃತ್ತ. ಹಳೆ ಮಹಾತ್ಮ  ಗಾಂಧೀಜಿ ಬಸ್ ನಿಲ್ದಾಣ. ರಾಜೇಂದ್ರ ಪ್ರಸಾದ್ ರಸ್ತೆ. ರಾಮಾಲಯ ರಸ್ತೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ರಸ್ತೆ ಮರೇನಹಳ್ಳಿ ರಸ್ತೆ ಸೇರಿದಂತೆ ಟ್ರಾಫಿಕ್ ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಪೊಲೀಸ್ ಇಲಾಖೆಗೆ ಸಾರ್ವಜನಿರ ಒತ್ತಾಯ :- ಇಂತಹ ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ ಪಂಡಿತ್ ಮತ್ತು ಪೊಲೀಸ್ ಉಪನಿರೀಕ್ಷಕ ರಾದ ಸಂತೋಷ್ ಬಾಗೋಜಿ ಅವರು ದಿನನಿತ್ಯ ರಸ್ತೆಗಿಳಿದು ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವ ವಾಹನ ಸವಾರರಿಗೆ ದಂಡವನ್ನು ಹಾಕಿದರು ಕೂಡ  ವಾಹನ ಸವಾರರು ನಮಗರಿವಿಲ್ಲದಂತೆ ನಿರ್ಲಕ್ಷ್ಯತೆಯಿಂದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬೈಕುಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದಾರೆ 
ಮತ್ತು ಅತಿ ವೇಗವಾಗಿ ಅಜಾಗರೂಕತೆಯಿಂದ ಕರ್ಕಶ ಶಬ್ಧ ಮಾಡಿಕೊಂಡು ಹೋಗುತ್ತಿರುವ ವಾಹನಗಳಿಂದ ಪಾದಚಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಕೆಲ ವಾಹನ ಸವಾರರಂತೂ  ಸಂಚಾರಿ ನಿಯಮಗಳನ್ನು ಪಾಲಿಸುವುದೇ ಇಲ್ಲ ಪಟ್ಟಣದ ಮುಖ್ಯರಸ್ತೆಗಳಲ್ಲಿ ದಿನಕ್ಕೆ ಒಂದಾದರೂ ಸಣ್ಣಪುಟ್ಟ  ಅಪಘಾತಗಳು ನಡೆಯುತ್ತಲೇ ಇರುತ್ತವೆ ಇಂತಹ ವಾಹನಗಳನ್ನು ಸೀಸ್ ಮಾಡಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು  ಎಂದು ಜಗಳೂರು ಪಟ್ಟಣದ ಸಾರ್ವಜನಿಕರು  ಪೊಲೀಸ ಇಲಾಖೆಗೆ ಮನವಿ ಮಾಡುತ್ತಿದ್ದಾರೆ