
ಜಗಳೂರು.ಮೇ.೧೧:- ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯ ಗೊಂಡಿತು.ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಚುನಾವಣೆ ಸಂಜೆ 6 ಗಂಟೆಗೆ ಕೊನೆಗೊಂಡಿತು.ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.81.17 ರಷ್ಟು ಮತದಾನ ವಾಗಿದೆ. ಎಲ್ಲಿಯೂ ಯಾವುದೇ ಅಹಿತರ ಘಟನೆ,ಗಲಾಟೆ,ಗದ್ದಲ ಗಳು ನಡೆಯದಂತೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದವು.ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 192958 ಜನ ಮತದಾರ ರಿದ್ದು, 97690 ಪುರುಷ ಮತದಾರರು, 95257 ಮಹಿಳಾ ಮತ ದಾರರು,ಇತರೆ 11 ಮತದಾರರಿದ್ದಾರೆ. 262 ಮತಗಟ್ಟೆ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಶಾಂತಿಯುತ ಮತದಾನ ನಡೆದಿದೆ.ದೊಣೆಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 235ರಲ್ಲಿ ಸಂಜೆ 7 ಗಂಟೆ ಯವರೆಗೆ ಮತದಾನ ನಡೆಯಿತು. ನಿಗದಿಯಾದ 100 ಮೀ ವ್ಯಾಪ್ತಿಯಲ್ಲಿ ಸಂಜೆ 4.30ರ ನಂತರ ಏಕಾ ಏಕಿ 250ಕ್ಕೂ ಹೆಚ್ಚು ಮತದಾರರು ಸಾಲುಗಟ್ಟಿ ನಿಂತಿದ್ದರು.ಹೀಗಾಗಿ ಸಂಜೆ ಏಳು ಗಂಟೆ ಯವರೆಗೂ ಮತದಾನ ಪ್ರಕ್ರಿಯೆ ನಡೆಯಿತು.ಇತ್ತ ಬಿಳಿ ಚೋಡು ಗ್ರಾಮದ ಮತಗಟ್ಟೆಯಲ್ಲಿ ಸಂಜೆ 6.30 ಆದರೂ ಮತ ದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿ ದರು. ಉಳಿದಂತೆ ಯಾವುದೇ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ”ಜಗಳೂರು ಪಟ್ಟಣದ ಜಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 194 ಇಲ್ಲಿ ಸಖಿ ಮತಗಟ್ಟೆ ಕೇಂದ್ರವನ್ನು ತೆರೆಯಲಾಗಿದ್ದು ಬೆಳಿಗ್ಗೆ 7:00 ಯಿಂದ ಸಂಜೆ 6:00 ವರೆಗೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಮಹಿಳೆಯರು ಮೊಬೈಲ್ ಮೂಲಕ ಸೆಲ್ಫಿಯೊಂದಿಗೆ ಭಾವಚಿತ್ರ ತೆಗೆಯುವುದು ವಿಶೇಷವಾಗಿತ್ತು ಜಗಳೂರು ವಿಧಾನ ಸಭಾ ಕ್ಷೇತ್ರದ ಒಟ್ಟು ಮತದಾರರು. 192958, ಪುರುಷ-97690, ಮಹಿಳೆಯರು-95257, ಇತರೆ,11, ಪುರುಷರ ಮತದಾನ-79125, ಮಹಿಳೆಯರ ಮತದಾನ-75543 ಒಟ್ಟು ಮತದಾನ.1054695 ಜನರು ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.80.17% ರಷ್ಟು ತಾಲ್ಲೂಕಿನಲ್ಲಿ ಮತದಾನವಾಗಿದೆ.ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಾಂತಿಯುತ ಚುನಾವಣಾ ಕರ್ತವ್ಯ ಮುಗಿಸಿಕೊಂಡು ಜಗಳೂರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ ಮಸ್ಟರಿಂಗ್ ನಡೆದು ಇವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ಪೋಲಿಸ್ ಬಿಗಿ ಭದ್ರತೆ ಯೊಂದಿಗೆ ಜಿಲ್ಲಾ ಕೇಂದ್ರ ಕ್ಕೆ ರವಾನಿಸಲಾಗುವುದು.ಮೇ 13 ರಂದು ದಾವಣಗೆರೆ ವಿಶ್ವವಿದ್ಯಾಲಯ ದಲ್ಲಿ ಮತೆಣಿಕೆ ಕಾರ್ಯ ನಡೆಯಲಿದೆ.