ಜಗಳೂರು; ಲೋಕ ಅದಾಲತ್‍ನಲ್ಲಿ 217 ಪ್ರಕರಣಗಳು ಇತ್ಯರ್ಥ

ಜಗಳೂರು.ಡಿ.೨೦; ಇಲ್ಲಿನ  ನ್ಯಾಯಾಲಯದಲ್ಲಿ ಮೆಗಾ ಲೋಕ್‍ ಅದಾಲತ್ ಹಮ್ಮಿಕೊಳ್ಳಲಾಯಿತು.ಸದರಿ ಲೋಕ್‍ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಒಟ್ಟು-217 ಪ್ರಕರಣಗಳು ಇತ್ಯರ್ಥಗೊಡಿರುತ್ತವೆ ಹಾಗೂ ಒಟ್ಟು 55,59,273 ರೂ ಮೊತ್ತವು ರಾಜಿ ಸಂಧಾನದ ಮೂಲಕ ಸಂಬಂಧಿಸಿದ ಕಕ್ಷಿದಾರರು ಪಡೆದಿದ್ದಾರೆ.ಇದರಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಒಟ್ಟು 175 ಪ್ರಕರಣಗಳು ಇತ್ಯರ್ಥಗೊಡಿರುತ್ತವೆ ಹಾಗೂ ಒಟ್ಟು 33,43,077 ರೂ ಸಂದಾಯವಾಗಿರುತ್ತದೆ. ಪಾಲು ವಿಭಾಗ ಕೋರಿ ಸಲ್ಲಿಸಿದ 02 ಪ್ರಕರಣಗಳು , 2 ನಿರ್ಧಿಷ್ಟ ಪರಿಹಾರ ಅಧಿನಿಯಮ ಪ್ರಕರಣಗಳು ( Specific performance suits) ರಾಜಿಯಾಗಿರುತ್ತದೆ ಮತ್ತು ಚೆಕ್‍ ಬೌನ್ಸ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ 11 ಪ್ರಕರಣಗಳು ರಾಜಿಯಾಗಿದ್ದು 18,97,000 ರೂ ಸಂದಾಯದೊಂದಿಗೆ ರಾಜಿಯಾಗಿರುತ್ತದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಬ್ಯಾಂಕ್‍ಗೆ ಸಂಬಂಧಿಸಿದ ಪ್ರಕರಣಗಳಲ್ಲಿ 02 ಪ್ರಕರಣಗಳು ರಾಜಿಯಾಗಿದ್ದು, ಇದರಲ್ಲಿ ಒಟ್ಟು 2,28,990/- ರೂ ಸದರಿ ಬ್ಯಾಂಕ್‍ ಗೆ ಸಂದಾಯವಾಗಿರುತ್ತವೆ. 1 ಅಮಲ್‍ ಜಾರಿ ಪ್ರಕರಣ( Execution cases), ಜನನ ( birth cases) ಪ್ರಕರಣಗಳಿಗೆ ಸಂಬಂಧಿಸಿದ 31 ಪ್ರಕರಣಗಳು , 66 ಲಘು ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಹಾಗೂ 55 ತಪ್ಪೊ ಪ್ಪಿಗೆ ಪ್ರಕರಣಗಳ ಇವುಗಳಲ್ಲಿ (plea guilty cases) ಇತ್ಯರ್ಥಗೊಂಡಿರುತ್ತವೆ . ತಪ್ಪೊಪ್ಪಿಗೆ ಹಾಗೂ ಲಘು ಪ್ರಕರಣಗಳು ಇವುಗಳಲ್ಲಿ ಒಟ್ಟು 83,300/- ರೂ ಸರ್ಕಾರಕ್ಕೆ ಜಮೆಯಾಗಿರುತ್ತದೆ. ಈ ಮೂಲಕ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹೆಚ್ಚಾಗಿ ಇತ್ಯರ್ಥಗೊಂಡಿರುತ್ತವೆ.ಮುಂದುವರೆದು ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್.ಬಿ.ಐ , ಜಗಳೂರು ಬ್ಯಾಂಕ್‍ ನ 12 ಪ್ರಕರಣಗಳು ಇತ್ಯರ್ಥಗೊಂಡಿದ್ದು ಒಟ್ಟು 9,48,200/- ರೂ ಸದರಿ ಬ್ಯಾಂಕ್‍ ಜಮೆಯಾಗಿರುತ್ತದೆ. ಹಾಗೂ ಕೆನರಾ ಬ್ಯಾಂಕ್‍ , ಜಗಳೂರಿನ 8 ಪ್ರಕರಣಗಳು ಇತ್ಯರ್ಥಗೊಂಡಿದ್ದು ಒಟ್ಟು1078544/- ರೂ ಸದರಿ ಬ್ಯಾಂಕ್‍ ಗೆ ಜಮೆಯಾಗಿರುತ್ತದೆ. ಹಾಗೂ ಪಟ್ಟಣ ಪಂಚಾಯ್ತಿಯ ನೀರಿನ ಶುಲ್ಕ ಪಾವತಿ ಹಾಗೂ ಮಳಿಗೆ ಶುಲ್ಕ ಪಾವತಿ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಟ್ಟು 22 ಪ್ರಕರಣಗಳು ರಾಜಿಯಾಗಿದ್ದು ಒಟ್ಟು 1,89,452/- ರೂ ಸಂದಾಯವಾಗಿರುತ್ತದೆಒಟ್ಟಾರೆಯಾಗಿ ಈ ದಿನದ ಮೆಗಾ ಲೋಕ್‍ ಅದಾಲತ್ನಲ್ಲಿ ಒಟ್ಟು 217 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿರುತ್ತವೆ ಹಾಗೂ ಒಟ್ಟು 55,59,273/- ರೂ ಮೊತ್ತವು ರಾಜಿ ಸಂಧಾನದ ಮೂಲಕ ಸಂಬಂಧಿಸಿದ ಕಕ್ಷಿದಾರರು ಪಡೆದಿರುತ್ತಾರೆ.ಈ ಮೂಲಕ ನ್ಯಾಯವಾದಿಗಳ , ಪೋಲೀಸ್‍ ಇಲಾಖೆ , ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಎಲ್ಲಾ ಬ್ಯಾಂಕ್‍ ಮತ್ತು ಪಟ್ಟಣ ಪಂಚಾಯ್ತಿ ಹಾಗೂ ಕಕ್ಷಿದಾರರ ಸಹಕಾರದಿಂದ ಈ ದಿನದ ಮೆಗಾ ಲೋಕ್‍ ಅದಾಲತ್‍ ಯಶಸ್ವಿಯಾಗಿರುತ್ತದೆ ಎಂಬ ವಿಷಯವನ್ನು ಈ ಮೂಲಕ ತಿಳಿಸುತ್ತಾ , ಇದೇ ರೀತಿ ಮುಂದಿನ ಲೋಕ್‍ ಅದಾಲತ್‍ ನಲ್ಲಿಯೂ ಸಹ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಕಕ್ಷಿದಾರರು ನೆಮ್ಮದಿಯ ಹಾಗೂ ಸೌಹಾರ್ದಯುುತ ಬದುಕು ನಡೆಸುವಂತೆ ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಜಿ ತಿಮ್ಮಯ್ಯ  ಆಶಿಸಿದ್ದಾರೆ.