ಜಗಳೂರು; ಯಶಸ್ವಿಯಾದ ಲಸಿಕಾಶಿಬಿರ

ಜಗಳೂರು.ಸೆ.22. ಜಗಳೂರು ತಾಲ್ಲೂಕು ದೊಣ್ಣೆಹಳ್ಳಿ ಗ್ರಾಮ ಚಾಯಿತಿಯಲ್ಲಿ ಎರಡನೇ ಮತ್ತು ಮೊದಲೇ ಡೋಜ್ ಲಸಿಕೆಯನ್ನು ಯಶಸ್ವಿಯಾಗಿ ಹಾಕಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮೂಗಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.  ಎರಡು ದಿನಗಳಿಂದ ನಡೆಯುತ್ತಿರುವ 
ಲಸಿಕಾ ಶಿಬಿರಕ್ಕೆ ಕೋವೀಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಜನರೆ ಮುಂದೆ ಬರುತ್ತಿರುವುದು ಸಂತಸ ತಂದಿದೆ ಎಂದರು.  ಸುಮಾರು 90 ಜರಿಗೆ ಆಗುವಷ್ಟು ಆರೋಗ್ಯ ಇಲಾಖೆ ಲಸಿಕೆಯನ್ನು ಪೂರೈಸಿತ್ತು ಪ್ರಸ್ತುತ ಲಸಿಕೆ ಸಂಪೂರ್ಣ ವಾಗಿ ಖಾಲಿಯಾಗಿದೆ ಎಂದರು. ಬಹು ಮುಖ್ಯವಾಗಿ ಆಶಾ ಕಾರ್ಯಕರ್ತೆ ಯರ ಪಾತ್ರ ಇದರಲ್ಲಿ ಬಹುಮುಖ್ಯವಾಗಿದೆ ಅವರಿಗೆ ಎಷ್ಟುಭಾರಿ ಶಹಬ್ಬಾಸ್ ಹೇಳಿದರು ತೀರದು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ತಿಪ್ಪೇಸ್ವಾಮಿ, ಎಪ್. ಡಿ. ಎ.ಉಮೇಶ್, ಹೆಚ್ವುವರಿ ಬಿಲ್ ಕಲೇಕ್ಟರ್ ಮೆಹಬೂಬ್, ಕಂಪ್ಯೂಟರ್ ಆಪರೇಟರ್ ಕಾಮಗೇತನಹಳ್ಳಿ ಶಿವಣ್ಣ, ಆಶಾ ಕಾರ್ಯಕರ್ತೆ ಯರಾದ ಟಿ.ತಿಮ್ಮಕ್ಕ, ಎಂ.ಶಿಕಲಾ,ಬಿ.ಶಶಿಕಲಾ, ಜಿ.ವೀಣಾ ಶೂಷ್ರಶಕಿ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.