
ಜಗಳೂರು.ಡಿ.೨೯;: ಮತಎಣಿಕೆ ಕಾರ್ಯವನ್ನು ಎಚ್ಚರಿಕೆಯಿಂದ ಮಾಡಬೇಕು ಆದರೆ ಭಯ ಬೇಡ ಎಂದು ಗ್ರಾಮ ಪಂಚಾಯಿತಿ ಚುನಾವಣೆಯ ನೋಡೆಲ್ ಅಧಿಕಾರಿ ನಜ್ಮಾ ಮತ ಎಣಿಕೆ ಸಿಬ್ಬಂದಿಗಳಿಗೆ ಸಲಹೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಚುನಾವಣೆ ಶಾಖೆ ಯಿಂದ ಮತ ಎಣಿಕೆ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು , ಬ್ಯಾಲೆಟ್ ನಮೂನೆ ಯಾಗಿದ್ದು ನಿಮಗೆ ಇದು ತಿಳಿದಿರುತ್ತಾದೆ ನೀವು ಮೋದಲು ಮಾನಸಿಕವಾಗಿ ಸಿದ್ದಾರಾಗಬೇಕೆವಿನಹ ಭಯ ಪಡ ಬಾರದು.ಡಿ. 30 ರಂದು ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದ್ದು ಈ ವೇಳೆ ನಿಮಗೆ ನಿಯೋಜಿಸಿರುವ ಕೊಠಡಿಯ ಟೆಬಲ್ ಬಳಿ ಇರಬೇಕು ಮೊದಲು ಅಂಚೆ ಮತ ಪತ್ರಗಳ ಎಣಿಕೆ ನಡೆಯಲಿದೆ ನಂತರ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ ಸಿಬ್ಬಂದಿಗಳು ಜಾಗರೂಕತೆಯಿಂದ ಎಣಿಕೆ ಕಾರ್ಯದಲ್ಲಿ ತೊಡಬೇಕು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರಮೇಶ್, ಇಓ ಮಲ್ಲಾನಾಯ್ಕ, ಬಿಓ ವೆಂಕಟೇಶ್ ಸೇರಿದಂತೆ 130 ಮತ ಎಣಿಕೆ ಸಿಬ್ಬಂದಿಗಳು ಸೆಕ್ಟ್ ಅಧಿಕಾರಿಗಳು ಸೇರಿದಂತೆ ಚುನಾವಣಾ ಸಿಬ್ಬಂದಿಗಳಾದ ಲಂಕೇಶ್, ಶಿವಪ್ರಕಾಶ್ ತರಬೇತುದಾರ ರಜಾಕ್ ಸೇರಿದಂತೆ ಮತ್ತಿತರರು ಹಾಜರಿದ್ದರು