ಜಗಳೂರು; ಬಿಎಲ್ ಒ ಗಳ ಸಭೆ

ಜಗಳೂರು.ಜೂ.೧೧; ಕೋವಿಡ್ – 19 ಕ್ಕೆ ಸಂಬಂಧಪಟ್ಟಂತೆ ಜಗಳೂರು ಪಟ್ಟಣದಲ್ಲಿ ಪಾಜಿಟಿವ್ ಇರುವ ವ್ಯಕ್ತಿಗಳ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಲು ಬಿ.ಎಲ್.ಓ.ಗಳ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ತ್ವರಿತವಾಗಿ ಹಾಗೂ ನಿಗದಿತ ಸಮಯದ ಒಳಗಾಗಿ ಪ್ರಥಮ ಮತ್ತು ದ್ವಿತೀಯ ವ್ಯಕ್ತಿಗಳ ಮಾಹಿತಿಯನ್ನು ಕೋವಿಡ್ ಹ್ಯಾಪ್‌ನಲ್ಲಿ ನಿರ್ವಹಿಸಲು ಸೂಚಿಸಲಾಯಿತು. ಹಾಗೂ ಬಿ.ಎಲ್.ಓ.ಗಳು ನಿರ್ವಹಿಸುವ ಕೆಲಸಗಳಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಯಾಗಿರುವ ಮಂಜಪ್ಪ. ಡಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೀರೇಂದ್ರ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜಗಳೂರು. ಕಿಫಾಯತ್ ಅಹಮ್ಮದ್, ಕಿರಿಯ ಆರೋಗ್ಯ ನಿರೀಕ್ಷಕರು, ಸೂಪರ್‌ವೈಜರ್‌ಗಳು ಬಿ.ಎಲ್.ಓ.ಗಳು ಹಾಜರಿದ್ದರು.