ಜಗಳೂರು ಪ. ಪಂ 2,30,340 ಉಳಿತಾಯ ಬಜೆಟ್:ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಘೋಷಣೆ.

ಜಗಳೂರು.ಮಾ.೧೭; ಪಟ್ಟಣ ಪಂಚಾಯಿತಿ 2023-24 ನೇ ಸಾಲಿನಲ್ಲಿ ಪ್ರಾರಂಭಿಕ ಶುಲ್ಕ ಸೇರಿದಂತೆ ಆದಾಯ ₹ 52,44,28,117 ನಿರೀಕ್ಷಿದ ಖರ್ಚು ₹52,41,97,777 ಒಳಗೊಂಡಂತೆ ಒಟ್ಟು ₹230340 ಉಳಿತಾಯ ಬಜೆಟ್ ನ್ನು ಪಟ್ಟಣಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಘೋಷಿಸಿದರು.ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಯವ್ಯಯ ಮುಂಗಡಪತ್ರ ಘೋಷಣಾ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರಿ ನಿಯಮದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ,ವಿಕಲಚೇತನರ ಕಲ್ಯಾಣಕ್ಕಾಗಿ ₹24,63,210 ಅನುದಾನ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸಿಸಿ ರಸ್ತೆ,ಬಾಕ್ಸ್ ಚರಂಡಿ ಡಕ್ ನಿರ್ಮಾಣ,ಬೀದಿಗಳಿಗೆ ನಾಮಫಲಕ ಅಳವಡಿಕೆ,ಪಾರ್ಕ್ ಅಭಿವೃದ್ದಿ,ಶೌಚಾಲಯ,ಬೀದ ದೀಪ,ಘನತ್ಯಾಜ್ಯ ಸಂಸ್ಕರಣೆ, ಮುಕ್ತಿ ವಾಹನ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿ ಕಾರ್ಯಗಳಿಗೆ ಆದಾಯದಲ್ಲಿ ಅನುದಾನ ಅಂದಾಜಿಸಲಾಗಿದೆ ಎಂದು ತಿಳಿಸಿದರು.ಅಧಿಕಾರಿ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಸದಸ್ಯರು ಗರಂ :-ಕಳೆದ ವರ್ಷದಲ್ಲಿ ಘೋಷಿಸಿದ ಬಜೆಟ್ ಕಾರ್ಯರೂಪ ಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಈ ಬಾರಿ ಬಜೆಟ್ ಕೇವಲ ಘೋಷಣೆಗೆ ಸೀಮಿತವಾಗಬಾರದು. ಮಖ್ಯಾಧಿಕಾರಿ ತಮ್ಮ  ಸಿಬ್ಬಂದಿಗಳಿಗೆ ಕರವಸೂಲಿಗೆ ಖಡಕ್ ಸೂಚನೆ ನೀಡಬೇಕು ಆಗಮಿಸಿದ ಆದಾಯವನ್ನು ಸಮರ್ಪಕ ಅಭಿವೃದ್ದಿ ಕಾಮಗಾರಿಗಳಿಗೆ ಒತ್ತು ನೀಡಬೇಕು ಪ್ರತಿನಿತ್ಯ ವಾರ್ಡ್ ಗಳಿಗೆ ಶಾಂತಿಸಾಗರ ನೀರು ಪೂರೈಕೆಮಾಡಬೇಕು ಎಂದು ಸದಸ್ಯರಾದ ರವಿಕುಮಾರ್,ದೇವರಾಜ್ ತೀವ್ರ ತರಾಟೆ ತೆಗೆದುಕೊಂಡರು.ನಾಮನಿರ್ದೇಶಿತ ಸದಸ್ಯ ಬಿ.ಪಿ.ಸುಬಾನ್ ಮಾತನಾಡಿ,ಪ್ರಸಕ್ತ ಸಾಲಿನಲ್ಲಿನ ಕರವಸೂಲಾತಿ ಸಂಪನ್ಮೂಲದ ನಿಗದಿತ ಅಂಕಿ ಅಂಶದ ಮಾಹಿತಿ ಹಾಗೂ ವರ್ಗ -1 ರ ಖಚಿತ ಅನುದಾನದ ಬಗ್ಗೆ ಬಜೆಟ್ ನಲ್ಲಿ ನಮೂದಿಸಿಲ್ಲ, ಯಾವ ರೀತಿ ಆದಾಯ, ಖರ್ಚು ನಿರೀಕ್ಷಿಸಿರುವಿರಿ ಎಂದು ಪ್ರಶ್ನಿಸಿದ ಅವರು.ಘನ ತ್ಯಾಜ್ಯ ವಿಲೆವಾರಿ ಘಟಕದ ಸರ್ಕಾರಿ ಜಾಗವನ್ನು ಅಧಿಕಾರಿಗಳು ಸುಪರ್ಧಿಗೆ ಪಡೆದಿಲ್ಲ,ಎಸ್ ಎಫ್ ಸಿ ಅನುದಾನ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕಿತ್ತು ಹಾಗೂ ಬೇಸಿಗೆ ಸಮಯ ವಾಗಿದ್ದು.ಕುಡಿಯುವ ನೀರಿನ ಪೂರೈಕೆ ಕುರಿತು ಪ್ರತ್ಯೇಕ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು.