ಜಗಳೂರು ಪ.ಪಂ. ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಛೇಂಬರ್ ಸಜ್ಜು

ಜಗಳೂರು.ನ.೯; ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ನಾಳೆಯಿಂದ ಅಧಿಕೃತವಾಗಿ ಪ.ಪಂ. ಆಡಳಿತ ಮಂಡಳಿಯ ಕಾರ್ಯಭಾರ ಆರಂಭವಾಗಲಿದ್ದು ಪ.ಪಂ.ಅಧಿಕಾರಿಗಳು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ.  ಈಗಾಗಲೇ ಪ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿದೆ. ಅದಕ್ಕೆ ಸುಣ್ಣ-ಬಣ್ಣದಿಂದ ಶೃಂಗರಿಸಲಾಗಿದೆ. ಆಡಳಿತ ಮಂಡಳಿ ಸದಸ್ಯರಿಗೆ ಬೇಕಾದ ಅಗತ್ಯ ಪಿಠೋಪಕರಣಗಳನ್ನು ಹಾಕಿ ಸಜ್ಜಗೊಳಿಸಲಾಗಿದೆ.  ಫ್ಯಾನ್ಗಳ ಅಳವಡಿಕೆ, ಕಿಟಕಿಗಳಿಗೆ ಕರ್ಟ್ನ್  ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯವನ್ನು ಈ ಕೊಠಡಿಗೆ ಒದಗಿಸಲಾಗಿದ್ದು ಛೇಂಬರ್ ರಿಫರೆಂಟಾಗಿ ಕಂಗೊಳಿಸುತ್ತಿದೆ.  ಕಳೆದ ಒಂದು ವಾರದಿಂದ ಕೊಠಡಿಯ ರಿಪೇರಿ, ಸುಣ್ಣ-ಬಣ್ಣ, ವಿದ್ಯುತ್ ಸಂಪರ್ಕ ಸೇರಿದಂತೆ ಇತರೇ ಕೆಲಸಗಳನ್ನು ವಿಶೇಷ ಮುತುವರ್ಜಿಯಿಂದ ನಿರ್ವಹಿಸಿರುವ ಅಧಿಕಾರಿಗಳು ನೂತನ ಆಡಳಿತ ಮಂಡಳಿಯನ್ನು ಸ್ವಾಗತಿಸಲು ತಯಾರಿ ನಡೆಸಿದ್ದಾರೆ. 

ನಾಳೆ ಮಧ್ಯಾಹ್ನ 1.30 ರ ವೇಳೆಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯ ಘೋಷಣೆ ಹೊರ ಬೀಳಲಿದೆ. ಆಡಳಿತಾಧಿಕಾರಿಗಳಿಂದ ಅಧಿಕಾರ ವಹಿಸಿಕೊಳ್ಳುವ ಆಡಳಿತ ಮಂಡಳಿ ಈ ಕೌನ್ಸಿಲ್ ಕೊಠಡಿಯಲ್ಲಿ ಕಾರ್ಯಭಾರ ಆರಂಭಿಸಲಿದ್ದಾರೆ.  ಈ ನವ ನೂತನ ಛೇಂಬರ್ನಲ್ಲಿ ಕಾರ್ಯಭಾರ ಆರಂಭಿಸುವ ಅದೃಷ್ಠ ಯಾರಿಗೆ ಇದೆ ಎಂಬುದು ಕುತೂಹಲ ಮೂಡಿಸಿದೆ.  “ಈಗಿರುವ ಪ.ಪಂ. ಕಚೇರಿ ಕಿಷ್ಕಿಂದೆಯಿಂದ ಕೂಡಿದೆ. ಹಾಗಾಗಿ ಕಛೇರಿಯ ಮುಂಭಾಗದಲ್ಲಿದ್ದ ವಿಶಾಲವಾದ ಕೊಠಡಿಯನ್ನು ಕೌನ್ಸಿಲ್ ಛೇಂಬರ್ ಆಗಿ ಪರಿವರ್ತಿಸಿ ಅದಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ನಾಳೆಯಿಂದ ನೂತನ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸದಸ್ಯರು ಈ ಕೊಠಡಿಯಲ್ಲಿ ಕಾರ್ಯಭಾರ ಆರಂಭಿಸಲಿದ್ದಾರೆ.”   –ರಾಜು ಬಣಕಾರ್, ಮುಖ್ಯಾಧಿಕಾರಿ, ಪ.ಪಂ. ಜಗಳೂರು.