ಜಗಳೂರು ಪ.ಪಂ ಅಧ್ಯಕ್ಷ- ಉಪಾಧ್ಯಕ್ಷರ ಕೊಠಡಿ ಸಜ್ಜು

ಜಗಳೂರು.ನ.೧೨;  ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರಿಗೆ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ರಾಜು ಡಿ ಬಣಕಾರ್  ಚೇಂಬರ್ ಸಜ್ಜುಗೊಳಿಸಿದರು 
ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ದಿನಾಂಕ 9 ರಂದು ಅಧಿಕೃತವಾಗಿ ಅವಿರೋಧವಾಗಿ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆಆರ್ ತಿಪ್ಪೇಸ್ವಾಮಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಮ್ಮ ಶಿವಣ್ಣ ಅವರನ್ನು  ಪಟ್ಟಣ ಪಂಚಾಯಿತಿ ಸದಸ್ಯರು  ಅವಿರೋಧವಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ
ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ಕಾರ್ಯಭಾರ ಆರಂಭವಾಗಲಿದ್ದು ಪಟ್ಟಣ  ಪಂಚಾಯಿತಿ   ಮುಖ್ಯ ಅಧಿಕಾರಿಗಳು ಕೌನ್ಸಿಲರ್ ಕೊಠಡಿಗೆ ಎಲ್ಲಾ ರೀತಿಯ ಪೀಠೋಪಕರಣಗಳ ತಯಾರಿ ನಡೆಸಿದ್ದರು 
ನೂತನ ಈ ಕೌನ್ಸಿಲರ್ ಕೊಠಡಿಯನ್ನು ತಾಲೂಕಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಅವರಿಂದ ಟೇಪ್ ಕಟ್ ಮಾಡುವ ಮುಖಾಂತರ ಉದ್ಘಾಟನೆ  ಮಾಡಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರಿಗೆ ಮತ್ತು ಸರ್ವ ಸದಸ್ಯರಿಗೆ ಶುಭ ಹಾರೈಸಿದರು
ಈಗಾಗಲೇ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿದೆ ಕೌನ್ಸಿಲರ್ ಕೊಠಡಿಗೆ ಸುಣ್ಣ ಬಣ್ಣದಿಂದ ಶೃಂಗರಿಸಲಾಗಿದೆ ಆಡಳಿತ ಮಂಡಳಿ ಸದಸ್ಯರಿಗೆ ಬೇಕಾದ ಎಲ್ಲಾ ಪೀಠೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ ಫ್ಯಾನ್ ಅಳವಡಿಕೆ ಕಿಟಕಿಗಳಿಗೆ ಕರ್ಟನ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕೊಠಡಿಗೆ ಒದಗಿಸಲಾಗಿದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸದಸ್ಯರ ಕೊಠಡಿ ಏನೋ ಒಂಥರಾ ಡಿಫರೆಂಟ್ ಆಗಿ ಕಂಗೊಳಿಸುತ್ತಿದೆ 
ಕಳೆದ ಒಂದು ವಾರದಿಂದ ಕೊಠಡಿಯ ರಿಪೇರಿ ಸುಣ್ಣ-ಬಣ್ಣ ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಕೆಲಸಗಳನ್ನು ವಿಶೇಷ ಮುತುವರ್ಜಿಯಿಂದ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳು ನೂತನ ಆಡಳಿತ ಮಂಡಳಿಯನ್ನು ಸ್ವಾಗತಿಸಲು ತಯಾರಿ ನಡೆಸಿದ್ದರು 
ಈ ನವ ನೂತನ ಛೇಂಬರಿನಲ್ಲಿ ಕಾರ್ಯಭಾರ ಆರಂಭಿಸುವ ಅದೃಷ್ಟ ಯಾರಿಗಿದೆ ಎಂಬುದುಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತ್ತು ಆದರೆ ಬುದುವಾರ 12:30 ರ ವೇಳೆಗೆ ನೂತನ ಅಧ್ಯಕ್ಷ (ಎಂಎಲ್ಎ )ಆರ್. ತಿಪ್ಪೇಸ್ವಾಮಿ ಮತ್ತು ಉಪಾಧ್ಯಕ್ಷೆ ಲಲಿತಮ್ಮ ಶಿವಣ್ಣ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕುರ್ಚಿಗಳನ್ನು ವಿಶೇಷ ಪೂಜೆ ಸಲ್ಲಿಸುವುದರ ಪಟ್ಟಣ ಪಂಚಾಯತಿಯ ಸರ್ವಸದಸ್ಯರ  ಮುಖಾಂತರ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ 
” ಈಗಿರುವ ಪಟ್ಟಣ ಪಂಚಾಯಿತಿ ಕಚೇರಿ ಬಹಳ ಇಕ್ಕಟ್ಟಿನಿಂದ ಕೂಡಿತ್ತು ಹಾಗಾಗಿ ಕಚೇರಿಯ ಮುಂಭಾಗದಲ್ಲಿ ಇದ್ದ ವಿಶಾಲವಾದ ಕೊಠಡಿಯನ್ನು ಕೌನ್ಸಿಲ್ ಚೇಂಬರ್ ಆಗಿ ಪರಿವರ್ತಿಸಿ ಅದಕ್ಕೆ ಬೇಕಾದ ಅಗತ್ಯ ಮೂಲಭೂತ  ಸೌಲಭ್ಯಗಳನ್ನು ಒದಗಿಸಲಾಗಿದೆ  ಬುಧವಾರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮತ್ತು ಸದಸ್ಯರು ಈ ಕೊಠಡಿಯಲ್ಲಿ ಕಾರ್ಯಭಾರ ಆರಂಭಿಸಿದ್ದಾರೆ “
 ರಾಜು ಡಿ ಬಣಕಾರ್  ಮುಖ್ಯಾಧಿಕಾರಿ  ಪಟ್ಟಣ ಪಂಚಾಯಿತಿ ಜಗಳೂರು