ಜಗಳೂರು‌ ಪ.ಪಂನಲ್ಲಿ ಮರು ಬಹಿರಂಗ ಹರಾಜು

ಜಗಳೂರು.ಮಾ‌.12:- ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ  ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್  ಅಧ್ಯಕ್ಷತೆಯಲ್ಲಿ ಬಹಿರಂಗ ಮರು ಹರಾಜು ಪ್ರಕ್ರಿಯೆ ನಡೆಯಿತು.ಈ ವೇಳೆ ಬಿಡ್ ದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಗೂಡಾಂಗಡಿ ನೆಲಬಾಡಿಗೆ ತರಕಾರಿ ಮಾರುಕಟ್ಟೆಯನ್ನು ₹ 8.70.000.ಎಚ್.ಉಮೇಶ್,ಖಾಸಗಿ ಬಸ್ ನಿಲ್ದಾಣವನ್ನು ₹1.40.000.ಮಧುಸೂಧನ್,ಕೋಳಿ ಕಸಾಯಿಖಾನೆ ಮೀನು ಮಾರಾಟ ಸುಂಕ ವಸೂಲಿ ಯನ್ನು ₹85.000 ಎಂ ಪ್ರಕಾಶ್ ಅವರಿಗೆ ಹರಾಜುವಾದವು.”ನಂತರ ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಹರಾಜು ಮೊತ್ತದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು‌.ಅನುಮೋದನೆ ನೀಡಿದ ನಂತರ ಸುಂಕ ವಸೂಲಿ ಪ್ರಕ್ರಿಯೆ ಆರಂಭಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್,ಸದಸ್ಯರಾದ ರಮೇಶ್ ರೆಡ್ಡಿ ,ಶಕೀಲ್ ಅಹಮ್ಮದ್, ಆರ್.ತಿಪ್ಪೇಸ್ವಾಮಿ, ರವಿಕುಮಾರ್. ಗಿರೀಶ್ ,ಮುಖಂಡರಾದ ಓಬಳೇಶ್,ಶಿವಣ್ಣ,ಜೆ ಸಿ ಓಬಳೇಶ್ .ರಮೇಶ್ ಪ ಪಂ ಕಂದಾಯ ನಿರೀಕ್ಷಕ ಮೋಹಿದ್ದೀನ್ ಆರೋಗ್ಯ ನಿರೀಕ್ಷಕ ಕಿಪಾಯಿತ್ .ನಾಯಕ್. ನಾಗರಾಜ್. ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಹರಾಜು ಪ್ರಕ್ರಿಯದಾರರು ಹಾಜರಿದ್ದರು