ಜಗಳೂರು; ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅವಿರೋಧ ಆಯ್ಕೆ

ಜಗಳೂರು.ಜು.೧೪: ಪಟ್ಟಣದ ಬಿ.ಆರ್. ಸಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ,ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧ ವಾಗಿ ಆಯ್ಕೆ ಮಾಡಲಾಯಿತು.ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾಗಿಸಿ.ಮಹಂತೇಶ್ ,ಉಪಾಧ್ಯಕ್ಷರಾಗಿ ವೆಂಕಟೇಶ್.ಜಿ.ರಾಜ್ಯ ಪರಿಷತ್ ಸದಸ್ಯರಾಗಿ ಕೆ.ಟಿ.ಚಿಕ್ಕಣ್ಣ,ಕಾರ್ಯದರ್ಶಿಯಾಗಿ ಎಸ್.ಜೆ.ಮಧು,ಖಜಾಂಚಿಯಾಗಿ ಹೆಚ್ ಹನುಮಂತಪ್ಪ,ಸಹ ಕಾರ್ಯದರ್ಶಿಯಾಗಿ ಗೋವಿಂದಪ್ಪ ,ಸಂಘಟನಾ ಕಾರ್ಯದರ್ಶಿಯಾಗಿ ಎ.ಎಸ್ ಕಲ್ಲಿನಾಥ್, ನಿರ್ದೇಶಕರಾಗಿ ಹೆಚ್ .ಬಸವರಾಜ್ ಹಾಗೂ ವಿಶ್ವನಾಥ್ ಜಂಬಗಿ ಇವರುಗಳು 2022-2027 ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಡಿ.ಡಿ‌.ಹಾಲಪ್ಪ ತಿಳಿಸಿದ್ದಾರೆ.ಜಿಲ್ಲಾ ಪ್ರೌ.ಸ.ಶಿ.ಸಂಘದ ಜಿಲ್ಲಾ ಕಾರ್ಯದರ್ಶಿ ಮುಭಾರಕ್ ಮಾತನಾಡಿ ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು.ಉತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಘವನ್ನು ಬೆಳೆಸುವಂತೆ ಕರೆ ನೀಡಿದರು. ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಜಿಲ್ಲಾ ಸಂಘದಿಂದ ಪ್ರಮಾಣಪತ್ರ,ಶಾಲು ಹಾಗೂ ಮಾಲೆಗಳೊಂದಿಗೆ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಕ.ರಾ.ಸ.ನೌ.ಸಂಘದ ತಾಲ್ಲೂಕುಅಧ್ಯಕ್ಷ ಬಿ.ಆರ್.ಚಂದ್ರಪ್ಪ.ಸಂಘದ ನಿಕಟ ಪೂರ್ವ ಅಧ್ಯಕ್ಷ ಎಲ್.ಟಿ.ಬಸವರಾಜ್ ಜಿಲ್ಲಾ ಘಟಕದ ಕಾರ್ಯದರ್ಶಿ ಮುಭಾರಕ್,ಖಜಾಂಚಿ ದ್ವಾರಕೀಶ್ ನಾಯ್ಕ,ಗಂಗಾಧರ್,ಸಿದ್ದಪ್ಪ. ತಾಲ್ಲೂಕು ಮು.ಶಿ.ಸಂಘದ ಅಧ್ಯಕ್ಷ ಬಾಬುರೆಡ್ಡಿ.,ಜಿಲ್ಲಾ ಘಟಕದ  ಮಾಜಿ ಉಪಾಧ್ಯಕ್ಷ ಜಯಶೀಲರಡ್ಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.