ಜಗಳೂರು ಪೊಲೀಸರಿಂದ ಸಾರ್ವಜನಿಕರಿಗೆ ಜಾಗೃತಿ

ಜಗಳೂರು.ಮೇ.೪;  ಪಟ್ಟಣದಲ್ಲಿ ಕೋರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ  ಸಾರ್ವಜನಿಕರು ಹೊರಗಡೆ ಅನಾವಶ್ಯಕವಾಗಿ ತಿರುಗಾಡಿದರೆ ಲಾಠಿ ಏಟು ಖಚಿತ ಎಂದು ಜಗಳೂರಿನ ಸಿ.ಪಿ.ಐ ಮತ್ತು ಪಿ.ಎಸ್.ಐ ಎಚ್ಚರಿಕೆ ನೀಡಿದ್ದಾರೆ.ಕೊರೋನಾ ವೈರಸ್ ವಿರುದ್ಧ ಹಗಲು-ರಾತ್ರಿಯೆನ್ನದೆ ಪೊಲೀಸ್ ಇಲಾಖೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಪಟ್ಟಣಗಳಲ್ಲಿ ನಿರಂತರ ಜನರಿಗೆ ಜಾಗೃತಿ ಮೂಡಿಸುವಲ್ಲಿ ಹರಸಾಹಸ ಪಡುತ್ತಿದ್ದರು ಜನರು ಮಾತ್ರ ಅರಿವಿಲ್ಲದೆ ಓಡಾಡುತ್ತಿದ್ದಾರೆ.ಜಗಳೂರು ಪಟ್ಟಣದಲ್ಲಿ ದಿನನಿತ್ಯ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಎಸ್.ಬಿ.ಐ  ಬ್ಯಾಂಕ್ ರಸ್ತೆ ಹಳೆ ಮಹಾತ್ಮ ಗಾಂಧೀಜಿ ಬಸ್ ನಿಲ್ದಾಣ ಮರೆನಹಳ್ಳಿ ರಸ್ತೆ ಎನ್.ಎಂ.ಸಿ ಹೋಟೆಲ್ ಮತ್ತು ನಂದಿನಿ ಹೋಟೆಲ್ ಮುಂದೆ  ಡಿ.ಸಿ.ಸಿ ಬ್ಯಾಂಕ್ ರಸ್ತೆ ರಾಮಾಲಯ ರಸ್ತೆ ಮತ್ತು ಎರಡು ರಸ್ತೆ ಬದಿಯಲ್ಲಿ ಜನದಟ್ಟಣೆ ಇದೆ. ಬೀದಿ ಬದಿಯ ವ್ಯಾಪಾರಿಗಳು ಮತ್ತು ತರಕಾರಿ ಹಣ್ಣು ವ್ಯಾಪಾರಿಗಳು  ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ವೃತ್ತ ನಿರೀಕ್ಷಕರಾದ ಮಂಜುನಾಥ್ ಪಂಡಿತ್ ಮಾತನಾಡಿ  ಪೊಲೀಸ್ ಇಲಾಖೆ  ವಾಹನಗಳ ಮೂಲಕ ಜಾಗೃತಿ ಮೂಡಿಸಿದರು ಮುಖಕ್ಕೆ ಮಾಸ್ಕ್ ಹಾಕದೆ ಬೇಕಾ ಬಿಟ್ಟಿ ಎಲ್ಲೆಂದರಲ್ಲಿ ಓಡಾಟ ಮಾಡುತ್ತಿದ್ದಾರೆ ನಮ್ಮ ಪೊಲೀಸ್ ಇಲಾಖೆ ದಿನನಿತ್ಯ ಸಾರ್ವಜನಿಕರಿಗೆ ಎಷ್ಟೇ ಜಾಗೃತಿ ಮೂಡಿಸಿದರು ಜನರು ತಿಳಿದು ಕೊಳ್ಳುತ್ತಿಲ್ಲ ಈ ಸೋಂಕು ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ ಆಗ ಮನೆಯ ಒಬ್ಬ ಸದಸ್ಯರು ಮಾಡಿದ ತಪ್ಪಿಗೆ ಕುಟುಂಬ ವರ್ಗದವರೆಲ್ಲ ಕೋರೋನ ಸೋಂಕಿತರ ಆಗೋದು ಬೇಡ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.ಉಪನಿರೀಕ್ಷಕ ಸಂತೋಷ್ ಬಾಗೋಜಿ ಮಾತನಾಡಿ ಪಟ್ಟಣ ಮತ್ತು ಗ್ರಾಮಗಳಲ್ಲಿ ಯಾರು ಗುಂಪಾಗಿ ಸೇರಬೇಡಿ ಅನವಶ್ಯಕವಾಗಿ ಹೊರಗಡೆ ಬರಬೇಡಿ ತಮ್ಮ ತಮ್ಮ ಮನೆಯಲ್ಲಿ ಇರಿ ರಾಜ್ಯ ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಆದೇಶವನ್ನು  ಪಾಲಿಸಿ ವೈರಸ್ಸಿನ ವಿರುದ್ಧ ಎಲ್ಲರೂ ಹೋರಾಡೋಣ ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಾವು ಏನನ್ನು ಬೇಕಾದರೂ ಸಾಧನೆ ಮಾಡಬಹುದು ತಮ್ಮ ಗ್ರಾಮಗಳಲ್ಲಿ ಬೇರೆ ಕಡೆಯಿಂದ ಯಾರಾದರೂ ಬಂದರೆ ಪೋಲಿಸ್ ಇಲಾಖೆಗೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಿ ಮುತ್ತು ಗ್ರಾಮಗಳಲ್ಲಿ ಇಂತಹ ಸಮಯದಲ್ಲಿ ಯಾರು ಅನವಶ್ಯಕವಾಗಿ ಜಗಳ ಮಾಡಿಕೊಂಡು ಪೊಲೀಸ್ ಠಾಣೆಗೆ ಬರೋದು ಬೇಡ ಎಂದು ಗ್ರಾಮಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗಿದೆ ಎಂದರು.