ಜಗಳೂರು ಪಿಎಸ್‌ಐ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ


ತಾಲೂಕಿನ ಪೊಲೀಸ್ ಠಾಣೆಗೆ ನೂತನ ಆರಕ್ಷಕ ಉಪ ನಿರೀಕ್ಷಕರಾಗಿ ಸಂತೋಷ್ ಬಾಗೋಜಿ ಅಧಿಕಾರ ವಹಿಸಿಕೊಂಡಿದ್ದಾರೆ
ಹಿಂದೆ ಆರಕ್ಷಕ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ್ ಬಾಬು ಅವರು ವರ್ಗಾವಣೆಗೊಂಡು ದಾವಣಗೆರೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ. ಸಂತೋಷ್ ಬಾಗೋಜಿ ಅವರು ಮೂಲತಹ ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ವರಾಗಿದ್ದು ಇವರು ೨೦೧೭ ನೇ ಸಾಲಿನ ಬ್ಯಾಚ್ ನಲ್ಲಿ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಿ ಇವರು ತನ್ನ ಪ್ರಬೊಸನರಿ ತರಬೇತಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮುಗಿಸಿ ಇದೀಗ ಮೊದಲನೆಯದಾಗಿ ಜಗಳೂರು ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ