ಜಗಳೂರು ಪಿಎಸ್ಐ ಬಸವರಾಜ್ ನಿವೃತ್ತಿ;ಆತ್ಮೀಯ ಬೀಳ್ಕೋಡುಗೆ

ಸಂಜೆವಾಣಿ ವಾರ್ತೆ
ಜಗಳೂರು.ಆ.೧-:  ವೃತ್ತಿ ಹೊಂದಿದ ಪಿಎಸ್ಐ ಸಿ.ಎನ್ ಬಸವರಾಜು ಅವರಿಗೆ ಪೊಲೀಸ್ ಠಾಣೆಯಲ್ಲಿ  ಆತ್ಮೀಯ ಬಿಳ್ಕೊಡುಗೆ ನೀಡಲಾಯಿತು.ಈ ವೇಳೆ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಘನತೆಯಿಂದ ನಿವೃತ್ತಿ ಹೊಂದುವುದು ಸವಾಲಿನ ಕೆಲಸವಾಗಿದೆ ಎಂದರು.ಪಿಎಸ್ಐ ಬಸವರಾಜು ಅವರು 30 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಇಲಾಖೆಗೆ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ಶ್ಲಾಘನೀಯ, ಪೊಲೀಸ್ ಇಲಾಖೆಗೆ ಸೇರಿದ ಮೇಲೆ ವೈಯಕ್ತಿಕ ಜೀವನಕ್ಕೆ ಸಮಯ ಕೊಡುವುದು ಕಷ್ಟ ಸಾಧ್ಯ, ಬಸವರಾಜ್ ಅವರು ನಗುನಗುತ್ತಲೆ ಠಾಣೆಗೆ ಸಮಸ್ಯೆ ಎಂದು ಬಂದವರಿಗೆ ಮುಗುಳ್ನಗುತ್ತಲೆ ಉತ್ತರಿಸಿ ಸಮಾಧಾನಪಡಿಸಿ ಕೆಲಸ ಮಾಡಿದ್ದಾರೆ  ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜು  ಪೊಲೀಸ್ ಇಲಾಖೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದೆ,ಕಷ್ಟಗಳು ಬಂದಾಗ ಪೊಲೀಸರು ಹೆದರಬಾರದು ಆರೋಪಗಳನ್ನು ಎದುರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಿಎಸ್ಐ ಎಸ್ ಡಿ ಸಾಗರ್, ಎಎಸ್ಐ ನಾಗರಾಜ್, ಚಂದ್ರಶೇಖರ್ ಸಿಬ್ಬಂದಿಗಳಾದ ಆನಂದ್ ಮಾರುತಿ, ರಮೇಶ್, ನಾಗರಾಜ್, ಶಿವಕುಮಾರ್, ಮಾರಪ್ಪ, ನಾಗಭೂಷಣ್. ಗಿರೀಶ್. ಚೈತ್ರ ಬಾಯಿ. ಮೇಘ. ಸೇರಿದಂತೆ  ಮುಂತಾದವರು ಹಾಜರಿದ್ದರು.