ಜಗಳೂರು; ಪತ್ರಕರ್ತರಿಗೆ ಮಾಸ್ಕ್ ವಿತರಣೆ

ಜಗಳೂರು.ಮೇ.೨೮; ಪತ್ರಕರ್ತರು ತಮ್ಮ ವೈಯಕ್ತಿಕ ಆರೋಗ್ಯ ಲೆಕ್ಕಿಸದೆ ರಾಜ್ಯ ಸರ್ಕಾರ  ಲಾಕ್ ಡೌನ್ ಘೋಷಿಸಿದ ಅವಧಿಯಲ್ಲಿ‌ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು  ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಬಿ ಮಹೇಶ್ವರಪ್ಪ ಹೇಳಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಪತ್ರಿಕಾಭವನದಲ್ಲಿ ತಾಲೂಕಿನ 30 ಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತರಿಗೆ ಆಹಾರದ ದಿನಸಿ ಫುಡ್ ಕಿಟ್ ಮತ್ತು ಎನ್ 95 ಮಾಸ್ಕ್,  ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಅವರು  ಕೋವಿಡ್-19  ಕೋರೋನ ವೈರಸ್ಸಿನಿಂದ ಇಡೀ ರಾಜ್ಯ ಸರ್ಕಾರ ಲಾಕ್ ಡೌನ್ ಆದರೂ ಸಹ ಪತ್ರಕರ್ತರು ಧೃತಿಗೆಡದೆ ತಮ್ಮ ಸೇವಾ ಮನೋಭಾವ ತೋರಿದ್ದು  ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಇವರ ಸಾಮಾಜಿಕ‌ ಜವಾಬ್ದಾರಿಗೆ ಸರ್ವರೂ  ಸಹಾಯಸ್ತ ಚಾಚಬೇಕು ಪತ್ರಕರ್ತರಿಗೆ ನನ್ನ ವೈಯಕ್ತಿಕ ಒಂದು ತಿಂಗಳ ವೇತನದಲ್ಲಿ ಆಹಾರ ದಿನಸಿ ಪದಾರ್ಥ ಹಾಗೂ  ಎನ್ 95 ಮಾಸ್ಕ್, ಸ್ಯಾನಿಟೈಸರ್ ನೀಡುತ್ತಿದ್ದೇನೆ.ಪತ್ರಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯ ಪತ್ರಕರ್ತರು ತಮ್ಮ ಕುಟುಂಬವನ್ನು ಲೆಕ್ಕಿಸದೆ  ಲಾಕ್ ಡೌನ್ ಸಂದರ್ಭದಲ್ಲಿಯೂ ತಮ್ಮ ಪ್ರಾಣದ ಹಂಗನ್ನೇ ತೊರೆದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅಲ್ಲದೆ‌ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಯಾವುದೇ ವೇತನ ಸೇವಾ ಭದ್ರತೆ ಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಅಣಬೂರು ಮಠ ಕೊಟ್ರೇಶ್. ತಾಲೂಕು ಅದ್ಯಕ್ಷ ಜಿ ಎಸ್ ಚಿದಾನಂದಪ್ಪ.ಕಾರ್ಯದರ್ಶಿ ಲೊಕೇಶ್.ಎಮ್ ಐಹೊಳೆ. ಎಂ.ಸಿ ಬಸವರಾಜ್.ಬಾಬು ಎಚ್ ಮರೆನಹಳ್ಳಿ.ಮಂಜಯ್ಯ.ತಿಪ್ಪೇಸ್ವಾಮಿ ಗೊಗುದ್ದು. ದನ್ಯಕುಮಾರ್.ವಾಸಿಂ. ಮಂಜಣ್ಣ.ಮಾರುತಿ.ಮಾರಪ್ಪ.ರಾಕಿಬ್. ಮಹಾಲಿಂಗಪ್ಪ.ಮಾರುತಿ ಇದ್ದರು.