ಜಗಳೂರು ಪಟ್ಟಣಪಂಚಾಯಿತಿ ಮೇಲ್ದರ್ಜೆಗೆ ಸರ್ಕಾರಕ್ಕೆ ಪ್ರಸ್ತಾವನೆ :ಶಾಸಕ ಎಸ್ ವಿ.ರಾಮಚಂದ್ರ

ಜಗಳೂರು.ಡಿ.೨೯: ಪಟ್ಟಣದಲ್ಲಿ 45 ಕೋಟಿ ವೆಚ್ಚದ ಒಳಚರಂಡಿ ನಿರ್ಮಾಣ ಮಂಜೂರಾತಿ ಯಾಗಿ ಡಿಪಿಆರ್ ಟೆಂಡರ್  ಪ್ರಕ್ರಿಯೆಯಲ್ಲಿದೆ ಶೀಘ್ರ ಕಾಮಗಾರಿ ಕೈಗೊಳ್ಳಲಾಗುವ ಮೂಲಕ ಪಟ್ಟಣದ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ತರಲು ಮುಖ್ಯಮಂತ್ರಿ ಯಡಿಯೂರಪ್ಪರವರ ಬಳಿ ನಿಯೋಗ ತೆರಳಲಾಗುವುದು ಎಂದು  ಶಾಸಕ ಎಸ್ ವಿ ರಾಮಚಂದ್ರ ಹೇಳಿದರು.ಪಟ್ಟಣದ ಪಟ್ಟಣಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಪ್ರಥಮ ಸಾಮಾನ್ಯಸಭೆಯಲ್ಲಿ ಭಾಗವಹಿಸಿ ನೂತನ ಸದಸ್ಯರಿಗೆ ಶುಭ ಕೋರಿ ನಂತರ ಅಭಿವೃದ್ದಿ ಕನಸಿನಬಗ್ಗೆ ಮಾತನಾಡಿದರು.ಪಟ್ಟಣದ ನೆರೆಹೊರೆಯಲ್ಲಿನ 8ರಿಂದ 10 ಹಳ್ಳಿಗಳನ್ನೊಳಗೊಂಡಂತೆ ಪಟ್ಟಣಪಂಚಾಯಿತಿ ಮೇಲ್ದರ್ಜೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಐತಿಹಾಸಿಕ ಕೆರೆಗೆ ನೀರು ಬರುವ ಹಿನ್ನೆಲೆ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಪಟ್ಟಣದಿಂದ ಬರುವ ಚರಂಡಿ ನೀರನ್ನು ಸಂಸ್ಕರಿಸಿ ಕೆರೆ ನೀರನ್ನು ಶುಧ್ದಗೊಳಿಸಿ ಕುಡಿಯುವ ನೀರು ಪೂರೈಸುವಂತಾಗುತ್ತದೆ. ಪಟ್ಟಣದಲ್ಲಿ ಬಲ್ಬ್ ಅಳವಡಿಕೆ,ರಸ್ತೆ ಅಭಿವೃದ್ದಿಗೊಳಿಸಿ ಸೇರಿದಂತೆ ಕಾಮಗಾರಿ ಕೈಗೊಂಡು ಸುಂದರವನ್ನಾಗಿಸುವೆ ಪಕ್ಷಾತೀತವಾಗಿ ಸಹಕರಿಸಬೇಕು. ಪಟ್ಟಣದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ರಸ್ತೆ ಮಾರ್ಗಮಧ್ಯೆ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ಸವಾರರಿಗೆ ತೀವ್ರ ಅಡಚಣೆಯಾಗಿದೆ. ಈ ಬಗ್ಗೆ ಕ್ರಮಕೈಗೊಂಡು ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸಂಚಾರಿ ನಿಮಯ ಉಲ್ಲಂಘಿಸಿದರೆ ನಿರ್ದಾಕ್ಷೀಣ್ಯವಾಗಿ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಹತ್ತಿರ ಸೇರಿದಂತೆ ವಿವಿದಡೆ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಎರಡು ಕಂಪನಿಗಳ ಜಂಟಿಯಾಗಿ ಜವಳಿ ಉದ್ಯಮ ಆರಂಭಿಸಿ ಕನಿಷ್ಠ 5ಸಾವಿರನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲಾಗುವುದು ಎಂದರು.ಸಾಮಾನ್ಯ ಸಭೆಯಲ್ಲಿ 2015-16 ರಿಂದ 2016-17 ನೇ ಸಾಲಿನವರೆಗೂ  ಕಾಮಗಾರಿ ಮಾಡದೆ ಬಾಕಿ ಉಳಿಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ ಸ್ಪಂದಿಸದಿದ್ದರೆ ಟೆಂಡರ್ ರದ್ದುಪಡಿಸಿ. ಸದರಿ ಅನುದಾನದಲ್ಲಿ ಪಟ್ಟಣದಲ್ಲಿ ವಿದ್ಯುದ್ದೀಕರಣಮಾಡುವ ಬಗ್ಗೆ ಹಾಗೂ 2020-2021 ನೇ ಎಸ್ ಎಫ್ ಸಿ ಕುಡಿಯುವ ನೀರಿನ ಕಾಮಗಾರಿಗೆ ಟೆಂಡರ್ ಕರೆದಿದ್ದು ಅನುಮೋದನೆ ಕಳಿಸುವ ಬಗ್ಗೆ, ಗುತ್ತಿಗೆದಾರ ಬಿಟಿ ಕೃಷ್ಣಪ್ಪ ಅವರ ಕಾಮಗಾರಿಗಳು ಅಪೂರ್ಣವಾಗಿದ್ದು ಪೂರ್ಣಗೊಳಿಸದಿದ್ದಲ್ಲಿ ಇವರನ್ನು ಕಪ್ಪುಪಟ್ಟಿಗೆ ಅಥವಾ ಟೆಂಡರ್ ನಲ್ಲಿ ಭಾಗವಹಿಸದಂತೆ ನಿರ್ಬಂಧ, ತರಕಾರಿ ಮಾರುಕಟ್ಟೆ ಮೇಲೆ ವಿಶಾಲ ಮಾರುಕಟ್ಟೆ ನಿರ್ಮಾಣಮಾಡುವ ಕುರಿತು ಅಂದಾಜು ತಯಾರಿಸುವುದು, ಆರೋಗ್ಯ ಶಿಕ್ಷಣ ಇಲಾಖೆ ಜಾಗಗಳಲ್ಲಿ ಮಳಿಗೆ ನಿರ್ಮಾಣ ಮಾಡಲು ಅನುಮತಿ ಪಡೆಯಲು, ಉದ್ದಿಮೆ ಪರವಾನಿಗೆ ಪರಿಷ್ಕರಣೆ, ಅನುಪಯುಕ್ತಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿಗಳ ಬಗ್ಗೆ 2019-20 ನೇ ಸಾಲಿನ ಎಸ್ ಡಬ್ಲೂö್ಯ ಎಂ,ಡಿಪಿಆರ್ ಮತ್ತು 2020-21 ನೇ ಸಾಲಿನ 15 ನೇ ಹಣಕಾಸು ಯೋಜನೆಗೆ ಸಂಬಧಿಸಿದ ಕಾಮಗಾರಿ ಟೆಂಡರ್,ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನುಪಯುಕ್ತ ವಸ್ತುಗಳನ್ನು ಬಹಿರಂಗ ಹರಾಜು ಕೈಗೊಳ್ಳುವುದು, ಘನ ತ್ಯಾಜ್ಯ ವಿಲೆವಾರಿ ಕೇಂದ್ರದಲ್ಲಿ ಪಲಾಸ್ಟಿಕ್ ಬೆಲಿಂಗ್ ಮಿಷನ್ ನಿರ್ಮಾಣಗಳ ಬಗ್ಗೆ ಚರ್ಚಿಸಿ  ಸರ್ವಸದಸ್ಯರ ಒಕ್ಕೊರಲಿನ ಸಮ್ಮತಿ ನೀಡಲಾಯಿತು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲಲಿತ ಶಿವಣ್ಣ, ಮುಖ್ಯಾಧಿಕಾರಿ ರಾಜು ಡಿ ಬಣಕಾರ್ ಸಿಪಿಐ ಡಿ ದುರುಗಪ್ಪ, ಸದಸ್ಯರಾದ ಮಂಜಣ್ಣ, ಬಿಕೆ ರವಿ, ರಮೇಶ್, ದೇವರಾಜ್, ನವೀನ್ ಕುಮಾರ್, ಪಾಪಲಿಂಗಪ್ಪ ,ವಿಶಾಲಾಕ್ಷಿ, ಲುಕ್ಮನ್ ಖಾನ್, ಮಂಜಕ್ಕ ,ಶಕೀಲ್, ನಿರ್ಮಲ, ನಾಮ ನಿರ್ದೇಶಿತ ಸದಸ್ಯರಾದ ಬಿಪಿ ಸುಬಾನ್ ಗಿರೀಶ್,  ಸೇರಿದಂತೆ ಇತರರು ಉಪಸ್ಥಿತರಿದ್ದರು.