ಜಗಳೂರು ಪಟ್ಟಣದಲ್ಲಿ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ ಪೋಲೀಸರು

ಜಗಳೂರು.ಏ.೨೫; ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕರ್ಫ್ಯೂ ಮತ್ತು 144 ಸೆಕ್ಷನ್  ಜಾರಿ ಹಿನ್ನೆಲೆಯಲ್ಲಿ ಜಗಳೂರು  ಪೊಲೀಸ್ ಇಲಾಖೆಯ ಸಿ.ಪಿ.ಐ  ಮಂಜುನಾಥ್ ಪಂಡಿತ್ ಮತ್ತು ಪಿ.ಎಸ್.ಐ ಸಂತೋಷ್ ಬಾಗೋಜಿ ಅವರ ತಂಡದೊಂದಿಗೆ ಎಲ್ಲಾ ಸಾರ್ವಜನಿಕರಿಗೆ  ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರಬಾರದು ಎಂದು  ಎಚ್ಚರಿಕೆಯನ್ನು  ಮೈಕ್ ನಲ್ಲಿ  ಜಾಗೃತಿ ಮೂಡಿಸಿದರು. ಅದರಂತೆ ಇಂದು ಪಟ್ಟಣದ ಜನತೆ ಪೊಲೀಸ್ ಪ್ರಕಟಣೆಯನ್ನು ಅರ್ಥಮಾಡಿಕೊಂಡು ಯಾರು ಅನವಶ್ಯಕವಾಗಿ ಬೀದಿಗಿಳಿಯದೆ  ತಮ್ಮ  ಮನೆಗಳಲ್ಲಿ ಇದ್ದರೆ ಕೆಲ ಸಾರ್ವಜನಿಕರು ಆಸ್ಪತ್ರೆ ಮೆಡಿಕಲ್ ಸ್ಟೋರ್. ಔಷಧಿ ಉಪಚಾರಕ್ಕೆ ಬರುತ್ತಿದ್ದರು ಸಾಮಾನ್ಯವಾಗಿತ್ತು ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತ  ಹಳೆ ಬಸ್ ನಿಲ್ದಾಣ. ಎಸ್.ಬಿ. ಐ ಬ್ಯಾಂಕ್ ಮುಂಬಾಗ ಡಿ.ಸಿ.ಸಿ ಬ್ಯಾಂಕ್. ಮುಂಭಾಗ ಚಳ್ಳಕೆರೆ ಟೋಲ್ ರಸ್ತೆಯಲ್ಲಿ ಯಾವೊಬ್ಬ ಮನುಷ್ಯರು ಅನಾವಶ್ಯಕವಾಗಿ ಬೀದಿಗಿಳಿದಿಲ್ಲ ಜಗಳೂರು ತಾಲೂಕಿನ ಪೊಲೀಸರು ಶ್ರಮಪಟ್ಟು ಕೋವಿಡ್ 19 ವೈರಸ್ಸಿನ ತಡೆಗಟ್ಟುವ ಸಲುವಾಗಿ ಪ್ರತಿ ಹಳ್ಳಿಗಳಲ್ಲಿ ಗುಂಪು ಸೇರದೆ ಮುಖಕ್ಕೆ ಮಾಸ್ಕ್ ಆಗದೆ ಇರುವವರಿಗೆ ಕಳೆದ ಐದಾರು ದಿನಗಳಿಂದ ಒಂದಲ್ಲ ಒಂದು ರೀತಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಜಗಳೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 
ದ್ವಿ ಚಕ್ರ ವಾಹನ ಸವಾರರು ಅನವಶ್ಯಕವಾಗಿ ಬೀದಿಗಿಳಿದು ಕಂಡುಬಂದರೆ ಅಂತ ವಾಹನಗಳ ವಿರುದ್ಧ ಮತ್ತು ಮುಖಕ್ಕೆ ಮಾಸ್ಕ್ ಹಾಕದೆ ಇರುವವರಿಗೆ ದಂಡ ಹಾಕಲು  ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರು.ಒಂದು ಕಡೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ತಂಡ ಮತ್ತೊಂದು ಕಡೆ ತಾಲೂಕು ತಾಲೂಕು ದಂಡಾಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮತ್ತೊಂದು ಕಡೆ ಆರೋಗ್ಯ ಅಧಿಕಾರಿಗಳು ಮತ್ತು ತಂಡ ತಾಲೂಕು ಪಂಚಾಯಿತಿ ಇಲಾಖೆಗಳು ಬಹಳ ಜಾಗೃಕತೆ ಯಿಂದ  ಕೆಲಸ ನಿರ್ವಹಿಸಿ ಜನಸಾಮಾನ್ಯರಿಗೆ ಅರಿವು ಮೂಡಿಸುತ್ತಿರುವುದು ಸಾಮಾನ್ಯವಾಗಿತ್ತು 
ಸಾರ್ವಜನಿಕರು ಕೋವಿಡ್-19 ಕೋರನ ವೈರಸ್ ತಡೆಗಟ್ಟುವ ಸಲುವಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದು ತಮ್ಮ ಅಕ್ಕ ಪಕ್ಕದ ಮನೆಯಲ್ಲಿ ಅಥವಾ ಇತರೆ ವಾಸ ಸ್ಥಳಗಳಲ್ಲಿ ವಾಸವಿದ್ದರೆ ಅಂಥವರ ಮಾಹಿತಿಯನ್ನು ಸಾರ್ವಜನಿಕರು ಕೂಡಲೇ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಪೊಲೀಸ್ ಇಲಾಖೆಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಬೇಕು ಡಾ. ನಾಗರಾಜ್ ಆರೋಗ್ಯ ಅಧಿಕಾರಿ -8971552887 ತಾಲೂಕು ದಂಡಾಧಿಕಾರಿ ಡಾ.ನಾಗವೇಣಿ -9986182944 ಪೊಲೀಸ್ ಇಲಾಖೆಯ ಆರಕ್ಷಕ  ವೃತ್ತ ನಿರೀಕ್ಷಕರಾದ ಮಂಜುನಾಥ ಪಂಡಿತ್- 94480803237 ಮುಖ್ಯ ಅಧಿಕಾರಿ ರಾಜು ಡಿ ಬಣಕರ್ – 9986290870 ಪೋಲಿಸ್ ಆರಕ್ಷಕ ಉಪ ನಿರೀಕ್ಷಕರಾದ -ಸಂತೋಷ್ ಬಾಗೋಜಿ -94480803270 ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ 
ಇದೇ ರೀತಿ ಕೋವಿಡ್ ಎರಡನೇ ಅಲೆ ಎಂಬ ಮಹಾಮಾರಿ ಕಿಲ್ಲರ್ ಕೊರೋನಾ ವೈರಸ್ ನಮ್ಮ ರಾಜ್ಯ ಬಿಟ್ಟು ತೊಲಗು ಅವರಿಗೂಜನಸಾಮಾನ್ಯರು ಇದೇ ರೀತಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಅನಾವಶ್ಯಕವಾಗಿ ಬೀದಿಗಿಳಿಯಬೇಕು ಸೇರಿದೆ ಸಹಕರಿಸಿದ್ದೆ ಬದ್ಧವಾದರೆ ಮತ್ತೆ ಬಾರದಂತೆ ತಡೆಹಿಡಿಯಬಹುದು ಎಂದು ಕೆಲ ಪ್ರಜ್ಞಾವಂತ ಯುವಕರು ಬುದ್ಧಿಜೀವಿಗಳ ಒಂದು ಅಭಿಪ್ರಾಯ