ಜಗಳೂರು ಪಟ್ಟಣದಲ್ಲಿ ಫೀಲ್ಡಿಗಿಳಿದ ಖಾಕಿ ಪಡೆ

ಜಗಳೂರು.ಏ.೧೯;  ಪಟ್ಟಣದಲ್ಲಿ ಪೋಲಿಸ್ ಇಲಾಖೆ ಆರಕ್ಷಕ ಉಪ ನಿರೀಕ್ಷಕ  ಸಂತೋಷ್ ಬಾಗೋಜಿ  ನೇತೃತ್ವದಲ್ಲಿ ಮುಖಕ್ಕೆ ಮಾಸ್ಕ್ ಹಾಕದೆ ಇರುವವರಿಗೆ 100 ರೂಪಾಯಿ ದಂಡ ಹಾಕಲಾಯಿತು.  ರಾಜ್ಯದಲ್ಲಿ ಕೋವಿಡ್ -19 ಕೋರೋನ  ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಮನೆಯಿಂದ
 ಹೊರಗೆ ಬರುವಾಗ ಮುಖಕ್ಕೆ ಮಾಸ್ಕ್ ಹಾಕದೆ  

ದ್ವಿಚಕ್ರವಾಹನದಲ್ಲಿ ತಮಗೆ ಅರಿವಿಲ್ಲದೆ  ಸಂಚಾರ ಮಾಡುತ್ತಿದ್ದಾರೆ ರಾಜ್ಯ  ಮತ್ತು ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು ಜನರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ 
ಜಗಳೂರು ಪಟ್ಟಣದಲ್ಲಿ ಎರಡನೇ ವ್ಯಾಪಿಸುತ್ತಿದ್ದು ಸಾರ್ವಜನಿಕರು ಮುಂಜಾಗ್ರತೆ ಕ್ರಮ ವಹಿಸದಿದ್ದರೆ ಬಾರಿ ಗಂಡಾಂತರಕ್ಕೆ ಸಿಲುಕಬೇಕಾಗುತ್ತದೆ 
ಜಗಳೂರು  ಪಟ್ಟಣದಲ್ಲಿನ  ಜನನಿಬಿಡದ ಪ್ರದೇಶಗಳಾದ ಹಳೇ ಮಹಾತ್ಮ ಗಾಂಧೀಜಿ ವೃತ್ತ, ಹೊಸ ಬಸ್ಟ್ಯಾಂಡ್, ಡಿಸಿಸಿ ಬ್ಯಾಂಕ್ ಮುಂಭಾಗ ,ಚಳ್ಳಕೆರೆಯ ಟೋಲ್ ಗೇಟ್, ತಾಲೂಕು ಕಚೇರಿ ಮುಂಭಾಗ, ಎಸ್.ಬಿ.ಐ ಬ್ಯಾಂಕ್ ಮುಂಬಾಗ ಸೇರಿದಂತೆ ಹಲವಡೆ ಪ್ರದೇಶಗಳಲ್ಲಿ ಪಿ.ಎಸ್.ಐ ಸಂತೋಷ್ ಬಾಗೋಜಿ ಮತ್ತು ಪೊಲೀಸ್ ಸಿಬ್ಬಂದಿಗಳು ಕೋರೋನ  ಸೋಂಕಿನ ಕುರಿತು  ಪೊಲೀಸ್ ವಾಹನದ ಮೈಕ್ ನಲ್ಲಿ ಜನರಿಗೆ ಜಾಗೃತಿ ಮೂಡಿಸಿದರು ಮತ್ತು ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲಿ 100 ರೂಪಾಯಿ ದಂಡ ಹಾಕಿ ಎಚ್ಚರಿಕೆ ನೀಡಿದರು 
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೇಶನ್ ಮಾಡಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ನಿಮ್ಮ ಬಗ್ಗೆ ನೀವು ಜಾಗೃತಿ ವಹಿಸಬೇಕು  ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಾನೂನಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು 
ಜಗಳೂರು ತಾಲೂಕಿನಲ್ಲಿ ಧಾರ್ಮಿಕ ಆಚರಣೆಗಳಾದ ಜಾತ್ರೆ ಹಬ್ಬ-ಹರಿದಿನಗಳನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು