ಜಗಳೂರು; ದೇವರ ಆಭರಣ ಕದ್ದ ಆರೋಪಿ ಬಂಧನ

ಜಗಳೂರು.ಜೂ.೧೦; ತಾಲೂಕಿನ ಕಮಂಡಲ ಗೊಂದಿ ಗ್ರಾಮದಲ್ಲಿ ಇತ್ತೀಚೆಗೆ ಆಂಜನೇಯ ದೇವಸ್ಥಾನ ವಿಗ್ರಹ ಕಳವು ಮಾಡಿದ್ದ ಆರೋಪಿಯನ್ನು  ಬಂಧಿಸುವಲ್ಲಿ ಪೊಲೀಸರುಯಶಸ್ವಿಯಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆ ಗ್ರಾಮದ ಮುತ್ತುರಾಜ್ ಬಂಧಿತ ಆರೋಪಿ.ಈತ ಕಮಂಡಲಗೊಂದಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಮೇ 16 ರಂದು   ಸುಮಾರು 4 ಕೆ ಜಿ ತೂಕದ ಬೆಳ್ಳಿಯ ವಿಗ್ರಹ, 5 ಗ್ರಾಂ ತೂಕದ ಬಂಗಾರದ ಕಣ್ಣು ಸೇರಿದಂತೆ ಸುಮಾರು 1.10.000 ಬೆಲೆಯ ಆಭರಣಗಳನ್ನು  ಕದ್ದು ಪರಾರಿಯಾಗಿದ್ದ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸ್ ಅಧಿಕಾರಿಗಳು ಕಳ್ಳರನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
 ಪ್ರಕರಣದಲ್ಲಿ ಆರೋಪಿ ಪತ್ತೆ
ಕಾರ್ಯಾಚರಣೆಯನ್ನು  ಪೊಲೀಸ್ ಅಧೀಕ್ಷಕರಾದ  ಹನುಮಂತರಾಯ. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ರಾಜೀವ್.  ಗ್ರಾಮಂತರ  ಡಿವೈಎಸ್ಪಿ. ನರಸಿಂಹ ವಿ ತಾಮ್ರ ಧ್ವಜ  ಇವರುಗಳ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ ಪಂಡಿತ್.ಇವರ ನೇತೃತ್ವದಲ್ಲಿ ಜಗಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಸಂತೋಷ್ ಬಾಗೋಜಿ. ಬೆರಳು ಮುದ್ರೆ ಘಟಕದ ಪಿ.ಎಸ್.ಐ  ಮಂಜುನಾಥ್ ಎಸ್ ಕಲ್ಲೇದೇವರ. ಮತ್ತು ಜಗಳೂರು ಪೊಲೀಸ್ ಠಾಣೆ ಸಿಬ್ಬಂದಿ ಎ.ಎಸ್.ಐ ನಾಗರಾಜ್. ಚಂದ್ರಶೇಖರ್ ಸಿ.ಎನ್.ಹಾಗೂ ಜಗಳೂರು ಪೊಲೀಸ್ ಠಾಣಾ ಸಿಬ್ಬಂದಿಗಳಾದ. ನಾಗಭೂಷಣ. ಪ್ರವೀಣ್ ಪಾಟೀಲ್. ನಾಗರಾಜ್. ಮಾರುತಿ.ರಮೇಶ್. ಹನುಮಂತಪ್ಪ ಕವಾಡಿ.  ಬಸವರಾಜ. ದೊಡ್ಡಬಸಪ್ಪ. ಗದ್ಧ್ಯಪ್ಪ. ಅಶೋಕ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ. ಕಾಂತರಾಜ್ ಮತ್ತು ಉಮೇಶ್  ಆರೋಪಿ ಪತ್ತೆ ಕಾರ್ಯದಲ್ಲಿದ್ದರು.