ಜಗಳೂರು ತಾ.ಪಂ ಸಾಮಾನ್ಯ ಸಭೆ; ಲೆಕ್ಕಾಧಿಕಾರಿ ವರ್ಗಾವಣೆಗೆ ಸದಸ್ಯರ ಪಟ್ಟು

ಜಗಳೂರು;ನ ೧೯: ತಾಲೂಕು ಪಂಚಾಯತ್ ಲೆಕ್ಕಾಧಿಕಾರಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಸದಸ್ಯರ ಸಲಹೆ ಸೂಚನೆಗಳನ್ನು ಪಾಲಿಸದೆ ಏಕಪಕ್ಷವಾಗಿ ನಡೆದುಕೊಳ್ಳುತ್ತಿರುವ ಲೆಕ್ಕಾಧಿಕಾರಿಯನ್ನು ವರ್ಗಾವಣೆ ಮಾಡಲು ಜಿಲ್ಲಾ ಪಂಚಾಯತ್ಗೆ ವರದಿ ಮಾಡಬೇಕೆಂದು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಯೋಜನೆಗಳ ಅನುದಾನದ ಕ್ರಿಯಾ ಯೋಜನೆಗಳ ಬಗ್ಗೆ ಲೆಕ್ಕಾಧಿಕಾರಿ ಗೆ ಸರಿಯಾದ ಮಾಹಿತಿ ಇಲ್ಲ, ಸದಸ್ಯರು ಕೇಳುವ ಮಾಹಿತಿಯನ್ನು ನೀಡುವುದಿಲ್ಲ ಇದರಿಂದಾಗಿ ಮಾರ್ಚ್ ಒಳಗೆ ಅನುದಾನ
ಸಂಪೂರ್ಣವಾಗಿ ವೆಚ್ಚ ಮಾಡುವುದು ಅಸಂಭವ ಆದ್ದರಿಂದ ಲೆಕ್ಕಾಧಿಕಾರಿ ಯನ್ನು ತಕ್ಷಣ ವರ್ಗಾಯಿಸಿ ಬೇರೆಯವರನ್ನು ನೇಮಿಸಲು
ಕೈಗೊಳ್ಳಬೇಕೆಂದು ಸರ್ವ ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ ಅವರಿಗೆ ಆಗ್ರಹಪಡಿಸಿದರು. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವ ವರೆಗೂ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸದಸ್ಯರಾದ ತಿಮ್ಮೇಶ್ ಶಂಕರ್‌ನಾಯ್ಕ,ಟಿ. ಬಸವರಾಜ್, ತಿಪ್ಪೇಸ್ವಾಮಿ ಸೇರಿದಂತೆ ಬಹುತೇಕ ಸದಸ್ಯರು ಆಕ್ಷೇಪಿಸಿದರು. ಇದಕ್ಕೆ ಸಮಜಾಯಿಷಿನೀಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ
ಮಲ್ಲನಾಯಕ್, ಲೆಕ್ಕಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಆದರೂ ಸದಸ್ಯರು ಸಮಾಧಾನಗೊಳ್ಳಲಿಲ್ಲ.೧೫ ಹಣಕಾಸು ಯೋಜನೆ ,ಅನಿರ್ಬಂಧಿತ ಅನುದಾನ ಯೋಜನೆ ತಯಾರಿಸುವಲ್ಲಿ ವಿಳಂಬವಾಗಿರುವುದು ಶೀಘ್ರವೇ ಸದಸ್ಯರಗಮನಕ್ಕೆ ತರಲಾಗುವುದು. ಮತ್ತು ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ ಫೆಬ್ರವರಿ ಅಂತ್ಯದೊಳಗೆ ಎಲ್ಲ ಯೋಜನೆಯ ಕ್ರಿಯಾಯೋಜನೆ ಅನುದಾನವನ್ನು ವೆಚ್ಚ ಮಾಡಲು ಸೂಕ್ತ ಕ್ರಮಕೈಗೊಳ್ಳಲು ಕ್ರಮಕೈಗೊಳ್ಳುವುದಾಗಿ ಮತ್ತು ಲೆಕ್ಕಾಧಿಕಾರಿಯ ಕಾರ್ಯವೈಖರಿ ಬಗ್ಗೆ ಪ್ರತ್ಯೇಕವಾಗಿ ಸದಸ್ಯರೊಂದಿಗೆ ಸಭೆ ಕರೆದು ಚರ್ಚಿಸಲಾಗುವುದು. ಆದ್ದರಿಂದ ಸಾಮಾನ್ಯ ಸಭೆ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ನಂತರ ನಡೆದ ಸಾಮಾನ್ಯ ಸಭೆಯ ಪ್ರಗತಿ ಪರಿಶೀಲನೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಪ್ರಗತಿ ವರದಿ ಮಂಡಿಸಿದರು. ಪಂಚಾಯತ್ ರಾಜ್ ಇಲಾಖೆ ಸಹಾಯಕ ಇಂಜಿನಿಯರ ಶಿವಕುಮಾರ್ ಪ್ರಗತಿ ವರದಿ ನೀಡಿದಾಗ ಮೂಡಲ ಮಾಚೀಕೆರೆ ಗ್ರಾಮದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ ಕಳಪೆಯಾಗಿದ್ದು ಪೈಪ್ಲೈನ್ ಹೊಡೆದು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಗ್ರಪಿಡಿಓ ಗೆ ಕೇಳಿದರೆ ಇಂಜಿನಿಯರ್ ಮೇಲೆ ಹೇಳುತ್ತಾರೆ. ತಕ್ಷಣ ಸರಿಪಡಿಸಿ ಎಂದು ಸದಸ್ಯರು ಒತ್ತಾಯಿಸಿದರು. ಇಂಜಿನಿಯರ್ ನಂದೀಶ್ ಅವರು ಕಚೇರಿಗೂ ಸರಿಯಾಗಿ ಬರದೆ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದೇ ಇರುವ ಬಗ್ಗೆ ಜನರಿಂದ ವ್ಯಾಪಕ ದೂರುಗಳು ಬಂದರೂ ಸಹ ಕ್ರಮ ಏಕೆ ಕೈಗೊಂಡಿಲ್ಲ ಎಂದು ಸದಸ್ಯರಾದ ತಿಮ್ಮೆಶ್, ಶಂಕರ್ ನಾಯಕ್, ಬಸವರಾಜ್ ಅವರು
ಪ್ರಶ್ನಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ ಪ್ರಗತಿ ವರದಿ ನೀಡಿ, ಪದವಿ ಕಾಲೇಜಿನ ಅಂತಿಮ ವರ್ಷದ ತರಗತಿಗಳು ಆರಂಭವಾಗಿದೆ ಹಾಸ್ಟಲ್ ಸಿಬ್ಬಂದಿಗಳನ್ನು ಈಗಾಗಲೇ ಕೋರನ ಟೆಸ್ಟ್ ಒಳಪಡಿಸಲಾಗಿದೆ, ಇವರಿಗೆ ಇನ್ನೂ ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂದರು. ಸರ್ಕಾರದ ಎಲ್ಲಾ ಕೊರನ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ವಿದ್ಯಾರ್ಥಿಗಳಬಗ್ಗೆ ಕಾಳಜಿವಹಿಸಲಾಗುವುದು ಎಂದು ತಿಳಿಸಿದರು.
ಎಸಿಪಿ ಮತ್ತು ಪಿಎಸ್ಪಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಮತ್ತು ಆದ್ಯತೆಯ ಮೇರೆಗೆ ವೆಚ್ಚಮಾಡಿ ವರದಿ ನೀಡಬೇಕೆಂದು ಅನುಷ್ಠಾನ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕಾರ್ಯನಿರ್ವಹಣಾಧಿಕಾರಿ ಮಲ್ಲನ ಮಾತನಾಡಿದ ಎಸ್ ಇ ಪಿ ಮತ್ತು ಟಿಎಸ್ಪಿ ಅನುದಾನವನ್ನು ಕಡ್ಡಾಯವಾಗಿ ನಿಗದಿತ ಸಮಯದೊಳಗೆ ವೆಚ್ಚ ಮಾಡಬೇಕು ಇಲ್ಲದಿದ್ದರೆ ಕ್ರಿಮಿನಲ್ ಆಫೆನ್ಸ್ ಆಗುತ್ತದೆ. ಆದ್ದರಿಂದ ಅಧಿಕಾರಿಗಳು ಯೋಜನೆ ಅನುದಾನವನ್ನು ನಿಯಮಾನುಸಾರ ವೆಚ್ಚ ಮಾಡಿ ವರದಿ ನೀಡಲು ಸೂಚನೆ ನೀಡಿದರು. ತಾಪಂ ಸದಸ್ಯ ಕುಬೇಂದ್ರಪ್ಪ ಮಾತನಾಡಿ ಗ್ರಾಮಿಣ ಬಾಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ವಿಂಡ್ ಪ್ಯಾನ್ ನಂತಹ ಮಾಲಿಕರು ರೈತರ ಕೃಷಿ ಭೂಮಿಯನ್ನು ಹಣದ ಆಮಿಷನ್ನು ರೈತರಿಗೆ ತೋರಿಸಿ ಬೇಕಾಬಿಟ್ಟಿ ಖರದಿ ಮಾಡುತ್ತಿದ್ದರು ತಹಶೀಲ್ದಾರ್ ಹಾಗೂ ಸಬ್ ರಿಜಿಸ್ಟರ್ ಅಧಿಕಾರಿ ಭೂಸುಧಾರಣ ನೀತಿಯನ್ನೆ ಗಾಳಿಗೆ ತೂರಿ ರಿಜಿಸ್ಟರ್ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ ಕರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಮುಖವಾಗಿದೆ. ತಾಲೂಕಿನಲ್ಲಿ ಈವರೆಗೂ ೧೮ ಜನ ಮೃತಪಟ್ಟಿದ್ದಾರೆ.೪೦ ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ ತಾಲೂಕಿನಲ್ಲಿ ೧೮೦೦೦ ರಾಪಿಡ್ ಟೆಸ್ಟ್ ಮಾಡಲಾಗಿದೆ. ೨೩೦೦೦ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಕರೋನಾ ನಿಯಂತ್ರಣದಲ್ಲಿದ್ದರೂ ಸಹ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ ಧರಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಎ ಇ ಇ ಹೇಮೋಜಿನಾಯಕ್, ಬೆಸ್ಕಾಂ ಎಇಇ ಪ್ರವೀಣ್, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ವೆಂಕಟೇಶ್,ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ವೇತಾ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಶ್ರೀಮತಿ ಮಂಜುಳಮ್ಮ ವಹಿಸಿದ್ದರು. ಉಪಾಧ್ಯಕ್ಷ ಮುದೇಗೌಡ ಬಸವರಾಜಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಸಿದ್ದೇಶ್, ಹಾಗೂ ತಾಪಂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.