ಜಗಳೂರು ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ಬಜೆಟ್ ಮಂಡನೆ

ಜಗಳೂರು.ಜೂ.೨೧: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಜನವರಿ 2018 ರಿಂದ ಮೇ 2022 ರವರೆಗೆ ಪತ್ರಿಕಾ ಘೋಷ್ಠಿ ಇತರೇದಿಂದ ರೂ.190700 ಆದಾಯ ಬಂದಿದೆ. ಸಂಘದ ಅಭಿವೃದ್ದಿ, ನೆರೆ ಸಂತ್ರಸ್ಥರಿಗೆ ದೇಣಿಗೆ, ನೂತನ ಪತ್ರಕರ್ತರ ಭವನ ಶಂಕುಸ್ಥಾಪನೆ ಸೇರಿದಂತೆ ಇತರೆ ಖರ್ಚು ವೆಚ್ಚ ಸೇರಿ ರೂ. 138897 ವ್ಯಯಭರಿಸಲಾಗಿದ್ದು. ಒಟ್ಟು ರೂ.51860 ಉಳಿತಾಯವಾಗಿದೆ ಎಂದು ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಆಯೋಜಿಸಿದ್ದ  ಆಯವ್ಯಯ ಬಜೆಟ್ ಸಭೆಯಲ್ಲಿ ಆಯ-ವ್ಯಯ ಮಂಡಿಸಿ ಮಾತನಾಡಿದರು.ರಾಜ್ಯದಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ನಿಯಮಾವಳಿಗಳಂತೆ ತಾಲೂಕಿನಲ್ಲಿ ಸರ್ವಸದಸ್ಯರ ಸಹಕಾರದಿಂದ ಆಯಾವ್ಯಯ ಪಟ್ಟಿ, ಸಂಘದ ಸರ್ವತೋಮುಖ ಅಭಿವೃದ್ದಿಗಾಗಿ ವಿನೂತನ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು .ಇದುವರೆಗೂ ಲೆಕ್ಕಪತ್ರವನ್ನು ಪಾರದರ್ಶಕತೆ ಕಾಪಾಡಿದ್ದು ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆಗೆ ಜಮಾಮಾಡಲಾಗುವುದು. ಭವಿಷ್ಯದಲ್ಲಿ ಸಂಘದ ಆರ್ಥಿಕ ಭದ್ರತೆಗಾಗಿ ಹೆಚ್ಚಿನ ಉಳಿತಾಯ ಹಣಕ್ಕೆ ಒತ್ತು ನೀಡಲಾಗುವುದು. ತಾಲೂಕು ಪದಾಧಿಕಾರಿಗಳು ಹಣಕಾಸಿನ ವ್ಯವಹಾರವನ್ನು ಸುಗಮವಾಗಿ ನಿಭಾಯಿಸಲು ಸಹಕರಿಸುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬರದ ತಾಲೂಕಿನಲ್ಲಿ ನೂತನ ಪತ್ರಕರ್ತರ ಭವನದ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ಪಿ.ಸುಬಾನ್ ಮಾತನಾಡಿ, ಅಧ್ಯಕ್ಷರಾದ ಚಿದಾನಂದ ಜಿ.ಎಸ್.ಅವರು ತಾಲೂಕಿನ ಜವಾಬ್ದಾರಿಯುತ ಅಧ್ಯಕ್ಷ ಸ್ಥಾನಕ್ಕೆ ತಕ್ಕಂತೆ ನಿಭಾಯಿಸಿದ್ದು. ಕಳೆದ ನಾಲ್ಕು ವರ್ಷಗಳಿಂದ ಆದಾಯ ವೆಚ್ಚಗಳನ್ನು ಸಮರ್ಥವಾಗಿ ನಿರ್ವಹಿಸಿ ಜಿಲ್ಲಾ ರಾಜ್ಯ ಮಟ್ಟದ ಪದಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.