ಜಗಳೂರು ತಾಲ್ಲೂಕಿನಲ್ಲಿ ಪಿಡಿಒಗಳ ಕೊರತೆ

ಜಗಳೂರು.ಜ.೯; ತಾಲ್ಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿಗೆ ಗ್ರಾಪಂಗಳು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತವೆ.ಆದರೆ ಜಗಳೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಪಿಡಿಒ ಮತ್ತು ಕಾರ್ಯದರ್ಶಿಗಳು ಇಲ್ಲದಿದ್ದರೆ. ಗ್ರಾಮಗಳ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ.ಮತ್ತು ಹಳ್ಳಿಗಳಲ್ಲಿ ಜನರ ಕುಂದುಕೊರತೆಗಳನ್ನು ಕೇಳುವವರು ಯಾರು? ಕೊರೋನದಿಂದ ತತ್ತರಿಸಿದ ಹಳ್ಳಿಯ ರೈತರ ಗತಿಯೇನು ಎನ್ನುವ ಪ್ರಶ್ನೆ ಉದ್ಧವವಾಗಿದೆ.ಒಂದು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಎಷ್ಟು ಮುಖ್ಯವು. ಹಾಗೆ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಕೆಲಸ ಕಾರ್ಯಮಾಡುವುದು ಅಷ್ಟೇ ಮುಖ್ಯಾವಾಗಿರುತ್ತದೆ.ಮತ್ತು ಪಂಚಾಯಿತಿಗಳಲ್ಲಿ ಪಿಡಿಒ ಗಳನ್ನು ಪದೇ ಪದೇ ಬದಲಾವಣಿ ಮಾಡುವುದರಿಂದ ಗ್ರಾಮಗಳ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.ನಮ್ಮ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 22 ಗ್ರಾಮ ಪಂಚಾಯಿತಿಗಳು ಬರುತ್ತವೆ. ಆದರೆ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಹೆಚ್ಚುವರಿಯಾಗಿ  ಎರಡು ಕಡೆ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.ಒಂದು ವಾರದಲ್ಲಿ ಮೂರು ದಿನ ಒಂದು ಪಂಚಾಯಿತಿ ಆದರೆ. ಇನ್ನು ಮೂರು ದಿನ  ಬೇರೆ ಪಂಚಾಯಿತಿಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ.ಆದರೆ ಗ್ರಾಮಗಳ ಬೆಳವಣಿಗೆ ಮಾತ್ರ ಮರಿಚಿಕೆ.ನೆಪಕ್ಕೆ ಮಾತ್ರ ಪಿಡಿಒಗಳು ಕರ್ತವ್ಯಕ್ಕಿಲ್ಲ:-ತಾಲ್ಲೂಕಿನ ದೊಣಿಹಳ್ಳಿ ಮತ್ತು ಕಲ್ಲೇದೇವರಪುರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದರು.ಆದರೆ ಈ ಪಂಚಾಯಿತಿಗಳಿಗೆ ಬಂದು ನಾಲ್ಕು ತಿಂಗಳಲ್ಲಿಯೇ ಬೇರೆ ಕಡೆ ವರ್ಗವಣೆಯಾಗಿದ್ದರೆ.ಬೇರೆ ಗ್ರಾಪಂ ಗಳಲ್ಲಿ ಬಂದು ಎರಡು  ತಿಂಗಳಲ್ಲಿಯೇ ಬೇರೆ ಕಡೆ ವರ್ಗಾವಣೆಯನ್ನು ಮಾಡಲಾಗಿದೆ.ಹೊಸದಾಗಿ ಬಂದ ಪಿಡಿಒಗಳು ಆ ಗ್ರಾಮ ಪಂಚಾಯಿತಿಗಳ ಬಗ್ಗೆ ತಿಳಿದುಕೊಳ್ಳಲು 15 ರಿಂದ 20 ದಿನಗಳಾದರೂ ಬೇಕು.ಬಂದು ಎರಡೇ ತಿಂಗಳಲ್ಲಿ ಬೇರೆ ಕಡೆ ವರ್ಗವಣೆ ಆದರೆಕೆಲಸ ಮಾಡಲು ಹೇಗೆ ಸಾಧ್ಯ. ಇದನ್ನು ಯಾರು ಕೇಳಬೇಕು.ಮತ್ತು ನರೇಗಾ ಯೋಜನೆಯ ಅಡ್ಡಿಯಲ್ಲಿ ಕೆಲಸ ಮಾಡುವ  ಬಡ ಜನರಿಗೆ ಹೇಗೆ ವರದನವಾಗಬಹುದು.ತಾಲ್ಲೂಕಿನ ಜನರು ಮಾತ್ರ ಪದೇ ಪದೇ ಪಿಡಿಒಗಳ  ವರ್ಗವಣೆ ಮಾಡುತ್ತಿರುವುದರಿಂದ.ನಮ್ಮ ಊರಿನ ಕೆಲಸಗಳು ಮತ್ತು ಅಭಿವೃದ್ಧಿ ಕಾರ್ಯಗಳ ಮಾತ್ರ ಏನು ಆಗುತ್ತಿಲ್ಲ.ಇದರ ಬಗ್ಗೆ ನಮ್ಮ ತಾಲ್ಲೂಕಿನ ಶಾಸಕರು ಮಾತ್ರ ಎಲ್ಲಾ ಗೊತ್ತಿದ್ದರೂ ಏನು ಗೊತ್ತಿಲ್ಲದ ಹಾಗೆ ಸುಮ್ಮನೆ ಇದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.ನಮ್ಮ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಪಿಡಿಒ ಹುದ್ದೆಗಳು 7 ಖಾಲಿ ಇವೆ.ಮತ್ತು ಕಾರ್ಯದರ್ಶಿ ಗ್ರೇಡ್-1 ನಲ್ಲಿ 2 ಹುದ್ದೆಗಳು ಖಾಲಿ ಇವೆ. ಗ್ರೇಡ್-2 ನಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು ಯಾವು ಖಾಲಿ ಇಲ್ಲ ಎಲ್ಲ ಕಡೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ಸರ್ಕಾರದ ಮಾರ್ಗಸೂಚಿ ಪ್ರಕಾರ ಸ್ಥಳೀಯವಾಗಿ ಇರುವವರನ್ನು ಆಯಾ ಗ್ರಾಮ ಪಂಚಯಿತಿಗಳಿಗೆ ನೇಮಕಮಾಡಲಾಗಿದೆ.ಮತ್ತು ಕೆಲವೊಂದು ಗ್ರಾಮ ಪಂಚಯಿತಿಯಲ್ಲಿ ಖಾಲಿ ಇರುವ ಪಿಡಿಒ ಹುದ್ದೆಗಳಿಗೆ ಈಗಿರುವ ಪಿಡಿಒಗಳಿಗೆ ಹೆಚ್ಚಿನ ಜವಾಬ್ಧಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು.