ಜಗಳೂರು ತಾಲೂಕು 11 ಕೊಠಡಿಯಲ್ಲಿ ಗ್ರಾಪಂ ಮತ ಎಣಿಕೆ ಆರಂಭ

ಜಗಳೂರು.ಡಿ.೩೦; ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕಾರ್ಯವು ಸಂಬಂಧಿಸಿದ ಕೇಂದ್ರಗಳಲ್ಲಿ  ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಯಿತು ಬಹುತೇಕ ಎಲ್ಲೆಡೆ ಮತ ಎಣಿಕೆ ಕಾರ್ಯವು ಶಾಂತಿಯುತವಾಗಿತ್ತು. ಎಣಿಕೆ ಕೇಂದ್ರಗಳ ಸುತ್ತ ಜಗಳೂರು ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ದುರುಗಪ್ಪ ಅವರ ಸಿಬ್ಬಂದಿಗಳೊಂದಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು ಜಗಳೂರು ತಾಲೂಕಿನ ಗ್ರಾಮ ಪಂಚಾಯಿತಿಗಳ ಮತ ಎಣಿಕೆಯು ಪಟ್ಟಣದ ಸರ್ಕಾರಿ ಜೂನಿಯರ್ ಪದವಿ ಪೂರ್ವ ಕಾಲೇಜಿನಲ್ಲಿ 
ನಡೆಸಲಾಗಿತ್ತು ಒಂದು ಕೊಠಡಿಗೆ ಎರಡು ಪಂಚಾಯತಿಯಂತೆಬಂದು ಟೇಬಲ್ ಮೂರು ಸಿಬ್ಬಂದಿ ಗಳಂತೆ ಮತ್ತೆ ಏನಕ್ಕೆ ಕಾರ್ಯ ನಡೆಯುತ್ತಿದೆ ಒಟ್ಟು-156 ಸಿಬ್ಬಂದಿಗಳನ್ನೊಳಗೊಂಡ  ಮತ ಎಣಿಕೆ ಕಾರ್ಯ ಬಿರುಸಾಗಿ ನಡೆಯುತ್ತಿದೆ ಇನ್ನೇನು ಸಂಜೆಯೊಳಗೆ ಜಗಳೂರು ತಾಲ್ಲೂಕಿನ  ಒಟ್ಟು 22 ಗ್ರಾಮ ಪಂಚಾಯತಿಯ ಒಟ್ಟು -395 ನೂತನ ಗ್ರಾಮ ಪಂಚಾಯತಿ ಸದಸ್ಯರ ಭವಿಷ್ಯವನ್ನು ಮತದಾರರು ತಿಳಿಸಲಿದ್ದಾರೆ 
ಪಾಸ್ ಕಡ್ಡಾಯ:- ಚುನಾವಣಾ ಆಯೋಗ ವಿತರಿಸಿದ್ದ ಪಾಸ್ ಹೊಂದಿದವರಿಗೆ ಮಾತ್ರಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಗಿತ್ತು.ಆಯಾ ಗ್ರಾಪಂ ಮತ ಎಣಿಕೆ ನಡೆಯುವ ವೇಳೆ ಅಭ್ಯರ್ಥಿಗಳ ಏಜೆಂಟ್ ಗಳನ್ನು ಎಣಿಕೆ ಕೊಠಡಿಯೊಳಗೆ ಬಿಡಲಾಗುತ್ತಿತ್ತು. ಕೊಠಡಿಯೊಳಗೆ ಮೊಬೈಲ್ ಬಳಕೆ ನಿರ್ಬಂಧಿಸಲಾಗಿತ್ತು.
ಗೆದ್ದ ಅಭ್ಯರ್ಥಿಗಳ ಸಂಭ್ರಮ ಆಚರಣೆ:-ಮತ ಎಣಿಕೆ ಕೇಂದ್ರಗಳ ಹೊರ ಭಾಗಗಳಲ್ಲಿ ಆಯಾ ಗ್ರಾಮಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ, ವಿಜೇತ ಅಭ್ಯರ್ಥಿ ಮತ್ತವರ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಮತ್ತೋಂದೆಡೆ ಪರಾಜಿತ ಅಭ್ಯರ್ಥಿ ಮತ್ತವರ ಬೆಂಬಲಿಗರ ಮೊಗದಲಿ ನಿರಾಸೆ, ವಿಷಾದದ ಭಾವ ಆವರಿಸುತ್ತಿತ್ತು.