ಜಗಳೂರು ತಾಲೂಕಿನಲ್ಲಿ  ಸುರಿದ  ಮಳೆಗಾಳಿಗೆ ಮನೆಗಳಿಗೆ ಹಾನಿ,  ಸಿಡಿಲು ಬಡಿದು ಆಕಳು ಸಾವು.

ಸಂಜೆವಾಣಿ ವಾರ್ತೆ

ಜಗಳೂರು.ಮೇ.೨೧;:- ತಾಲೂಕಿನಾದ್ಯಂತ ಕಳೆದ ರಾತ್ರಿ ಸುರಿದ ಬಿರುಗಾಳಿ ಮಳೆಯಿಂದ ರೈತರಿಗೆ ಅಪಾರ ನಷ್ಟವಾಗಿದ್ದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ನೇತೃತ್ವದ ಅಧಿಕಾರಿಗ ಳು ಅನೇಕ ಪ್ರದೇಶಗಳಿಗೆ ಭೇಟಿ ನೀಡಿ, ಗ್ರಾಮಲೆಕ್ಕಿಗರು, ಸಹಾಯಕರಿಂದ ಮಾಹಿತಿ ಪಡೆದಿದ್ದು ಅಂದಾಜು 30 ಲಕ್ಷ ಕ್ಕೂ ರೂಗಿಂತ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ತಾಲೂಕಿನ ಬಿಳಿಚೋಡು ಹೋಬಳಿಯ ಮುಷ್ಟಿಗರಹಳ್ಳಿ ವೃತ್ತದ ಗುಡ್ಡದಲಿಂಗಣ್ಣನಹಳ್ಳಿ ಗ್ರಾಮದ ನಾಗರಾಜಪ್ಪ ಎಂಬುವರ ಒಂದು ಆಕಳು ಸಿಡಿಲು ಬಡೆದು ಸ್ಥಳದಲ್ಲಿ ಮೃತಪಟ್ಟಿದೆ.ಸೊಕ್ಕೆ ಹೋಬಳಿಯ ಕೆಳಗೋಟೆ ಗ್ರಾಮದಲ್ಲಿ 3 ಮನೆ ಅಣ ಬೂರು ಗ್ರಾಮದಲ್ಲಿ ಕಲ್ಲಮ್ಮ ನಾಗರಾಜ ಎಂಬುವವರ ಒಂದು ಮನೆ ಭಾಗಂಶ ಹಾನಿಯಾಗಿವೆ, ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಸಂಜೆವಾಣಿ ದಿನಪತ್ರಿಕೆಗೆ ತಿಳಿಸಿದ್ದಾರೆ .ಜಗಳೂರು ತಾಲೂಕಿನ ಎಲ್ಲೆಲ್ಲಿ ಎಷ್ಟು ಮಳೆ:ಜಗಳೂರು ತಾಲೂಕು ಕಸಬಾ ಹೋಬಳಿ 36 ಮಿ.ಮೀ, ಬಿಳಿಚೋಡು 43.ಮಿಮೀ, ಸೊಕ್ಕೆ ಹೋಬಳಿಯಲ್ಲಿ 69 ಮಿಮೀ ಮಳೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಸರಾಸರಿ 49 ಮಿಮೀ ತಾಲೂಕಿನಲ್ಲಿ ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾಹಿತಿ ನೀಡಿದ್ದಾರೆ.