
ಜಗಳೂರು.ಏ.೧೩ : ಸೂಕ್ತ ದಾಖಲೆಗಳಿಲ್ಲದ 1,15,440 ಲಕ್ಷ ರೂ. ಹಣವನ್ನು ಅಧಿಕಾರಿಗಳು ವಶಪಡಿಸಿ ಕೊಂಡಿರುವ ಘಟನೆ ಮಂಗಳವಾರ ರಾತ್ರಿ 8-30 ಗಂಟೆಗೆ ಜಗಳೂರು ತಾಲೂಕು ಮುಸ್ಟೂರು ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.ವಾಹನ ತಪಾಸಣೆ ವೇಳೆ ವಶಪಡಿಸಿಕೊಂಡ ಹಣವು ಭಾರತ್ ಮೈಕ್ರೋ ಫೈನಾನ್ಸ್ ಇವರು ಮುಸ್ಟೂರು ಮತ್ತು ಸುತ್ತಮುತ್ತಲಿನ ಸಾಲದ ಗುಂಪುಗಳಿಂದ ಕಲೆಕ್ಟ್ ಹಣ ಎನ್ನಲಾಗಿದೆ ಜಗಳೂರು ಶಾಖೆಯ ಉದ್ಯೋಗಿ ಎಮ್. ಶಿವಕುಮಾರ್ ಸೂಕ್ತ ದಾಖಲೆ ತೋರಿಸದ ಕಾರಣ ಹಣವನ್ನು ವಶಪಡಿಸಿ ಕೊಳ್ಳಲಾಗಿದೆ. ಸರಿಯಾದ ದಾಖಲೆ ಸಲ್ಲಿಸಿ ಹಣ ವಾಪಾಸ್ಸು ಪಡೆಯುವಂತೆ ಸೂಚಿಸಲಾಗಿದೆ.ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್. ಎಸ್‌ಎಸ್‌ಟಿ ಕಾರ್ಯನಿರ್ವಾಹಕ ದಂಡಾಧಿಕಾರಿ ರಂಗಪ್ಪ ವೆಂಕಪ್ಪನವರ್.ಎಫ್.ಎಸ್.ಟಿ ಅಧಿಕಾರಿ ತಿಪ್ಪೇಸ್ವಾಮಿ.ಆರ್ ಐ ಕುಬೇರ್ ನಾಯ್ಕ.ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಹಾಜರಿದ್ದರು