ಜಗಳೂರು; ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪಗೆ ಒಲಿದ ಅದೃಷ್ಟ

ಜಗಳೂರು.ಮೇ.೧೫; ಪಟ್ಟಣದ ಹೆಸರಾದಂತಹ ಕಾಲೇಜಿನಲ್ಲಿ ಕುಟುಂಬದ ಜೀವನವನ್ನು ಸಾಗಿಸಲು ಜವಾನರಾಗಿ ವೃತ್ತಿ ಆರಂಭಿಸಿದ ಇಂದು ನೂತನ ಶಾಸಕರಾದ ಬಿ.ದೇವೇಂದ್ರಪ್ಪ ಕಷ್ಟ ಸುಖ ದುಃಖಗಳನ್ನುಂಡು ಬಂದವರು.ದಿನದ ಒಂದೊತ್ತಿನ ಊಟಕ್ಕೆ ಬರಗಾಲದಂತಹ ಸಮಸ್ಯೆಯ ಕಾಲದಲ್ಲಿ ಕೈ ಹಿಡಿದವರು ನಾಲಂದ ಕಾಲೇಜಿನ ಸಂಸ್ಥಾಪಕರು ಹಾಗೂ ವಿದ್ಯಾರತ್ನ ಎಂದೇ ಹೆಸರಾದ ದಿ. ಟಿ.ತಿಪ್ಪೇಸ್ವಾಮಿ.ಜಗಳೂರು ತಾಲೂಕಿನ ಕೂಗಳತೆಯಲ್ಲಿರುವ ಕುಗ್ರಾಮದ ಚಿಕ್ಕಮ್ಮನಹಟ್ಟಿ ಗ್ರಾಮದ ಬಂದಂತಹ ವ್ಯಕ್ತಿಗೆ ತಮ್ಮ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ಜವಾನ ವೃತ್ತಿ ಕೊಟ್ಟವರು ಟಿ ತಿಪ್ಪೇಸ್ವಾಮಿಯವರ  ಒಡನಾಡಿಯಾದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಗಳಿಸಿದ ಜ್ಞಾನ ಸಾಧನೆ ಏನು ಕಡಿಮೆ ಇರಲಿಲ್ಲ  ಹಗಲು ರಾತ್ರಿ ಸ್ವಾತಂತ್ರ್ಯ ವೀರಯೋಧರು. ರಾಮಾಯಣ ಮಹಾಭಾರತ. ಸಾಧುಸಂತರ ಮತ್ತು ದಾರ್ಶನಿಕರ ಪುಸ್ತಕ. ಕಲೆ ಸಾಹಿತ್ಯ, ಕವಿತೆ. ಓದಿಕೊಂಡು ಬಂದಂತಹ ವ್ಯಕ್ತಿ ಎಂದರೆ ತಪ್ಪಾಗಲಾರದು.ಚಿಕ್ಕಮ್ಮನಟ್ಟಿ ಬಿ ದೇವೇಂದ್ರಪ್ಪ ಇವರಿಗೆ ಇಬ್ಬರು ಸುಪುತ್ರರಿದ್ದರು ಮೊದಲನೆಯ ಪುತ್ರ ಕೀರ್ತಿಕುಮಾರ್, ಎರಡನೆಯ ಪುತ್ರ ವಿಜಯ ಕುಮಾರ್ ಇವರನ್ನು ಒಂದನೇ ತರಗತಿಯಿಂದ ಜವಾನರಾಗಿ ಕೆಲಸ ಮಾಡುತ್ತಿದ್ದ ಬಾಲ ಭಾರತಿ, ಅಮರ ಭಾರತಿ ನಲಂದ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಮುಗಿಸುವರೆಗೂ  ಓದಿಸಿ ಕೊಂಡು ತಮ್ಮ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದರುದೇವೇಂದ್ರಪ್ಪ ಇವರ ಹಿರಿಯ ಪುತ್ರ ಕೀರ್ತಿಕುಮಾರ್ ಜಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಸರಕಾರಿ ಉದ್ಯೋಗ ದೊರೆಯಿತು. ಇದಾದ ನಂತರ ಎರಡನೆಯ ಸುಪುತ್ರ ವಿಜಯ್ ಕುಮಾರ್ ಎಂ.ಬಿ.ಬಿ.ಎಸ್ ಮಾಡಿಕೊಂಡು ವೈದ್ಯನಾದ ವಿಜಯ ಕುಮಾರ್ ಅವರು ಅಷ್ಟಕ್ಕೇ ಸೀಮಿತವಾಗದೇ ಐ.ಆರ್. ಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಉನ್ನತ ಶ್ರೇಣಿ ಪಡೆದುಕೊಂಡು ಆದಾಯ ತೆರಿಗೆ ಇಲಾಖೆಯಲ್ಲಿ ದೊಡ್ಡ ಅಧಿಕಾರಿ ಆದ ಮೇಲೆ ಚಿಕ್ಕಮ್ಮನಟ್ಟಿ ಬಿ ದೇವೇಂದ್ರಪ್ಪ ಇವರ ಅದೃಷ್ಟ ಬದಲಾಯಿತು ನೋಡಿನಾಲಂದ ಪದವಿಪೂರ್ವ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿ ದೇವೇಂದ್ರಪ್ಪ  ತಮ್ಮ ಸ್ವ ಇಚ್ಛೆಯಿಂದ ಜವಾನ ವೃತ್ತಿಗೆ ರಾಜೀನಾಮೆ ನೀಡಿ ಸಮಾಜ ಸೇವೆಯಲ್ಲಿ ತೊಡಗಿ ಕೊಂಡು . ಬಡವರ ಬಗ್ಗೆ, ದೀನ ದಲಿತರ ಬಗ್ಗೆ ಕಾಳಜಿವಾಹಿಸಿ ಅಲ್ಲಿಂದ ಸಮಾಜ ಸೇವೆಯಲ್ಲಿ ತೊಡಗಿ ಸಮಾಜ ಸೇವಕರಾದರುನಂತರ ಬದಲಾದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡು ನಾನೇನಾದರೂ ಬಡಜನತೆಗೆ ಮತ್ತು ಜಗಳೂರು ತಾಲೂಕು ಬರದ ನಾಡಿನ ಜನರಿಗೆ ಒಂದು ಸಣ್ಣ ಸಮಾಜಸೇವೆ ಮಾಡಬೇಕೆಂದು 2018ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 13 ಸಾವಿರ ಮತಗಳಿಸುವ ಮೂಲಕ ಸೋಲು ಕೊಂಡಿದ್ದರುಅದೇನೋ  ಅದೃಷ್ಟಕ್ಕೆ ಈ ಬಾರಿ 2023ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟಿಗಾಗಿ ಅರ್ಜಿ ಸಲ್ಲಿಸಿದರು ಅದೇನು ಅದೃಷ್ಟ ಕುಲಾಯಿಸುತ್ತೆ ಅನ್ನುತರಲ್ಲ ಹಾಗೆಯೇ ಕಾಂಗ್ರೆಸ್ ಪಕ್ಷದ ವರಿಷ್ಠರು ಬಿ ಫಾರಂ ಕೊಟ್ಟು ಗೆದ್ದು ಬಾ ಎಂದು ಆಶೀರ್ವದಿಸಿದ್ದರು ಅದೇ ರೀತಿ ಚಾಚು ತಪ್ಪದೆ ಸುಮಾರು ಒಂದು ತಿಂಗಳಗಳ ಕಾಲ ಜೋಡೆತ್ತುಗಳಂತೆೆ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಒಳಗೊಂಡಂತೆ 29 ಗ್ರಾಮ ಪಂಚಾಯತಿ ಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ತೆರಳಿ ಚುನಾವಣಾದ ಪ್ರಚಾರ ಮಾಡಿ ಈ ಬಾರಿ ಜಗಳೂರು ವಿಧಾನಸಭ ಕ್ಷೇತ್ರದಲ್ಲಿ ನನಗೊಂದು ಬರಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಕೈಮುಗಿದು ಬೇಡಿಕೊಂಡಿದ್ದರುಅದೇ ರೀತಿ ಜಗಳೂರು ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳು ಮೇ 10ರಂದು ನಡೆದ ಚುನಾವಣೆಯಲ್ಲಿ 50765 ಮತಗಳನ್ನು ಹಾಕಿದರು 874 ಮತಗಳ ಅಂತರದಿಂದ ತೀವ್ರ ಪೈಪೋಟಿಯ ಮಧ್ಯೆಯೂ ಗೆಲುವು ಸಾಧಿಸಿದ್ದಾರೆಇಂದಿನ ಕಾಲದ ಯಜಮಾನರ ಮಾತಿನಂತೆ ಜವಾನನಿಂದ  ದಿವಾನನನ್ನು ಕಾಣಬಹುದು ಎಂಬುದು ಆಗಿನ ಕಾಲದಲ್ಲಿತ್ತು ಆದರೆ ಈಗ ಪ್ರಸ್ತುತ ದಿನಮಾನಗಳಲ್ಲಿ ಜವಾನ ವೃತ್ತಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ.