ಜಗಳೂರು; ಗ್ರಾಮೀಣರೈತರಿಗೆ ಮಾರ್ಗದರ್ಶನ

ಜಗಳೂರು.ಜೂ.೧: ರೈತರು ಒಂದೇ ಬೆಳೆಯುವ ಬದಲಿಗೆ ಅಂತರಬೆಳೆಯಾಗಿ ತೊಗರಿ ಬಿತ್ತನೆಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಜಿಲ್ಲಾಉಪ ಕೃಷಿ ನಿರ್ದೇಶಕರು,  ಆರ್. ತಿಪ್ಪೇಸ್ವಾಮಿ ತಿಳಿಸಿದರು.ಬಿಸ್ತುವಳ್ಳಿ ಹಾಗೂ ಮಲೆಮಾಚಿಕೆರೆ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಪೂರ್ವ ಮುಂಗಾರ ಚೆನ್ನಾಗಿ ಮಳೆಯಾಗಿರುವುದರಿಂದ  ರೈತರಿಗೆ ಬಿತ್ತನೆ ಮಾಡುವ ಕುರಿತು ತೊಗರಿ ಅಂತರ ಬೆಳೆಯಾಗಿ 8:1 ಬೆಳೆಯುವುದು ಔಡಲ ಬೆಲೆ ಬದುಗಳಲ್ಲಿ ಹಾಕುವುದು, ರಸಗೊಬ್ಬರ ಬಳಕೆ, ಕೀಟ ಮತ್ತು ರೋಗ ಹತೋಟಿಯನ್ನು ಮಾಡುವುದು ಮಾಹಿತಿಯನ್ನು ನೀಡಿದರು. 
ಜಿಲ್ಲೆಯ ಲ್ಲಿ ತೊಗರಿ ಬೆಳೆ ಬಿತ್ತನೆ ಪ್ರದೇಶದ ವಿಸ್ತರಣೆಮಾಡಲು ನಿರ್ದಿರಿಸಲಾಗಿದ್ದು. ತೊಗರಿ ಬೆಳೆಯುವ ರೃತರಿಗೆ ಕೃಷಿ ಇಲಾಖೆಹಂತ ಹಂತವಾಗಿ ತಜ್ಞರನ್ನು ಗ್ರಾಮಗಳಿಗೆ ಕರೆತಂದು 
ಕ್ಷೇತ್ರ ಬೇಟಿ ಮಾಡಿಸಿ ರೈತರಿಗೆ ಮಾರ್ಗದರ್ಶನ ನೀಡಲಾಗುವುದು. ಎಂದರು.ನಂತರ ಬಿಳಿಚೋಡು ಪರಿಕರ ಮಾರಾಟ ಮಳಿಗೆಗಳನ್ನು ಬೇಟಿ ನೀಡಿ  ಗುಣಮಟ್ಟವನ್ನು ಖಾತರಿಗಾಗಿ ಪ್ರಯೀಗಾಲಯಕ್ಕೆ ಕಳುಹಿಸಲು ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ವಿತರಣೆ ಕುರಿತು ಪರಿಶೀಲಿಸಿ, ಬೀಜ ಮತ್ತು ರಸಗೊಬ್ಬರ ಮಾದರಿ ಗಳನ್ನು ಶೇಖರಣೆ ಮಾಡಿದರು.ಪ್ರಚಾರದ ಸಮಯದಲ್ಲಿ ಸಹಾಯ ನಿರ್ದೇಶಕ
ಶ್ರೀನಿವಾಸುಲು, ಹರ್ಷ, ರೇಣುಕುಮಾರ್ ಇದ್ದರು.