ಜಗಳೂರು; ಖರೀದಿಗೆ ಮುಗಿಬಿದ್ದ ಜನರು

ಜಗಳೂರು.ಮೇ.೨೭; ಪಟ್ಟಣದ ಹಳೆ ಮಹಾತ್ಮ ಗಾಂಧೀಜಿ ವೃತ್ತದಲ್ಲಿನ ಎರಡು ರಸ್ತೆ ಬದಿಯಲ್ಲಿ ಹಣ್ಣಿನ ಗಾಡಿಗಳ ಮುಂದೆ ಸಾಮಾಜಿಕ ಅಂತರವೇ ಇಲ್ಲ ಖರೀದಿಗೆ  ಮುಗಿಬಿದ್ದ ಜನ ಕೋವಿಡ್ -19  ವೈರಸ್ ನಿಯಂತ್ರಣಕ್ಕೆ ತರಲು 
ರಾಜ್ಯ ಸರ್ಕಾರ ಅನೇಕ ರೀತಿಯ ಒಂದಲ್ಲ ಒಂದು ಕಸರತ್ತು ನಡೆಸಿದರು ಜಗಳೂರು ಪಟ್ಟಣದಲ್ಲಿ ಕೋವಿಡ್  ಸೋಂಕು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾಡಿದರೂ ಜನರು ಗುಂಪು ಗುಂಪಾಗಿ ಸೇರುವುದು ಮಾತ್ರ ಜಗಳೂರು ಪಟ್ಟಣದಲ್ಲಿ ತಪ್ಪಿಲ್ಲ  ಪಟ್ಟಣದ ಪ್ರಮುಖ ರಸ್ತೆಗಳ ಆದ  ದಾವಣಗೆರೆ ಮುಖ್ಯ ರಸ್ತೆ ಎರಡು ಬದಿ ಮತ್ತು  ಮರೆನಹಳ್ಳಿ ರಸ್ತೆ ಸೇರಿದಂತೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳು ಮತ್ತು ಹಣ್ಣು ತರಕಾರಿ  ಖರೀದಿಸಲು ಗುಂಪು ಗುಂಪಾಗಿ ಸೇರಿ ಖರೀದಿಸುವ ದೃಶ್ಯಗಳು ಕಂಡು ಬಂದಿದೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಕೆಲವೊಬ್ಬರು ಮುಖಕ್ಕೆ ಮಾಸ್ಕ್ ಹಾಕದೆ  ಸಾಮಾಜಿಕ ಇಲ್ಲದೆ ವ್ಯಾಪಾರಿಗಳು ಕೊಡುವಲ್ಲಿ ಮತ್ತು ಜನರು ಖರೀದಿ ಮಾಡುವಲ್ಲಿ ಮಗ್ನರಾಗಿದ್ದರು 
ಸಾರ್ವಜನಿಕರು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳದೆ ಮಾಸ್ಕ್ ಹಾಕದೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಕಿರಾಣಿ. ತರಕಾರಿ ಸೇರಿದಂತೆ ವಿವಿಧ ಅಂಗಡಿಗಳ  ಮಾಲೀಕರು ಸಾರ್ವಜನಿಕರಿಗೆ ಮಾಸ್ಕ್ ಹಾಕಿ ಖರೀದಿಸಲು ಬಂದ ಜನರಿಗೆ ಸೂಚನೆ ನೀಡಬೇಕಾದ ಕರ್ತವ್ಯ ಅಂಗಡಿ ಮಾಲೀಕರ ಮೇಲಿದೆ ಆದರೆ ಕೋವಿಡ್ ನಿಯಮಗಳನ್ನು ಅಂಗಡಿಯ ಮಾಲೀಕರು ಮತ್ತು ಸಾರ್ವಜನಿಕರು  ಉಲ್ಲಂಘನೆ ಮಾಡುತ್ತಿದ್ದಾರೆ 

ಕೆಲವೊಂದು ಹಣ್ಣಿನ ಮತ್ತು ತರಕಾರಿ ಕಿರಣಿ ವ್ಯಾಪಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ನೀಡಿದರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ