ಜಗಳೂರು ಕ್ಷೇತ್ರದ ವಿವಿಧೆಡೆ ಗಾಯತ್ರಿ ಸಿದ್ದೇಶ್ವರ್ ಅಬ್ಬರದ ಪ್ರಚಾರ

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.17 : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್  ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ, ಬಸವನಕೋಟೆ, ಗುರುಸಿದ್ದಾಪುರ, ಮಡ್ರಳ್ಳಿ, ಸೊಕ್ಕೆ, ಗ್ರಾಮದಲ್ಲಿ ಅಬ್ಬರದ ಪ್ರಚಾರ ನಡೆಸಿದರು.ಈ ವೇಳೆ ಗ್ರಾಮಸ್ಥರು ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದರು ನಂತರ ಗ್ರಾಮದಲ್ಲಿ ಅದ್ದೂರಿ ಮೆರೆವಣಿಗೆ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕರಾದ ರಾಮಚಂದ್ರಪ್ಪ ಎಚ್.ಪಿ ರಾಜೇಶ್, ಬಿಜೆಪಿ ಯುವ ಮುಖಂಡರಾದ ಅನಿತ್ ಕುಮಾರ್ ಜಿ.ಎಸ್, ಪಲ್ಲಗಟ್ಟಿ ಮಹೇಶ್ ಕೆಂಚಮನಹಳ್ಳಿ ಮಂಜಣ್ಣ. ಬಿದಕೆರೆ ರವಿ ಕುಮಾರ್,ಅರಸೀಕೆರೆ ದ್ಯಾಮೇಗೌಡ್ರು, ಜೆಡಿಎಸ್ ಪಕ್ಷದ ನಾಯಕ ಕಲ್ಲೆರುದ್ರಶ್, ಇಂದಿರಾರಾಮಚಂದ್ರ, ಸೊಕ್ಕೆ ನಾಗರಾಜ್, ಮಂಜುನಾಥ್, ಲಿಂಗರಾಜ್ ಪಣಿಯಪುರ, ಗ್ಯಾರಿಳಿ ಶಿವಣ್ಣ ಶಾಮನೂರು, ಜಯಮ್ಮ, ಜಂಬನಗೌಡ ಹಾಗೂ  ಜೆಡಿಎಸ್ ಪಕ್ಷದ ಮುಖಂಡರು ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು,ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಜಗಳೂರು ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು