ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ದ

ಜಗಳೂರು.ಸೆ.೨೬; ವಿಧಾನಸಭಾಕ್ಷೇತ್ರದಲ್ಲಿ 17 ಕೋಟಿ ರಸ್ತೆ ಅಭಿವೃದ್ಧಿ, 1200 ಕೋಟಿ ಭದ್ರಾಯೋಜನೆ, 57 ಕೆರೆಗಳಿಗೆ 640 ಕೋಟಿ, ಗ್ರಾಮೀಣ ಭಾಗದ ಹಳ್ಳಿಗಳಿಗೆ ಕುಡಿಯುವ ನೀರಿಗೆ 270 ಕೋಟಿ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಹಣ ಬಿಡುಗಡೆ ಮಾಡಿದ್ದರು ಎಂದು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ವಾಲ್ಮಿಕಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ 105 ನೇ ಜನ್ಮ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.57 ಕೆರೆಗಳಿಗೆ ನೀರು ಒದಗಿಸುವ ಯೋಜನೆಗೆ ಹಣ ಬಿಡುಗಡೆ ಸಂಬಂಧ ಸಿರಿಗೆರೆ ಶ್ರೀಗಳ ನುಡಿಯಂತೆ ನಾನು ಹಾಗೂ ಹೊಳಲ್ಕೇರಿ ಶಾಸಕ ಚಂದ್ರಪ್ಪ ರಾಜಿನಾಮೆ ನೀಡಲು ರೆಡಿಯಾಗಿದ್ದೆವು. ಆದರು ನಾವು ಎಲ್ಲಿ ಹೇಳಿಕೊಂಡಿಲ್ಲ. ಶ್ರೀಗಳ ಇಚ್ಚೆಯಂತೆ ಕ್ಷೇತ್ರಕ್ಕೆ ನೀರು ತರಲು ಏನು ಬೇಕು ಅದನ್ನು ನಾನು ಶಾಸಕನಾಗಿ ಮಾಡಿದ್ದೇನೆ. ಕೆಲವರು ಕೆರೆ ನೀರು ತುಂಬಿಸುವ ಯೋಜನೆಯಲ್ಲಿ ಶಾಸಕರ ಪಾತ್ರ ಶ್ಯೂನ್ಯ, ಅಭಿವೃದ್ಧಿನೇ ಮಾಡಿಲ್ಲ ಅಂತಾರೆ. ನಾನು ಏನು ಮಾಡಿದ್ದೇನೆೆ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೆಸರೇಳದೇ ಇದೇ ಸಂದರ್ಭದಲ್ಲಿ ಟಾಂಗ್ ನೀಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಚಿತವಾಗಿ ಜನರಿಗೆ ಕೋವಿಡ್ ಲಸಿಕೆ ನಿಡುವ ಮೂಲಕ ಜನರ ರಕ್ಷಣೆಗೆ ನಿಂತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪನವರು ಸಿ.ಎಂ.ಆದಾಗ ನೀರಾವರಿ ಸೇರಿದಂತೆ ಅನೇಕ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ್ದರು .ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅದೇ ದಿಕ್ಕಿನಲ್ಲಿ ಹೆಚ್ಚೆ ಇಟ್ಟಿದ್ದು ದೊಣೆಹಳ್ಳಿ, ದೇವಿಕೆರೆ, ಬಿದರಕೆರೆ ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಯೋಜನೆಗೆ ಆಯ್ಕೆ ಮಾಡಿ ಅಭಿವೃದ್ಧಿಗೆ ಮುನ್ನುಡಿ ಬರೆಯಲಿವೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ನಮ್ಮಕ್ಷೇತ್ರದಲ್ಲೂ ಜಿಲ್ಲಾ,ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೇಸ್ ಪಕ್ಷ ಗೆದ್ದಿದೆ ಎಂಬ ಭ್ರಮೆಯಲ್ಲಿದೆ. ಆ ಭ್ರಮೆಯನ್ನು ಮತದಾರರು ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಹೋಗಳಾಡಿಸಲಿದ್ದಾರೆ ಎಂದರು. ಮಂಡಲ ಬಿಜೆಪಿ ಅಧ್ಯಕ್ಷ ಹೆಚ್.ಸಿ.ಮಹೇಶ್ ಮಾತನಾಡಿ ಶಾಸಕ ಎಸ್.ವಿ. ರಾಮಚಂದ್ರ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಸದಾ ಹುಮ್ಮಸ್ಸಿನಲ್ಲಿ ಮುಂಭರಲಿರುವ ಜಿ.ಪಂ.,ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರು ನರೇಂದ್ರ ಮೋದಿ, ರಾಜ್ಯಾ ಹಾಗೂ ಕ್ಷೇತ್ರದಲ್ಲಿ ಆಗಿರವ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ಮುಟ್ಟಿಸುವಂತ ಕೆಲಸ ಮಾಡುವ ಮೂಲಕ ಜಿ.ಪಂ., ತಾಲ್ಲುಕು ಪಂಚಾಯಿತಿ ಬಿಜೆಪಿ ಅಭ್ಯರ್ಥಿಗೆಲ್ಲಿಸಲು ಹುಮ್ಮಸ್ಸಿನಿಂದಿದ್ದಾರೆ. ಶಾಸಕರು ಸಹ ಕಾಯ್ಕರ್ತರ ಸಮಸ್ಯೆಗಳಿಗೆ ದ್ವನಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಮಾಜಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದೇಶ್, ಮಾಜಿ ತಾ.ಪಂ.ಅಧ್ಯಕ್ಷ ಬಿ.ಆರ್.ಅಂಜಿನಪ್ಪ, ದೇವಿಕೆರೆ ಶಿವಕುಮಾರ್‌ಸ್ವಾಮಿ, ಪ.ಪಂ.ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಮ್ಮ ಸೇರಿದಂತೆ ಇತರರು ಹಾಜರಿದ್ದರು.