ಜಗಳೂರು ಕ್ಲಬ್ ವತಿಯಿಂದ ಪುಡ್ ಮಿಲ್ಸ್ ವಿತರಣೆ

ಜಗಳೂರು.ಜೂ.೧೧: ಪೌರ ಕಾರ್ಮಿಕರು ಕೊರೋನ ವಾರಿಯರ್ಸ್  ನಿಮ್ಮ ಸೇವೆ  ಎಲ್ಲಾ ಸೇವೆಗಳಿಗಿಂತ ಪ್ರಮುಖವಾದ ಸೇವೆ ಎಂದು ಲಯನ್ಸ್  ಕ್ಲಬ್ ಸಂಸ್ಥಾಪಕ  ಜೆ.ಕೆ.ಹುಸೇನ್ ಮಿಯ್ಯ ಹೇಳೀದರು.ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರಸೇವಾ ಕಾರ್ಮಿಕರಿಗೆ ಲಯನ್ಸ ಕ್ಲಬ್ ವತಿಯಿಂದ  ಪುಡ್  ಮಿಲ್ಸ್  ವಿತರಿಸಿ ಮಾತನಾಡಿದರು  ಪ್ರತಿದಿನ  ಮುಂಜಾನೆ ಪಟ್ಟಣವನ್ನ ಸ್ವಚ್ಚಗೊಳಿಸುವ ಮೂಲಕ  ಪೌರ ಕಾರ್ಮಿಕರು ಕರೋನ ವಾರಿಯರ್ಸ್  ನಿಜವಾದ ಶ್ರಮಜೀವಿಗಳು ನೀವು ನಿಮ್ಮ  ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟರಿ ಬಳಸಿ ಎಂದು ಸಲಹೆ ನೀಡಿದರು.ಲಯನ್ಸ್  ಕ್ಲಬ್ ಅಧ್ಯಕ್ಷೆ ಷಾಹೀನ್ ಬೇಗಂ ಮಾತನಾಡಿ ಪೌರಕಾರ್ಮಿಕರು ಇಂದು ಕೊರೋನ ಸಮಯದಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೇ ನೀವು ಮಾಡುತ್ತಿರುವ ಸೇವೆ ಯಾರೂ ಮಾಡಲು ಸಾಧ್ಯವಿಲ್ಲ, ನಿಮ್ಮ ಸೇವೆಗೆ ನಮ್ಮ ಅನಂತ ಧನ್ಯವಾದಗಳು ಎಂದರು.ಪಟ್ಟಣಪಂಚಾಯಿತಿ  ಕಂದಾಯ ನಿರೀಕ್ಷಕರು ಸಂತೋಷ ಕುಮಾರು , ಆರೋಗ್ಯಾಧಿಕಾರಿ ಕಿಫಾಯತ್ ಅಹಮದ್ ,  ಮೊಯಿದ್ದೀನ್,  ಪ.ಪಂ. ಸದಸ್ಯರಾದ ನವೀನ್  ಕುಮಾರ್,  ಕ.ರವೇ ತಾಲ್ಲೂಕು ಅಧ್ಯಕ್ಷ ವೈ.ಮಹಾಂತೇಶ್,   ಲಯನ್ಸ್  ಕ್ಲಬ್ ನ ಕಾರ್ಯದರ್ಶಿ  ಮನಿಲಾಲ್, ಲಯನ್ಸ್  ಕ್ಲಬ್ ಸದಸ್ಯರಾದ ಜಗದೀಶ್ ಗೌಡ್ರು, ರೇಖಾ, ಫರ್ಜಾನಾ ಬಾನು,ವಾಣಿ, ಸುಜಾತಮ್ಮ, ಸೈಯದ್ ವಾಸೀಮ್, ಮಂಜುಳಾ, ಮಹಮ್ಮದ್ ಅಬ್ದುಲ್ ರಜೀಭ್, ವೇದಾ, ತಿಪ್ಪೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.