ಜಗಳೂರು: ಇಂದಿನಿಂದ ಎರಡು ದಿನ ಭೋವಿ ಶ್ರೀಗಳ ಪ್ರವಾಸ

ಜಗಳೂರು.ಜು.೧೫; ದಾವಣಗೆರೆ ಸಿದ್ದರಾಮೇಶ್ವರ ರಥೋತ್ಸವದ 60ನೇ ವರ್ಷಾಚರಣೆ ಹಾಗೂ ಭೋವಿ ಸಮಾಜದ ಸಂಘಟನೆ ಅಂಗವಾಗಿ ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಜಗಳೂರು ತಾಲ್ಲೂಕಿನಲ್ಲಿ ಜೂನ್ 15ರಿಂದ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಳ್ಳಲಾಗಿದೆ.ಆಗಸ್ಟ್ 1 ರಂದು ದಾವಣಗೆರೆ ನಗರದಲ್ಲಿ ಸಿದ್ದರಾಮೇಶ್ವರ ಸ್ವಾಮಿಯ 60ನೇ ವರ್ಷದ ರಥೋತ್ಸವ ಜರುಗಲಿದೆ. ರಾಜ್ಯದ ವಿವಿಧ ಭಾಗಗಳಿಂದ ಭೋವಿ ಸಮಾಜವರು ದೊಡ್ಡ ಪ್ರಮಾಣದಲ್ಲಿ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಥೋತ್ಸವ ಹಾಗೂ ಭೋವಿ ಸಮಾಜದ ಸಂಘಟನೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹಳ್ಳಿಹಳ್ಳಿಗಳಲ್ಲಿ ಪ್ರವಾಸ ಕೈಗೊಂಡು ಸಮಾಜವನ್ನು ಸಂಘಟಿಸಲಾಗುತ್ತದೆ ಎಂದು ತಾಲ್ಲೂಕು ಭೋವಿ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಪಟ್ಟಣಕ್ಕೆ ಭೇಟಿ ನೀಡಲಿರುವ ಸ್ವಾಮೀಜಿ ಹಾಗೂ ತಾಲ್ಲೂಕು ಭೋವಿ ಸಮಾಜದ ಮುಖಂಡರು ತಾಲ್ಲೂಕಿನ 40ಕ್ಕೂ ಹಳ್ಳಿಗಳಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಸ್ವಾಮೀಜಿ ನೇತೃತ್ವದಲ್ಲಿ ತಾಲ್ಲೂಕು ಭೊವಿ ಸಮಾಜದ ಮುಖಂಡರು ಮತ್ತು ಪದಾಧಿಕಾರಿಗಳು ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 
Attachments areaReplyForward