ಜಗಳೂರುಕ್ಷೇತ್ರದಲ್ಲಿ ಬಿಜೆಪಿಯ ಭರವಸೆ ಮಾತುಗಳು ಹುಸಿಯಾಗಿದೆ


ಜಗಳೂರು.ನ.೧೮; ಕ್ಷೇತ್ರದಲ್ಲಿ ಬಿಜೆಪಿಯ ಭರವಸೆ ಮಾತುಗಳು ಹುಸಿಯಾಗಿದ್ದು ಸ್ಥಳೀಯ ಮುಖಂಡರು ರೋಸಿದ್ದು ಬಣ್ಣದ ಮಾತುಗಳಿಗೆ ಬಲಿಯಾಗದೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಮುಂಬರುವ ದಿನಗಳಲ್ಲಿ ಅರಸೀಕೆರೆ ಹೋಬಳಿ ಸೇರಿದಂತೆ ತಾಲ್ಲುಕಿನ ಹಲವು ಮುಖಂಡರ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಶಾಸಕರಾದ ಹೆಚ್.ಪಿ ರಾಜೇಶ್ ಹೇಳಿದರು.


ತಾಲ್ಲೂಕಿನ ಬಿದರಿಕೆರೆ ಗ್ರಾಮದ ತಮ್ಮ ತೋಟದ ಕಚೇರಿಯಲ್ಲಿ ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಬತ್ತಳ್ಳಿ ಮಂಜಣ್ಣ ನೇತೃತ್ವದಲ್ಲಿ ಬಿಜೆಪಿ ಕಾರ್ಯ ಕರ್ತರನ್ನ ಕಾಂಗ್ರೆಸ್ ಬಾವುಟ ನೀಡಿ ಸ್ವಾಗತಿಸಿ ಮಾತನಾಡಿದರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಎಸ್ಸಿ.ಎಸ್ಟಿ ಒಬಿಸಿ ಸೇರಿದಂತೆ ಎಲ್ಲಾ ವರ್ಗದ ಜನರನ್ನ ಸಮಾನವಾಗಿ ಕೊಂಡೊಯ್ಯುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ವಾಗಿದೆ ಆದರೆ ಬಿಜೆಪಿ ಅದಿಕಾರಕ್ಕಾಗಿ ದಲಿತರನ್ನ ಬಳಸಿಕೊಂಡು ನಡು ನೀರಿನಲ್ಲು ಬಿಡುತ್ತದೆ ಇಂತವುಗಳಿಂದ ಎಚ್ಚರಿಕೆ ಯಿಂದ ಇರಬೇಕು ಎಂದರು ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮತ್ತಳ್ಳಿ ಮಂಜುನಾಥ್ ಮಾತನಾಡಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಅವದಿಯಲ್ಲಿ ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ಅವರು ಹೋಬಳಿ ವ್ಯಾಪ್ತಿಯ ೭ ಪಂಚಾಯಿತಿಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿ ಸಿ.ಸಿ.ರಸ್ತೆ.ಶುದ್ದಕುಡಿಯುವ ನೀರಿನ ಘಟಕ ಗ್ರಾಮೀಣ ರಸ್ತೆಗಳು ವಸತಿ ಸೌಲಭ್ಯ ಜಮೀನು ಮಂಜೂರು ಗ್ರಾಮ ವಿಕಾಸ ಸೇರಿದಂತೆ ಹಲವು ಅಬಿವೃದ್ದಿ ಕಾರ್ಯಗಳು ನೆಡೆದಿವೆ ಅದು ಇಂದಿಗೂ ಕಣ್ಣಿಗೆ ಕಾಣುತ್ತಿವೆ ಆದರೆ ಬಿಜೆಪಿ ಸರ್ಕಾರ ಬಂದನಂತರ ಇಲ್ಲಿನ ಶಾಸಕರು ಅರಸೀಕೆರೆ ಬ್ಲಾಕ್ ಅಬಿವೃದ್ದಿ ಎಷ್ಟು ಅನುದಾನ ನೀಡಿದ್ದಾರೆ ಏನು ಅಬಿವೃದ್ದಿ ಮಾಡಿದ್ದಾರೆ ಎಂಬುದು ತೋರಿಸಲಿ ಎರಡು ವರೆ ವರ್ಷ ಕಳೆದರು ಅಬಿವೃದ್ದಿ ಎನ್ನುವುದು ಮರಿಚಿಕೆ ಆಗಿದೆ.

ಆದ್ದರಿಂದ ಹಲವು ಬಿಜೆಪಿ ಮುಖಂಡರು ಬೇಸತ್ತು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರ ಕೈ ಬಲ ಪಡಿಸಲು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಮುಂದಿನ ದಿನಗಳಲ್ಲಿ ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದರು ಈ ವೇಳೆ ಮಾಜಿ ತಾಲ್ಲೂಕ್ ಪಂಚಾಯತಿ ಉಪಾಧ್ಯಕ್ಷರು ಅರಿಸೀಕೆರೆ ಬ್ಲಾಕ್ ಹಾಲಿ ಬಿ.ಜೆ.ಪಿ. ಎಸ್.ಸಿ ಯುವ ಮೋರ್ಚಾ ಅಧ್ಯಕ್ಷರಾದ ಕಂಬತ್ತಳ್ಳಿ ಎ ಕೆ ಜಯಪ್ಪ ಶ್ರೀನಿವಾಸ್ ನಾಯ್ಕ್ . ಚಂದ್ರಪ್ಪ.ಎ ಕೆ ಹನುಮತಪ್ಪ.ಜಗದೀಶ .ಬಸಪ್ಪ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಸ್.ಸಿ ಘಟಕದ ಅಧ್ಯಕ್ಷರಾದ ಹನುಮತಪ್ಪ. ಜಿಲ್ಲಾ ಪಂಚಾಯತ್ ಸದಸ್ಯರಾದ ಉಮಾ ವೆಂಕಟೇಶ್. ಎಸ್ ಟಿ ಘಟಕದ ಅಧ್ಯಕ್ಷರಾದ ಮಂಜಣ್ಣ. ಗ್ರಾ.ಪಂ ಮಾಜಿ ಅಧ್ಯಕ್ಷರಾದ ಹನುಮತಪ್ಪ ಚನ್ನಾಪುರ. ಹನುಮನಾಯ್ಕ್ ಗ್ರಾ.ಪಂ.ಸದಸ್ಯರು ಚನ್ನಾಪುರ. ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಮಹದೇವಪ್ಪ. ಶೇಖರ್ ನಾಯ್ಕ್. ಪರಮೇಶ್ ಮಾಜಿ ಗ್ರಾ.ಪಾ. ಸದಸ್ಯರಾದ ತಿಪ್ಪಣ್ಣ. ಎಸ್ ಶಿವಾನಂದಪ್ಪ ಪಿ ಸಿದ್ದೇಶ್. ಕೆ ಹನುಮತಪ್ಪ ಹರೀಶ್ ಪಟೇಲ್ ಹಾಗೂ ಅರಿಸೀಕೆರೆ ಬ್ಲಾಕ್ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರು ಉಪಾಧ್ಯರು ಇದ್ದರು.