ಜಗಳೂರಿನಲ್ಲಿ ಸ್ವಚ್ಚತಾ ಆಂದೋಲನಕ್ಕೆ ಚಾಲನೆ


ಜಗಳೂರು.ನ.೧೮; ಪಟ್ಟಣ ವಿವಿಧ ಬಡಾವಣೆಗಳಲ್ಲಿ ಶಾಲಾ ಕಾಲೇಜು ಆವರಣಗಳಲ್ಲಿ ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಗಿಡಗಳನ್ನು. ಕಸವನ್ನು ತೆಗೆಸುವುದರ ಮೂಲಕ ಸ್ವಚ್ಚ ಜಗಳೂರು ಆಂದೋಲನಕ್ಕೆ ನೂತನ ಅಧ್ಯಕ್ಷರಾದ ಎಂ.ಎಲ್.ಎ ತಿಪ್ಪೇಸ್ವಾಮಿ ಚಾಲನೆ ನೀಡಿದರು. ಸುಮಾರು ವರ್ಷಗಳು ಕಳೆದರು ಯಾರು ಸಹ ವಿವಿಧ ಬಡಾವಣೆಗಳಲ್ಲಿ ಶಾಲಾ ಕಾಲೇಜಗಳ ಆವರಣಗಳಲ್ಲಿ. ರಸ್ತೆ ಬದಿಗಳಲ್ಲಿ ಕಸ ಬಿದ್ದಿದ್ದರು ಸ್ವಚ್ಚತೆ ಮಾಡುವ ಕಾರ್ಯಕ್ಕೆ ಯಾರು ಮುಂದಾಗದೆ ಪಟ್ಟಣ ಸ್ವಚ್ಚತೆಯಲ್ಲಿ ನಗಣ್ಯವಾಗಿತ್ತು ಇಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ತಿಪ್ಪಣ್ಣನವರು ಈ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಸಂತಸ ತಂದಿದೆ ಎಂದು ಮಾಜಿ ಪ,ಪ, ಉಪಾಧ್ಯಕ್ಷರಾದ ಚಂದ್ರಪ್ಪ ಹೂವಿನಹಾರ ಹಾಕಿ ಗೌರವ ಸೂಚಿಸುವುದರ ಜೊತೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎಂ.ಎಲ್ ತಿಪ್ಪೇಸ್ವಾಮಿ ಮಾತನಾಡಿ ನಾನು ಅಧಿಕಾರದಲ್ಲಿರುವವರೆಗೆ ಪಟ್ಟಣದ ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರ ಜೊತೆಗೆ ಎಲ್ಲಾರ ಸಹಕಾರದಿಂದ ಉತ್ತಮ ಆಡಳಿತ ನೀಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜ್ ಬಣಕಾರ್ ಬಿಜೆಪಿ ಮುಖಂಡರಾದ ಓಬಳೇಶ್ ಕ್ಯಾಂಪ್ ಸ್ಲಂಮೊರ್ಚ ಅಧ್ಯಕ್ಷರಾದ ಓಬಣ್ಣ , ರಮೇಶ್ ಕ್ಯಾಂಪ್ ಆರೋಗ್ಯ ನಿರೀಕ್ಷರಾದ ಅಮ್ರರಿನ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.