ಜಗಳೂರಿನಲ್ಲಿ ಸಂಘಟನೆಗೆ ಬಲ ತುಂಬಲು ಕಾಂಗ್ರೆಸ್ ಗೆ ಸೇರ್ಪಡೆ

ಜಗಳೂರು.ನ.೧೦; ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಷರತ್ತು ರಹಿತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಕ್ತ ಅವಕಾಶವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದರು.ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಅವರು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ತಾಲೂಕಿನ ಜೆ.ಡಿ.ಎಸ್. ಪಕ್ಷದ 62 ಜನ ಕಾಂಗ್ರೆಸ್ ಪಕ್ಷ  ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಶಾಲು ಹಾಕಿ ಅಧಿಕೃತವಾಗಿ ಆಹ್ವಾನಿಸಿ ಮಾತನಾಡಿದರು.ಬಹಳ ದಿನಗಳ ದಿಂದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ  ಮಾಜಿ ಶಾಸಕ ಎಚ್.ಪಿ.ರಾಜೇಶ್,ಹಾಗೂ ಸ್ಥಳಿಯ ನಾಯಕರ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ಕೆ.ಪಿ.ಸಿ.ಸಿ ನಾಯಕರ ಮಧ್ಯೆ ಸಮಾಲೋಚನೆ ನಡೆಸಿ ಷರತ್ತುರಹಿತವಾಗಿ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಅವರನ್ನು ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ
ರಾಜ್ಯದ ಪ್ರತಿ ಜಿಲ್ಲೆಗಳಲ್ಲಿನ ಜನಪ್ರತಿನಿಧಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಸದಸ್ಯತ್ವ ಪಡೆಯಲು ಸದಸ್ಯತ್ವ ಮರು ನವೀಕರಣ ಗೊಳಿಸಲು ಹಾಗೂ  ಯಾವುದೇ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲು ನವೆಂಬರ್ 14 ರಂದು ಪಂಡಿತ್  ಜವಾಹರ್ ಲಾಲ್ ನೆಹರು ಜನ್ಮದಿನದಂದು ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅರಮನೆ ಮೈದಾನದಲ್ಲಿ  ಚಾಲನೆ ನೀಡಲಾಗುವುದು.ಬೆಳಿಗ್ಗೆ 10.30 ಕ್ಕೆ ರಾಜ್ಯದ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಿದರು.ಸದಸ್ಯತ್ವ ಪಡೆಯಲು 5 ರೂಪಾಯಿ ಭರಿಸಿ ಆನ್ ಲೈನ್ ಅಥವಾ ಆಫ್ ಲೈನ್ ಮುಖಾಂತರ ಸದಸ್ಯತ್ವ ಪಡೆಯಬಹುದು.ಸಕ್ರಿಯ ಕಾರ್ಯಕರ್ತರು ಒಂದು ಸದಸ್ಯತ್ವ ಪುಸ್ತಕ ಪಡೆದು ಸದಸ್ಯತ್ವ ನೊಂದಣಿ ಮಾಡಿಸಬೇಕು ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸವಾಗಿದ್ದು. ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಯಿಡುವ ಪ್ರತಿಯೊಬ್ಬರೂ ಸೇರ್ಪಡೆಯಾಗಬಹುದು.ಷರತ್ತುರಹಿತವಾಗಿ ಸದಸ್ಯತ್ವ ಪಡೆಯಲು ಅಲ್ಲಂ ವೀರಭದ್ರಪ್ಪ ಅವರ ಸಮಿತಿ ನೇತೃತ್ವದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ನೂತನವಾಗಿ ಸೇರ್ಪಡೆಗೊಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ,ಪಕ್ಷ ಸಿದ್ದಾಂತಗಳಿಗೆ ಒಪ್ಪಿ ಯಾವುದೇ ಷರತ್ತುಗಳಿಲ್ಲದೆ ಸ್ವಯಂಪ್ರೇರಿತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು ಬಹುದಿನದ ಕನಸ್ಸು ಸಂತಸ ತಂದಿದೆ.ಪಕ್ಷದ ವರಿಷ್ಠರ ಸಲಹೆಯಂತೆ ಸ್ಥಳಿಯ ನಾಯಕರ ಒಡಗೂಡಿ ಪಕ್ಷ ಸಂಘಟನೆಗೊಳಿಸಿ  ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಂಪೂರ್ಣ ವಾಗಿ ಬೆಂಬಲಿಸಿ ಪಕ್ಷದ ಗೆಲುವಿಗೆ ಶ್ರಮಿಸುವೆಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್,ಜಗಳೂರಿನ ಮಾಜಿ ಶಾಸಕ ಎಚ್.ಪಿ.ರಾಜೇಶ್,ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಅಸಗೋಡು ಜಯಂಸಿಹ,ಕೆ.ಪಿ.ಸಿ.ಸಿ ಎಸ್.ಟಿ ವಿಭಾಗದ ಅಧ್ಯಕ್ಷ ಕೆ.ಪಿ ಪಾಲಯ್ಯ,ಬ್ಲಾಕ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್ ಜಗಳೂರು ಬ್ಲಾಕ್ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್. ಅರಸೀಕೆರೆ ಬ್ಲಾಕ್ ಅಧ್ಯಕ್ಷ ಎಸ್.ಮಂಜಣ್ಣ ಮಾಜಿ ಚೇರ್ಮನ್ , ಸಯ್ಯದ್ ಅಹಮ್ಮದ್  ಡಿ.ಕೆ ಬಸವರಾಜ್ ,ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.